ಚಿತ್ರಗಳ ಯಶಸ್ವಿ ಪ್ರದರ್ಶನ; ತಮ್ಮ ಚಿತ್ರ ಮುಂದಕ್ಕೆ ಹಾಕಿದ Sai Prakash

september 10

ಹಿರಿಯ ನಿರ್ದೇಶಕ ಸಾಯಿಪ್ರಕಾಶ್‍ (Sai Prakash) ಅವರು ‘ಸೆಪ್ಟೆಂಬರ್ 10’ ಚಿತ್ರವನ್ನು ನಿರ್ದೇಶಿಸಿರುವುದು ಗೊತ್ತೇ ಇದೆ. ಈ ಚಿತ್ರವನ್ನು ಅವರು ಆಗಸ್ಟ್ 08ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಬೇಕು ಎಂದು ಮುಂದಾಗಿದ್ದರು. ಇದೀಗ ಅವರು ಈ ಚಿತ್ರವನ್ನು ಒಂದು ತಿಂಗಳು ಮುಂದಕ್ಕೆ ಹಾಕಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ? ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದು.

ಈ ಕುರಿತು ಮಾತನಾಡಿರುವ ಸಾಯಿಪ್ರಕಾಶ್‍, ‘ಇಷ್ಟು ದಿನ ನಾವು ಕನ್ನಡ ಚಿತ್ರಗಳಿಗೆ ಜನ ಬರುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದೆವು. ಭಗವಂತನ ಆಶೀರ್ವಾದದಿಂದ ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ‘ಎಕ್ಕ’, ‘ಜೂನಿಯರ್’ ಮತ್ತು ‘ಸು ಫ್ರಮ್‍ ಸೋ’ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಆಗಸ್ಟ್ 08ರಂದು ನನ್ನ ನಿರ್ದೇಶನದ ‘ಸೆಪ್ಟೆಂಬರ್ 10’ ಚಿತ್ರ ಬಿಡುಗಡೆ ಮಾಡಬೇಕು ಎಂದು ಹಲವು ಚಿತ್ರಮಂದಿರಗಳನ್ನು ಬುಕ್‍ ಮಾಡಿದ್ದೆ. ಆದರೆ, ಹಲವರು ಫೋನ್‍ ಮಾಡಿ, ಚಿತ್ರಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿರುವುದರಿಂದ ಚಿತ್ರಮಂದಿರಗಳನ್ನು ಕೊಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ನಾನು ಚಿತ್ರವನ್ನು ಮುಂದೂಡಿ ಸೆಪ್ಟೆಂಬರ್ ಮೊದಲ ವಾರ ಬಿಡುಗಡೆ ಮಾಡುತ್ತಿದ್ದೇನೆ. ಬೇರೆ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ, ಆ ಚಿತ್ರಮಂದಿರಗಳನ್ನು ಕೊಡಿ ಎಂದು ಕೇಳುವುದು ಸೌಜನ್ಯವಲ್ಲ. ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣಬೇಕು ಎಂದು ಆಸೆಪಟ್ಟವನು ನಾನೂ ಒಬ್ಬ. ಹಾಗಾಗಿ, ಚಿತ್ರವನ್ನು ಮುಂದೂಡುತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ಸೆಪ್ಟೆಂಬರ್ 10’ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ. ಚಿತ್ರಕ್ಕೆ ‘ಸೆಪ್ಟೆಂಬರ್ 10’ ಎಂಬ ಹೆಸರಿಟ್ಟಿರುವಾಗ, ಚಿತ್ರದ ಕಥೆ ಏನಿರಬಹುದು ಎಂದು ಊಹಿಸುವುದು ಸುಲಭ. ಪ್ರತೀ ದಿನ ನೂರಾರು ಜನ ಕಾರಣಾಂತರಗಳಿಂದ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಅದು ತಪ್ಪು ಎಂದು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ಮಾಡಿದ್ದಾರೆ ಸಾಯಿಪ್ರಕಾಶ್.

ಈ ಚಿತ್ರದ ಕುರಿತು ಮಾತನಾಡುವ ಸಾಯಿಪ್ರಕಾಶ್‍, ‘ಇದು ನನ್ನ ನಿರ್ದೇಶನದ 105ನೇ ಚಿತ್ರ. ದುಃಖ, ನೋವಿನಿಂದ ಯಾರೂ ಹೊರತಲ್ಲ. ಹಾಗಂತ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಅದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಐದು ಕಥೆಗಳಿವೆ. ಬೇರೆಬೇರೆ ಸ್ತರದ ಜನ ಹೇಗೆ ನೋವುಂಡು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾರೆ ಮತ್ತು ಅದರಿಂದ ಹೇಗೆ ಪಾರಾಗುತ್ತಾರೆ ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ. ಇದು ಎಲ್ಲರಿಗೂ ತಲುಪಬೇಕಾದ ಚಿತ್ರ’ ಎಂದರು.

‘ಸೆಪ್ಟೆಂಬರ್ 08’ ಚಿತ್ರದಲ್ಲಿ ಶಶಿಕುಮಾರ್, ಶ್ರೀನಿವಾಸಮೂರ್ತಿ, ರಮೇಶ್‍ ಭಟ್‍, ಗಣೇಶ್ ರಾವ್‍ ಕೇಸರ್ಕರ್ ಮುಂತಾದ ಹಲವರು ಅಭಿನಯಿಸಿದ್ದಾರೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-


23 thoughts on “ಚಿತ್ರಗಳ ಯಶಸ್ವಿ ಪ್ರದರ್ಶನ; ತಮ್ಮ ಚಿತ್ರ ಮುಂದಕ್ಕೆ ಹಾಕಿದ Sai Prakash

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!