ಕನಕವತಿಯಾದ Rukmini Vasanth; ‘Kantara Chapter 1 ‘ ಚಿತ್ರದ ಮೊದಲ ನೋಟ ಅನಾವರಣ

Rukmini Vasanth

ರುಕ್ಮಿಣಿ ವಸಂತ್‍ (Rukmini Vasanth) ಅಭಿನಯದ ಎರಡು ಚಿತ್ರಗಳು ಕಳೆದ ತಿಂಗಳು ಬಿಡುಗಡೆಯಾಗಿದ್ದವು. ‘ಭೈರತಿ ರಣಗಲ್‍’ ಮತ್ತು ‘ಬಘೀರ’ ಚಿತ್ರಗಳು ಬ್ಯಾಕ್‍ ಟು ಬ್ಯಾಕ್‍ ಬಿಡುಗಡೆಯಾಗಿದ್ದವು. ಅದಾದ ಮೇಲೆ ರುಕ್ಮಿಣಿ, ಕನ್ನಡಕ್ಕಿಂತ ಪರಭಾಷೆಯ ಚಿತ್ರಗಳಲ್ಲೇ ಹೆಚ್ಚಾಗಿ ಬ್ಯುಸಿಯಾಗಿದ್ದರು. ಕನ್ನಡ ಬಿಟ್ಟು ಪರಭಾಷೆಗಳಲ್ಲಿ ನೆಲೆಯೂರಿದ ಕನ್ನಡತಿಯರ ಸಾಲಿಗೆ ರುಕ್ಮಿಣಿ ವಸಂತ್‍ ಸಹ ಸೇರ್ಪಡೆಯಾಗುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು.

ಹೀಗಿರುವಾಗಲೇ, ರುಕ್ಮಿಣಿ ಸದ್ದಿಲ್ಲದೆ ಇನ್ನೊಂದು ಕನ್ನಡದ ಚಿತ್ರವಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ಕನಕವತಿ’ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ, ಚಿತ್ರತಂಡವು ರುಕ್ಮಿಣಿ ಅವರ ಮೊದಲ ನೋಟವನ್ನು ಅನಾವರಣಗೊಳಿಸಿದೆ.

‘ಕಾಂತಾರ – ಚಾಪ್ಟರ್ 1’ ಚಿತ್ರದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಲೇ ಇತ್ತು. ಆದರೆ, ರುಕ್ಮಿಣಿ ಆಗಲೀ, ಚಿತ್ರತಂಡದವರಾಗಲೀ, ಈ ವಿಷಯವನ್ನು ಖಚಿತಪಡಿಸಿರಲಿಲ್ಲ. ಈಗ ಪೋಸ್ಟರ್ ಬಿಡುಗಡೆಯಾಗುವ ಮೂಲಕ ‘ಕಾಂತಾರ – ಚಾಪ್ಟರ್ 1’ ಚಿತ್ರದಲ್ಲಿ ರುಕ್ಮಿಣಿ ನಟಿಸಿರುವುದು ಖಾತ್ರಿಯಾಗಿದೆ.

ರಿಷಬ್ ಶೆಟ್ಟಿ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಅವರ ಫಸ್ಟ್‌ಲುಕ್ ಮತ್ತು ನಂತರ ಬಂದ ಶೂಟಿಂಗ್ ಮುಕ್ತಾಯದ ವೀಡಿಯೋಗಳು ಈಗಾಗಲೇ ಭಾರೀ ಕುತೂಹಲ ಮೂಡಿಸಿವೆ. ಚಿತ್ರದಲ್ಲಿ ರಿಷಭ್‍ ಶೆಟ್ಟಿ, ರುಕ್ಮಿಣಿ ಅಲ್ಲದೆ, ಅಚ್ಯುತ್‍ ಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕಾಂತಾರ ಚಾಪ್ಟರ್ 1’ ಚಿತ್ರವು ಅಕ್ಟೋಬರ್ 2, 2025 ರಂದು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ಅರವಿಂದ್‍ ಕಶ್ಯಪ್‍ ಛಾಯಾಗ್ರಹಣ ಮತ್ತು ಅಜನೀಶ್‍ ಲೋಕನಾಥ್‍ ಸಂಗೀತವಿದೆ. ಎಸ್‍.ಎಸ್‍. ರಾಜಮೌಳಿ ನಿರ್ದೇಶನನದ ‘RRR’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದವರು ಟೊಡರ್ ಲ್ಯಾಜರೋವ್. ಇದೀಗ ‘ಕಾಂತಾರ’ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ.


ಹೆಚ್ಚಿನ ಓದಿಗಾಗಿ:-


ಹೆಚ್ಚಿನ ಓದಿಗಾಗಿ :-

  1. Получив достаточно быстро трек отправления, Р° РІ качестве курьерки продавцом была выбрана РїРѕРЅРё экспресс, СЏ стал проверять бьется ли трек.…


Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ