ಸೋಮೇಶ್ವರದ ಸುಲೋಚನಳ ಜೊತೆಗೆ ಬಂದ Raj B Shetty…

ರಾಜ್ ಬಿ. ಶೆಟ್ಟಿ (Raj B Shetty) ನಟನೆ ಜೊತೆಗೆ ನಿರ್ಮಾಣದಲ್ಲೂ ಸಕ್ರಿಯರಾಗಿದ್ದು, ಆಗೊಂದು ಈಗೊಂದು ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುತ್ತಾರೆ. ಈಗ ಅವರು ಸದ್ದಿಲ್ಲದೆ ತಮ್ಮ ಲೈಟರ್ ಬುದ್ಧ (Lighter Buddha) ಫಿಲಂಸ್ ಸಂಸ್ಥೆಯಡಿ ‘ಸು ಫ್ರಮ್ ಸೋ’(Su from So) ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ.
ಹೆಸರು ಕೇಳಿದರೆ ಆಶ್ಚರ್ಯವಾಗಬಹುದ. ಇಷ್ಟಕ್ಕೂ ಏನಿದು ‘ಸು ಫ್ರಮ್ ಸೋ’. ಅದರರ್ಥ ಸುಲೋಚನ ಫ್ರಮ್ ಸೋಮೇಶ್ವರ ಎಂದರ್ಥ. ಇದೊಂದು ಹಾರರ್ ಕಾಮಿಡಿ ಚಿತ್ರವಾಗಿದ್ದು, ಜುಲೈ 25ರಂದು ಬಿಡುಗಡೆಯಾಗುತ್ತಿದೆ.
ನಟ ಜೆ.ಪಿ. ತುಮಿನಾಡು ನಿರ್ದೇಶನದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಕುರಿತು ಮಾತನಾಡುವ ಅವರು, ಸಿನಿಮಾ ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು ನಾನು. ಆದರೆ, ಇಷ್ಟು ವರ್ಷಗಳ ಕಾಲ ನಟನಾಗಿದ್ದೆ. ಈಗ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದೊಂದು ಕಾಲ್ಪನಿಕ ಕಥೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥೆ ಈ ಚಿತ್ರದಲ್ಲಿದೆ’ ಎಂದರು.

ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಾಜ್ ಶೆಟ್ಟಿ ಮಾತನಾಡಿ, ‘ಆರು ವರ್ಷಗಳ ಹಿಂದೆಯೇ ಜೆ.ಪಿ. ತುಮಿನಾಡು ಅವರು ಮಾಡಿಟ್ಟುಕೊಂಡಿದ್ದ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ನಾನು ಬಹಳ ಇಷ್ಟಪಡುವ ಕಾಮಿಡಿ ಜಾನರ್‍ನ ಚಿತ್ರವಿದು. ‘ಸು ಫ್ರಮ್ ಸೋ’ ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂದರು. ಮೊದಲನೆಯದು ಪಾತ್ರದ ಹೆಸರಾದರೆ, ಎರಡನೆಯದು ಸ್ಥಳದ ಹೆಸರು. ಬಹುತೇಕ ಹೊಸತಂಡ, ಅದರಲ್ಲೂ ರಂಗಭೂಮಿಯ ಪ್ರತಿಭೆಗಳೇ ಸೇರಿ ಮಾಡಿರುವ ಚಿತ್ರವಿದು’ ಎಂದರು.
‘ಸು ಫ್ರಮ್ ಸೋ’ ಚಿತ್ರದಲ್ಲಿ ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬೆಳ್ತಂಗಡಿ, ವೇಣೂರು, ಕಕ್ಯಪದವು ಸುತ್ತಮುತ್ತ 50ದಿನಗಳ ಚಿತ್ರೀಕರಣ ಈ ಚಿತ್ರಕ್ಕೆ ನಡೆದಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗಾಗಿ :-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
It is a pity, that I can not participate in discussion now. I do not own the necessary information. But…
One thought on “ಸೋಮೇಶ್ವರದ ಸುಲೋಚನಳ ಜೊತೆಗೆ ಬಂದ Raj B Shetty…”