Pooja Hegde; ರಜನಿಕಾಂತ್ ʻಕೂಲಿʼಯಲ್ಲಿ ಪೂಜಾ ಹೆಗ್ಡೆ..?

ರಜನಿಕಾಂತ್ (Rajinikanth), ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ ಅವರಂಥ ಸ್ಟಾರ್ ಕಲಾವಿದರ ದಂಡೇ ಇರುವ ‘ಕೂಲಿ’ ಚಿತ್ರದಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರಿಕ್ಷೀತ ಚಿತ್ರ ‘ಕೂಲಿ’.

ರಜನಿಕಾಂತ್ ಜತೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿನ ಚಿತ್ರೀಕರಣವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಜೈಲರ್ ಚಿತ್ರದಲ್ಲಿ ಮಿಲ್ಕಿ ಬ್ಯುಟಿ ತಮನ್ನ ಸೊಂಟ ಬಳುಕಿಸಿದ್ದರು. ಪೂಜಾ ಹೆಗ್ಡೆ ರೆಟ್ರೊ ಮತ್ತು ಜಗ ನಾಯಗನ್ ಚಿತ್ರಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ.
ಜೈಲರ್ ನಂತರ ರಜನಿಕಾಂತ್ ನಟನೆಯ ಮಲ್ಟಿ ಸ್ಟಾರ್ ಸಿನಿಮಾ ಇದಾಗಲಿದೆ. ಜೈಲರ್‌ನಲ್ಲಿ ಶಿವರಾಜ್‌ಕುಮಾರ್, ಮೋಹನ್ ಲಾಲ್ ನಟಿಸಿದ್ದರು. ಕೂಲಿಯಲ್ಲಿ ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ, ಸೌಬಿನ್ ಷಾಹಿರ್, ಆಮೀರ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ ಸಂಗೀತ, ಗ್ರೀಶ್ ಗಂಗಾಧರನ್ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನ ಇದೆ. ಲೋಕೇಶ್ ಕನಕರಾಜ್ ‘ಕೂಲಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ರಜನಿ ಸೆಂಟಿಮೆಂಟ್ ಪ್ರಕಾರ, ‘ಜೈಲರ್’ ಬಿಡುಗಡೆಯಾದ ಆಗಸ್ಟ್ 10 ರಂದೇ ‘ಕೂಲಿ’ಯನ್ನು ಬಿಡುಗಡೆ ಮಾಡಲು ಸನ್ ಪಿಕ್ಚರ್ಸ್ ನಿರ್ಧರಿಸಿದೆ. ಕೂಲಿ
ಸಾವಿರ ಕೋಟಿ ಗಳಿಸುವ ಗುರಿಯನ್ನು ಹೊಂದಿದೆ. ‘ಕೂಲಿ’ ನಂತರ, ರಜನಿಕಾಂತ್ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ‘ಜೈಲರ್ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕೆಲಸಗಳು ಆರಂಭವಾಗಿವೆ. ಎರಡನೇ ಭಾಗದಲ್ಲೂ ಮೋಹನ್‌ಲಾಲ್, ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ತೆಲುಗಿನಿಂದ ಬಾಲಕೃಷ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.