Robinhood David Warner’s First Look; ರಾಬಿನ್ಹುಡ್ನ ವಾರ್ನರ್ ಫಸ್ಟ್ ಲುಕ್ ಬಿಡುಗಡೆ

ಟಾಲಿವುಡ್ ನಟ ನಿತಿನ್ ಅಭಿನಯದ ‘ರಾಬಿನ್ಹುಡ್’ (Robinhood ) ಚಿತ್ರದಲ್ಲಿ ಡೇವಿಡ್ ವಾರ್ನರ್ ಅವರು ಅತಿಥಿ ಪಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಹಳೆ ಸುದ್ದಿ, ಈಗ ಚಿತ್ರ ತಂಡ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ತೆಲುಗು ಸಿನಿಮಾದ ಮೂಲಕ ವಾರ್ನರ್ ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.
ವಾರ್ನರ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ‘ಮೈದಾನದಲ್ಲಿ ಮಿಂಚಿದವರು ಬೆಳ್ಳಿ ತೆರೆಯ ಮೇಲೆ ಮಿಂಚುವ ಕಾಲ ಬಂದಿದೆ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ‘ಚಿತ್ರದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆ’ಎಂದು ವಾರ್ನರ್ ಪೋಸ್ಟ್ ಹಂಚಿಕೊಂಡು ಬರೆದಿದ್ದಾರೆ. ‘ರಾಬಿನ್ಹುಡ್’ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶಿಸುತ್ತಿದ್ದು, ‘ಮೈತ್ರಿ ಮೂವಿ ಮೇಕರ್ಸ್’ ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿ ನಾಯಕ ನಿತಿನ್ಗೆ ಜೋಡಿಯಾಗಿ ಕನ್ನಡತಿ ಶ್ರೀ ಲೀಲಾ ನಟಿಸಲಿದ್ದಾರೆ.
‘ಭೀಷ್ಮಾ’ ನಂತರ ವೆಂಕಿ ಕುಡುಮುಲ ಮತ್ತು ನಿತಿನ್ ಜೋಡಿ ರಾಬಿನ್ಹುಡ್ನಲ್ಲಿ ಒಂದಾಗಿದೆ. ಹೀಗಾಗಿ ಈ ಜೋಡಿ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಮೋಡಿ ಮಾಡುತ್ತಾ ಕಾದುನೋಡಬೇಕಿದೆ. ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಚಿತ್ರ ಇದ್ದು, ಮಾರ್ಚ್ 28ಕ್ಕೆ ಸಿನಿಮಾ ತೆರೆಕಾಣಲಿದೆ.
ಭಾರತೀಯ ಸಿನಿಮಾ ಎಂದರೆ ವಾರ್ನರ್ಗೆ ಮೆಚ್ಚು: ಡೇವಿಡ್ ವಾರ್ನರ್ ಟಿಕ್ ಟಾಕ್ ಇದ್ದ ಸಂದರ್ಭದಲ್ಲಿ ಭಾರತೀಯ ಸಿನಿಮಾಗಳ ಡೈಲಾಗ್ಗಳಿಗೆ ನಟಿಸುವ ಮೂಲಕ ಮೆಚ್ಚುಗೆ ಪಡೆದಿದ್ದರು. ಕೋವಿಡ್ ಸಮಯದಲ್ಲಿ ರೀಲ್ಸ್ ಮುಖಾಂತರ ನಟನೆಯಲ್ಲಿ ಜನಪ್ರಿಯತೆ ಪಡೆದಿದ್ದರು. ಭಾರತೀಯ ಸಿನಿಮಾಗಳ ಹಾಡಿನ ಹುಟ್ ಸ್ಟೆಪ್ಗಳನ್ನು ಮಾಡಿ ಭಾರತೀಯ ಚಿತ್ರ ರಸಿಕರ ಮನ ಗೆದ್ದಿದ್ದರು.