Bhavana  Menon; ಸಂಧ್ಯಾ ಪಾತ್ರದಲ್ಲಿ ಭಾವನಾ ಮೆನನ್; ‘Your’s Sincerely ರಾಮ್‍’ ಚಿತ್ರಕ್ಕೆ ನಾಯಕಿ ಸಿಕ್ಕಾಯ್ತು

ರಮೇಶ್ ಅರವಿಂದ್‍ (Ramesh Aravind) ಮತ್ತು ಗಣೇಶ್‍ (Golden Star Ganesh) ಅಭಿನಯದ ‘Your’s Sincerely ರಾಮ್‍’ (Your’s Sincerely Ram) ಚಿತ್ರವು ಗೌರಿ ಹಬ್ಬದ ದಿನ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ್ದ ರಮೇಶ್‍ ಅರವಿಂದ್‍, ಈ ಚಿತ್ರದಲ್ಲಿ ಸಂಧ್ಯಾ ಎಂಬ ಹುಡುಗಿಯ ಹಿಂದೆ ನಾವು ಬಿದ್ದಿದ್ದೀವೆ. ಆ ಸಂಧ್ಯಾ ಯಾರು? ಅವಳಿಗೂ ನಮಗೂ ಏನು ಸಂಬಂಧ? ಕಥೆಯೇನು? ಎಂಬುದೇ ಈ ಚಿತ್ರ ಎಂದು ಹೇಳಿದ್ದರು.

ಎಲ್ಲಾ ಓಕೆ. ಈ ಸಂಧ್ಯಾ ಯಾರು? ಎಂಬ ಪ್ರಶ್ನೆಗೆ ಚಿತ್ರತಂಡದವರ್ಯರೂ ಉತ್ತರಿಸಿರಲಿಲ್ಲ. ಕಾದು ನೋಡಿ ಎಂಬ ಉತ್ತರ ಬಂದಿತ್ತು. ಈಗ ಬಂದಿರುವ ಸುದ್ದಿಯ ಪ್ರಕಾರ, ಸಂಧ್ಯಾ ಪಾತ್ರವನ್ನು ಭಾವನಾ ಮೆನನ್‍ (Bhavana  Menon)ನಿರ್ವಹಿಸುತ್ತಿದ್ದಾರಂತೆ.

ರಮೇಶ್‍ ಮತ್ತು ಗಣೇಶ್‍ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ಗಣೇಶ್‍ ಅವರನ್ನು ‘ಸುಂದರಾಂಗ ಜಾಣ’ ಚಿತ್ರದಲ್ಲಿ ನಿರ್ದೇಶನ ಮಾಡಿದ್ದರು ರಮೇಶ್.‍ ಇನ್ನು, ಗಣೇಶ್‍ ಮತ್ತು ಭಾವನಾ ಮೆನನ್‍ ಇಬ್ಬರೂ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ರೋಮಿಯೋ’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದರು. ಈಗ ಪುನಃ ಅವರಿಬ್ಬರೂ ಜೊತೆಯಾಗಿ ನಟಿಸುತ್ತಿರುವುದು ವಿಶೇಷ.

‘Your’s Sincerely ರಾಮ್‍’ ಚಿತ್ರವನ್ನು ‘ಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ದಂತಹ ಚಿತ್ರಗಳನ್ನು ನಿರ್ಮಿಸಿದ್ದ ವಿಖ್ಯಾತ್‍ ನಿರ್ದೇಶನ ಮಾಡುತ್ತಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ನಡಿ ಸತ್ಯ ರಾಯಲ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ಈ ಚಿತ್ರಕ್ಕಿದೆ.

‘Your’s Sincerely ರಾಮ್‍’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿದ್ದು, ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. […] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍ […]

  2. […] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]

  3. […] ತುಳು ಭಾಷೆಯ ‘Daskath’, ಈಗ ಕನ್ನಡಕ್ಕೆ ಡಬ್‍ ಆಗಿ ಬಿಡುಗಡೆ […]

One thought on “Bhavana  Menon; ಸಂಧ್ಯಾ ಪಾತ್ರದಲ್ಲಿ ಭಾವನಾ ಮೆನನ್; ‘Your’s Sincerely ರಾಮ್‍’ ಚಿತ್ರಕ್ಕೆ ನಾಯಕಿ ಸಿಕ್ಕಾಯ್ತು

Leave a Reply

Your email address will not be published. Required fields are marked *