Shahid Kapur ಅಭಿನಯದ ಹೊಸ ಚಿತ್ರಕ್ಕೆ Rashmika Mandanna ನಾಯಕಿ

rashmika mandanna

ರಶ್ಮಿಕಾ ಮಂದಣ್ಣ (Rahmika Mandanna) ಅಭಿನಯದ ಎರಡು ಹಿಂದಿ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಈ ಪೈಕಿ ‘ಚಾವಾ’ ಚಿತ್ರವು ಸೂಪರ್‌ ಹಿಟ್ ಆದರೆ, ಸಲ್ಮಾನ್‍ ಖಾನ್‍ ಜೊತೆಗೆ ಅವರು ನಟಿಸಿದ ‘ಸಿಕಂದರ’ ಚಿತ್ರವು ಸೂಪರ್ ಫ್ಲಾಪ್‍ ಆಗಿದೆ. ಈ ಮಧ್ಯೆ, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ.

ಅಂದಹಾಗೆ, ರಶ್ಮಿಕಾ ಒಪ್ಪಿರುವ ಹೊಸ ಚಿತ್ರದ ಹೆಸರು ‘ಕಾಕ್ಟೇಲ್‍ 2’. 13 ವರ್ಷಗಳ ಹಿಂದೆ ಸೈಫ್‍ ಅಲಿ ಖಾನ್ ‍ಮತ್ತು ದೀಪಿಕಾ ಪಡುಕೋಣೆ ಅಭಿನಯದಲ್ಲಿ ‘ಕಾಕ್ಟೇಲ್‍’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಆ ಚಿತ್ರವನ್ನು ನಿರ್ಮಿಸಿದ್ದ ದಿನೇಶ್‍ ವಿಜನ್‍, ಈಗ ‘ಕಾಕ್ಟೇಲ್‍ 2’ ಚಿತ್ರವನ್ನು ನಿರ್ಮಿಸುತ್ತಿದ್ದು, ಮೊದಲ ಚಿತ್ರವನ್ನು ನಿರ್ದೇಶಿಸಿದ್ದ ಹೋಮಿ ಅಡ್ಜಾನಿಯಾ ಈ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ.

‘ಕಾಕ್ಟೇಲ್‍ 2’ ಚಿತ್ರದ ಹಿಂದೆ ಹಳೆಯ ತಂಡವಿದ್ದರೂ, ಕಲಾವಿದರು ಬದಲಾಗಿದ್ದಾರೆ. ನಾಯಕನಾಗಿ ಶಾಹಿದ್‍ ಕಪೂರ್‌ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರಂತೆ. ಒಬ್ಬ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದ್ದರೆ, ಇನ್ನೊಬ್ಬ ನಾಯಕಿಯಾಗಿ ಕೃತಿ ಸನೋನ್‍ ನಟಿಸುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಈ ಚಿತ್ರದ ಚಿತ್ರೀಕರಣ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಲಿದೆಯಂತೆ. ಇನ್ನು, ಚಿತ್ರವು 2026ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ, ತೆಲುಗು ನಟ ನಾಗಾರ್ಜುನ ಮತ್ತು ತಮಿಳು ನಟ ಧನುಷ್‍ ಅಭಿನಯದ ‘ಕುಬೇರ’ ಚಿತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರವು ಜೂನ್‍ 20ರಂದು ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ, ‘ತಮ’ ಎಂಬ ಇನ್ನೊಂದು ಹಿಂದಿ ಹಾರರ್‌ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಆಯುಷ್ಮಾನ್‍ ಖುರಾನಾ ಮತ್ತು ನವಾಜುದ್ದೀನ್‍ ಸಿದ್ದೀಖಿ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರವು ಇದೇ ವರ್ಷ ದೀಪಾವಳಿಯ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. 

ಇದನ್ನೂ ಓದಿ:-


ಇಲ್ಲಿದೆ ಇನ್ನಷ್ಟೂ ಓದು:-

  1. РќР° РґРЅСЏС… брал небольшой РѕРїС‚, был приятно удивлен РїРѕРґС…РѕРґРѕРј Рё предложением тс, товар еще РЅРµ пробовали ,РЅРѕ забрал РІСЃРµ СЂРѕРІРЅРѕ,…

  2. Если неактуальные сообщения выше, откорректируйте сами. РџРѕ компенсациям, если останутся РІРѕРїСЂРѕСЃС‹ после получения посылки, пишите РІ РЅРѕРІРѕРј РіРѕРґСѓ, размер зависел…

One thought on “Shahid Kapur ಅಭಿನಯದ ಹೊಸ ಚಿತ್ರಕ್ಕೆ Rashmika Mandanna ನಾಯಕಿ

Leave a Reply

Your email address will not be published. Required fields are marked *