ʻPEDDIʼಗಾಗಿ ರಾಮ್ ಚರಣ್ ಭರ್ಜರಿ ತಯಾರಿ …

ರಾಮ್ ಚರಣ್ ತೇಜ (Ram Charan Teja) ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’(PEDDI) ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ರಾಮ್ ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ಜಿಮ್‍ನಲ್ಲಿ ದೇಹ ಹುರಿಗೊಳಿಸಿ ರಗಡ್ ಅವತಾರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಸದ್ಯ ರಾಮ್‍ಚರಣ್ ತಮ್ಮ ಪಾತ್ರಕ್ಕಾಗಿ ತಯಾರಾಗಿದ್ದು, ‘ಪೆದ್ದಿ’ (PEDDI) ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತೀಚೆಗೆ ಶುರುವಾಗಿದೆ..
ಇದೊಂದು ಕ್ರೀಡೆ ಆಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಮೂಲಗಳ ಪ್ರಕಾರ, ಶಿವರಾಜಕುಮಾರ್ ಈ ಚಿತ್ರದಲ್ಲಿ ರಾಮ್ ಚರಣ್ ತೇಜ ಅವರ ಸಹೋದರನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇತ್ತೀಚೆಗೆ, ಶಿವರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವರಾಜಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಈ ಹಿಂದೆ ‘ಉಪ್ಪೆನ’ ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನ, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣವಿದೆ.
ರಾಮ್ ಚರಣ್‍ಗೆ ಜೋಡಿಯಾಗಿ ‘ಪೆದ್ದಿ’ ಚಿತ್ರದಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅಭಿನಯಿಸುತ್ತಿದ್ದು, ಜೊತೆಗೆ ಶಿವರಾಜಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ವಿಶೇಷವೆಂದರೆ ಮುಂದಿನ ರಾಮ ನವಮಿ ಸಂದರ್ಭದಲ್ಲಿ ‘ಪೆದ್ದಿ’ ಚಿತ್ರವು ಬಿಡುಗಡೆಯಾಗಲಿದೆ. ಮುಂದಿನ ವರ್ಷ ರಾಮ ನವಮಿಯನ್ನು ಮಾರ್ಚ್ 26ರಂದು ಆಚರಿಸಲಾಗುತ್ತಿದ್ದು, ಅದಾದ ಮರುದಿನವೇ ಅಂದರೆ ಮಾರ್ಚ್ 27ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನು ಓದಿ..
ಹೆಚ್ಚಿನ ಓದಿಗಾಗಿ :-
[…] ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ … […]
[…] ʻPEDDIʼಗಾಗಿ ರಾಮ್ ಚರಣ್ ಭರ್ಜರಿ ತಯಾರಿ … […]
[…] ʻPEDDIʼಗಾಗಿ ರಾಮ್ ಚರಣ್ ಭರ್ಜರಿ ತಯಾರಿ … […]
[…] ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ … […]
https://ping.space/
2 thoughts on “ʻPEDDIʼಗಾಗಿ ರಾಮ್ ಚರಣ್ ಭರ್ಜರಿ ತಯಾರಿ …”