Ram Charan; ಪೆಡ್ಡಿಯಾಗಿ ಮಿಂಚಲಿದ್ದಾರೆ ರಾಮ್ ಚರಣ್ ; ಲುಕ್ ಹೇಗಿದೆ ನೋಡಿ..

- ರಾಮ್ ಚರಣ್ ‘ಆರ್ 16’ ಸಿನಿಮಾದ ಟೈಟಲ್ ರಿವೀಲ್
- ‘ಪೆಡ್ಡಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ ರಾಮ್ ಚರಣ್
- ಪೆಡ್ಡಿ ಚಿತ್ರದ ಪವರ್ಫುಲ್ ರೋಲ್ನಲ್ಲಿ ಹ್ಯಾಟ್ರಿಕ್ ಹಿರೋ ಶಿವಣ್ಣ ನಟನೆ
ರಾಮ್ ಚರಣ್ (Ram Charan) ನಟನೆಯ ‘ಆರ್ 16’ ಸಿನಿಮಾಕ್ಕೆ ‘ಪೆಡ್ಡಿ’ (Peddi) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಬಾಯಲ್ಲಿ ಬೀಡಿ ಹಚ್ಚಿಕೊಂಡಿರುವ ಉದ್ದ ಕೂದಲಿನಲ್ಲಿ ರಾಮ್ ಚರಣ್ ಲುಕ್ ಸಖತ್ ರಗಡ್ ಆಗಿದೆ. ಪೋಸ್ಟರ್ ಪಕ್ಕಾ ಮಾಸ್ ಸಿನಿಮಾದಂತಿದೆ . A FIGHT FOR IDENTITY!! ಎಂದು ರಾಮ್ ಚರಣ್ ತಮ್ಮ ಲುಕ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪೆಡ್ಡಿಯಲ್ಲಿ ರಾಮ್ ಚರಣ್ಗೆ (Ram Charan) ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟ ಶಿವರಾಜ್ಕುಮಾರ್ ಕೂಡ ಪವರ್ಫುಲ್ ರೋಲ್ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಹೈದರಾಬಾದ್, ಮೈಸೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್ಡೇಟ್ ಸಿಗಲಿದೆ.
ಗೇಮ್ ಚೇಂಜರ್ ರಾಮ್ ಚರಣ್ಗೆ ನಿರೀಕ್ಷಿತ ಹಿಟ್ ತಂದು ಕೊಡಲಿಲ್ಲ. ಆರ್ ಆರ್ ಆರ್ನಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ ನಂತರ ರಾಮ್ ಚರಣ್ ದೊಡ್ಡ ಯಶಸ್ಸಿನ ಹುಡುಕಾಟದಲ್ಲಿದ್ದಾರೆ. ಅದರಂತೆ ಪೆಡ್ಡಿಯ ಮೇಲೆ ನಿರೀಕ್ಷೆ ಹೆಚ್ಚಿದೆ.


(Ram Charan’s upcoming film previously known as ‘RC 16’, has been officially titled ‘Peddi’. The makers unveiled a powerful first look of the Mega Power Star in a rugged and intense avatar. Directed by Buchi Babu Sana, ‘Peddi’ is a sports drama that promises to deliver a gripping narrative set in rural Andhra Pradesh.
One thought on “Ram Charan; ಪೆಡ್ಡಿಯಾಗಿ ಮಿಂಚಲಿದ್ದಾರೆ ರಾಮ್ ಚರಣ್ ; ಲುಕ್ ಹೇಗಿದೆ ನೋಡಿ..”