Duniya Vijay; ‘ಮಾರುತ’ನಾದ ವಿಜಯ್‍; ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ

ಶ್ರೇಯಸ್ ಮಂಜು ಮತ್ತು ಬೃಂದಾ ಆಚಾರ್ಯ ಅಭಿನಯದಲ್ಲಿ ಎಸ್‍. ನಾರಾಯಣ್‍, ಎರಡು ವರ್ಷಗಳ ಹಿಂದೆ ಒಂದು ಚಿತ್ರ ಪ್ರಾರಂಭಿಸಿದ್ದರು. ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರವಿದ್ದು, ಆ ಪಾತ್ರದಲ್ಲಿ ದೊಡ್ಡ ನಟರೊಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ, ಮಾತುಕತೆ ನಡೆಯುತ್ತಿದೆ ಎಂದು ನಾರಾಯಣ್‍ ಹೇಳಿದ್ದರು.

ಈಗ ಆ ಚಿತ್ರಕ್ಕೆ ‘ದುನಿಯಾ’ ವಿಜಯ್‍ ಎಂಟ್ರಿಯಾಗಿದೆ. ಅಷ್ಟೇ ಅಲ್ಲ, ಚಿತ್ರಕ್ಕೆ ‘ಮಾರುತ’ ಎಂಬ ಹೆಸರನ್ನೂ ಇಡಲಾಗಿದೆ. ‘ದುನಿಯಾ’ ವಿಜಯ್‍ ಅಭಿನಯದಲ್ಲಿ ಎಸ್‍. ನಾರಾಯಣ್‍ ಇದಕ್ಕೂ ಮೊದಲು ‘ಚಂಡ’ ಹಾಗೂ ‘ದಕ್ಷ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಈಗ ಮೂರನೆಯ ಚಿತ್ರವಾಗಿ, ‘ಮಾರುತ’ ಮೂಡಿಬಂದಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ಜಾರಿಯಲ್ಲಿದೆ.

‘ಮಾರುತ’ ಪ್ರತಿಯೊಬ್ಬರ ಮನೆಯ ಕಥೆ ಎನ್ನುವ ನಾರಾಯಣ್‍, ‘ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲಾ ಅವರಿಸಿಕೊಂಡಿರುವ ಒಂದು ಭೂತದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಸುತ್ತ ಈ ಚಿತ್ರ ಸುತ್ತುತ್ತದೆ’ ಎಂದು ಹೇಳಿದ್ದಾರೆ. ಆ ಪಿಡುಗೇನು ಎಂಬುದನ್ನು ನಾರಾಯಣ್‍ ಹೇಳಿಲ್ಲ. ‘ಭೀಮ’ ಚಿತ್ರದಲ್ಲಿ ವಿಜಯ್‍ ಡ್ರಗ್ಸ್ ವಿರುದ್ಧ ಹೋರಾಡಿದ್ದರು. ‘ಮಾರುತ’ನಾಗಿ ಯಾವುದರ ವಿರುದ್ಧ ಹೋರಾಡುತ್ತಾರೋ ಎಂದು ಕಾದು ನೋಡಬೇಕಿದೆ.

ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಎಸ್. ನಾರಾಯಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್, ದಾಸ್ ಛಾಯಾಗ್ರಹಣವಿದೆ. ಈ ಚಿತ್ರವನ್ನು ಕೆ. ಮಂಜು ಹಾಗೂ ರಮೇಶ್ ಯಾದವ್ ಜೊತೆಯಾಗಿ ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ.

‘ಮಾರುತ’ ಚಿತ್ರದಲ್ಲಿ ವಿಜಯ್, ಶ್ರೇಯಸ್ ಮಂಜು ಜೊತೆಗೆ ಬೃಂದಾ ಆಚಾರ್ಯ, ಸಾಧು ಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಮುಂತಾದವರು ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ವಿ. ರವಿಚಂದ್ರನ್ ಕಾಣಿಸಿಕೊಂಡಿರುವುದು ವಿಶೇಷ.

(The filming of Marutha, directed by S. Narayan and starring Duniya Vijay and Shreyas K. Manju, has successfully concluded with a traditional pumpkin-breaking ritual. Produced by K. Manju and Ramesh Yadav, this content-driven film delves into compelling societal themes.)

Leave a Reply

Your email address will not be published. Required fields are marked *