‘ಕರಾವಳಿ’ಯಲ್ಲಿ ಮಾವೀರನಾದ Raj B Shetty

Raj B Shetty

ಇತ್ತೀಚೆಗಷ್ಟೇ ‘ಸು ಫ್ರಮ್‍ ಸೋ’ ಚಿತ್ರದಲ್ಲಿ ಕರುಣಾಕರ ಗುರೂಜಿ ಪಾತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಜ್ ಬಿ. ಶೆಟ್ಟಿ (Raj B Shetty) ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರು ‘ಕರಾವಳಿ’ ಚಿತ್ರದಲ್ಲಿ ಮಾವೀರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕರಾವಳಿ’ ಚಿತ್ರಕ್ಕೆ ಇದೀಗ ರಾಜ್‍ ಬಿ. ಶೆಟ್ಟಿ ಎಂಟ್ರಿ ಕೊಟ್ಟಿದ್ದು, ಅವರ ಪಾತ್ರ ಪರಿಚಯದ ಟೀಸರ್ ಬಿಡುಗಡೆಯಾಗಿದೆ. ರಾಜ್ ಲುಕ್ ನೋಡುತ್ತಿದ್ದರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದವನ ಪಾತ್ರ ಎಂದನಿಸುತ್ತದೆ. ಪಾತ್ರದ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಸುಮಾರು ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾದ ‘ಕರಾವಳಿ’ ಚಿತ್ರವು ಮುಕ್ತಾಯದ ಹಂತ ತಲುಪಿದೆ. ‘ಕರಾವಳಿ’, ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧದ ಕುರಿತಾದ ಚಿತ್ರ. ಈ ಚಿತ್ರದಲ್ಲಿ ಕಂಬಳ ಪ್ರಮುಖ ಪಾತ್ರ ವಹಿಸುತ್ತದಂತೆ. ಪ್ರಾಣಿಗಳಲ್ಲಿರುವ ಮನುಷ್ಯತ್ವದ ಕುರಿತು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆಯಂತೆ.

‘ಕರಾವಳಿ’ ಚಿತ್ರದಲ್ಲಿ ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ ಮೂರು ವಿಭಿನ್ನ ಶೈಲಿಯ ಗೆಟಪ್‍ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಪ್ರಜ್ವಲ್ ಇಲ್ಲಿ ಯಕ್ಷಗಾನ ಕಲಾವಿದನಾ? ಅಥವಾ ಕಂಬಳ ಓಡಿಸುವವನಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್‍ ಮತ್ತು ರಾಜ್‍ ಶೆಟ್ಟಿ ಜೊತೆಗೆ ಮಿತ್ರ, ಸಂಪದ ಹುಲಿವಾನ, ರಮೇಶ್‍ ಇಂದಿರಾ ಮುಂತದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಚಂದ್ರಶೇಖರ್ ಬಂಡಿಯಪ್ಪ ಕಥೆ ಬರೆದಿದ್ದು, ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿದೆ.


ಇದನ್ನೂ ಓದಿ:-


ಹೆಚ್ಚಿನ ಓದಿಗಾಗಿ:-

  1. 100% клево! Смотрю! в настоящий момент эта компания ориентировано на выпуске роскошного нижнего белья, [url=https://chantal-thomass.ru/]https://chantal-thomass.ru[/url] оригинальных продукции и эффектных парфюмов.…


54 thoughts on “‘ಕರಾವಳಿ’ಯಲ್ಲಿ ಮಾವೀರನಾದ Raj B Shetty

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!