ಆಗಸ್ಟ್ 29ಕ್ಕೆ ಬರಲಿದ್ದಾನೆ ‘Rippen Swamy’; ಸದ್ಯದಲ್ಲೇ ಟೀಸರ್, ಟ್ರೇಲರ್

Rippen Swamy

ವಿಜಯ್‍ ರಾಘವೇಂದ್ರ (Vijay Raghavendra) ಅಭಿನಯದ ‘ಸ್ವಪ್ನ ಮಂಟಪ’ ಚಿತ್ರವು ಶುಕ್ರವಾರ (ಜುಲೈ 25) ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ವಿಜಯ್‍ ರಾಘವೇಂದ್ರ ಅಭಿನಯದ ಎರಡನೇ ಚಿತ್ರ ಇದು. ಮುಂದಿನ ತಿಂಗಳು ವಿಜಯ್‍ ರಾಘವೇಂದ್ರ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದೇ ‘ರಿಪ್ಪನ್‍ ಸ್ವಾಮಿ’ (Rippen Swamy).

‘ರಿಪ್ಪನ್ ಸ್ವಾಮಿ’ ಎಂಬ ಚಿತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಈ ಹಿಂದೆ ‘ಮಾಲ್ಗುಡಿ ಡೇಸ್’ ಚಿತ್ರ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ, ‘ರಿಪ್ಪನ್ ಸ್ವಾಮಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಟೀಸರ್ ಮತ್ತು ಟ್ರೇಲರ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಚಿತ್ರವು ಆಗಸ್ಟ್ 29ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್‍ ರಾಘವೇಂದ್ರ, ಈ ಚಿತ್ರದಲ್ಲೂ ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಕೊಂಡಿದ್ದಾರಂತೆ. ಇದೊಂದು ರಗ್ಗೆಡ್‍ ಪಾತ್ರವಾಗಿದ್ದು, ವಿಜಯ್‍ ಈ ಚಿತ್ರದಲ್ಲಿ ಬಂದೂಕು ಹಿಡಿದಿರುವುದು ವಿಶೇಷ.

ವಿಜಯ್ ರಾಘವೇಂದ್ರ ಜೋಡಿಯಾಗಿ ಶಿವಮೊಗ್ಗ ಮೂಲದ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್ ತುಮ್ಮಿನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್, ಪ್ರಭಾಕರ್ ಕುಂದಾರ್, ರಂಜನ್ ಶೆಟ್ಟಿ, ಸಂತೋಷ್ ಶೆಟ್ಟಿ ಮುಂತಾದವರು ಇದ್ದಾರೆ.

ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ‘ರಿಪ್ಪನ್‍ ಸ್ವಾಮಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ಸಂಯೋಜಿಸಿದ್ದಾರೆ. ರಂಗನಾಥ್ ಸಿ.ಎಂ ಈ ಚಿತ್ರದ ಛಾಯಾಗ್ರಹಕರು.



2 thoughts on “ಆಗಸ್ಟ್ 29ಕ್ಕೆ ಬರಲಿದ್ದಾನೆ ‘Rippen Swamy’; ಸದ್ಯದಲ್ಲೇ ಟೀಸರ್, ಟ್ರೇಲರ್

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!