Ram Charan Peddi; ಮುಂದಿನ ರಾಮನವಮಿಗೆ ರಾಮ್ ಚರಣ್, ಶಿವಣ್ಣ ಅಭಿನಯದ ಚಿತ್ರ ಬಿಡುಗಡೆ

ಟಾಲಿವುಡ್ ನಟ ರಾಮ್ ಚರಣ್ ತೇಜ (Ram Charan) ಅಭಿನಯದ ‘ಪೆದ್ದಿ’ (Peddi) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಕೊನೆಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದು, ವಿಶೇಷವೆಂದರೆ ಮುಂದಿನ ರಾಮ ನವಮಿ ಸಂದರ್ಭದಲ್ಲಿ ‘ಪೆದ್ದಿ’ ಚಿತ್ರವು ಬಿಡುಗಡೆಯಾಗಲಿದೆ.
ಮುಂದಿನ ವರ್ಷ ರಾಮ ನವಮಿಯನ್ನು ಮಾರ್ಚ್ 26ರಂದು ಆಚರಿಸಲಾಗುತ್ತಿದ್ದು, ಅದಾದ ಮರುದಿನವೇ ಅಂದರೆ ಮಾರ್ಚ್ 27ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ವಿಶೇಷವೆಂದರೆ, ಇದೊಂದು ಕ್ರೀಡೆ ಆಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಮೂಲಗಳ ಪ್ರಕಾರ, ಶಿವರಾಜಕುಮಾರ್ ಈ ಚಿತ್ರದಲ್ಲಿ ರಾಮ್ ಚರಣ್ ತೇಜ ಅವರ ಸಹೋದರನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.
ಈ ಚಿತ್ರಕ್ಕೆ ಬುಚ್ಚಿ ಬಾಬು ಸನ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದು, ಇತ್ತೀಚೆಗಷ್ಟೇ ಚಿತ್ರದ ಮೊದಲ ನೋಟ ಮತ್ತು ಶೀರ್ಷಿಕೆ ಬಿಡುಗಡೆಯಾಗಿತ್ತು. ಈಗ ರಾಮನವಮಿ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.
ರಾಮ್ ಚರಣ್‍ಗೆ ಜೋಡಿಯಾಗಿ ‘ಪೆದ್ದಿ’ ಚಿತ್ರದಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅಭಿನಯಿಸುತ್ತಿದ್ದು, ಜೊತೆಗೆ ಶಿವರಾಜಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣವಿದೆ.
ಅಂದಹಾಗೆ, ಇದು ಶಿವರಾಜಕುಮಾರ್ ಅಭಿನಯದ ಎರಡನೇ ತೆಲುಗು ಚಿತ್ರವಾಗಿದ್ದು, ಇದಕ್ಕೂ ಮೊದಲು ನಂದಮೂರಿ ಬಾಲಕೃಷ್ಣ ಅಭಿನಯದ ‘ಗೌತಮಿಪುತ್ರ ಶಾತಕರ್ಣಿ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇತ್ತು. ಈಗ ‘ಪೆದ್ದಿ’ ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ತೆಲುಗಿಗೆ ವಾಪಸ್ಸಾಗಿದ್ದಾರೆ.

ಹೆಚ್ಚಿನ ಓದಿಗೆ:-
- Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …
- Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ
- Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್
- Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್
- ತುಳು ಭಾಷೆಯ ‘Daskath’, ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ
Reed More:-
[…] […]
[…] […]
[…] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್ […]
[…] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]
[…] ತುಳು ಭಾಷೆಯ ‘Daskath’, ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ […]
One thought on “Ram Charan Peddi; ಮುಂದಿನ ರಾಮನವಮಿಗೆ ರಾಮ್ ಚರಣ್, ಶಿವಣ್ಣ ಅಭಿನಯದ ಚಿತ್ರ ಬಿಡುಗಡೆ”