ಕನ್ನಡ ಚಿತರರಂಗದಲ್ಲಿ ‘ಮತ್ತೆ ಮಳೆ ಹೊಯ್ಯುತ್ತಿದೆ’ …

ಮುಂಗಾರು ಮಳೆ’ ಚಿತ್ರದ ನಂತರ ಮಳೆ ಚಿತ್ರಗಳ ಟ್ರೆಂಡ್‍ ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ, ಸಾಲುಸಾಲು ಮಳೆಯ ಚಿತ್ರಗಳು, ಪ್ರೇಮಕಥೆಗಳು ಬಿಡುಗಡೆಯಾದವು. ಆಗ ಶುರುವಾದ ಮಳೆ, ಈಗಲೂ ಹೊಯ್ಯುತ್ತಲೇ ಇದೆ.

‘ಮತ್ತೆ ಮಳೆ ಹೊಯ್ಯುತ್ತಿದೆ’ ಎಂಬ ಹೊಸಬರ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ. ‘ಎಲ್ಲ ನೆನಪಾಗುತಿದೆ …’ ಎಂಬ ಅಡಿಬರಹವಿರುವ ಈ ಚಿತ್ರಕ್ಕೆ ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿರುವ ಗಂಗಾಧರ್, ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್‍ ಬ್ಯಾನರ್ ಅಡಿಯಲ್ಲಿ ಪತ್ನಿ ಸುಮ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪರಮ್‌ ಗುಬ್ಬಿ ಚಿತ್ರ ನಿರ್ದೇಶನ ಮಾಡಿದ್ದಾರೆ. ‘ಕಬಡ್ಡಿ’ ನರೇಂದ್ರ ಬಾಬು ಚಿತ್ರಕಥೆ, ಸಂಭಾಷಣೆ ಬರೆದರೆ, ಅತಿಶಯ್‍ ಜೈನ್‍ ಸಂಗೀತ ಸಂಯೋಜಿಸಿದ್ದಾರೆ.

ಈ ಚಿತ್ರದಲ್ಲಿ ಜಿ. ಲಿಖಿತ್‍, ಜಯವರ್ಧನ್ ನಾಯಕರಾಗಿ ನಟಿಸಿದರೆ, ಅವರ ಜೊತೆಗೆ ಸುಲಕ್ಷ ಖೈರ, ಭೂಮಿಕಾ ಗೌಡ, ಚಂದ್ರಶೇಖರ ರೆಡ್ಡಿ, ಎ.ಎಂ, ಪ್ರಕಾಶ್‌ ಮೂರ್ತಿ, ಕುಮಾರಿ ಸ್ವರ್ಣ, ಶೃತಿ, ದಿನಮಣಿ, ಕಾವ್ಯ ಕುಮಾರಿ ಮುಂತಾದವರು ಅಭಿನಯಿಸಿದ್ದಾರೆ.

ಈ ಚಿತ್ರವು ಕೆ. ಸದಾಶಿವ ವಿರಚಿತ ’ಮತ್ತೆ ಮಳೆ ಹೂಯ್ಯುತಿದೆ’ ಎಂಬ ಕಥೆಯನ್ನು ಆಧರಿಸಿದೆ. ಚಿತ್ರದ ಕಥೆ 80ರ ದಶಕ ಹಾಗೂ 2000ನೇ ಇಸವಿ … ಹೀಗೆ ಎರಡು ಕಾಲಘಟ್ಟದಲ್ಲಿ ನಡೆಯುತ್ತದೆಂತೆ.  ಈ ಕುರಿತು ಮಾತನಾಡುವ ನಿರ್ದೇಶಕ ಪರಂ ಗುಬ್ಬಿ, ‘ಮೊದಲನೇ ಜೋಡಿಯ ಪ್ರೇಮ ಕತೆ ವಿಪಲವಾಗುತ್ತದೆ. ಎರಡನೇ ಜೋಡಿಯ ಲವ್ ಸ್ಟೋರಿ ಯಶಸ್ಸು ಕಾಣುತ್ತದೆ. ಇವೆರೆಡರ ನಡುವೆ ಸನ್ನಿವೇಶಗಳು ಮನಸ್ಸನ್ನು ಕದಡುತ್ತದೆ. ಸಿನಿಮಾದಲ್ಲಿ ಮಳೆ ಮಹತ್ವದ ಪಾತ್ರ ವಹಿಸುತ್ತದೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆ ಸುಂದರ ಮುಂತಾದ ಕಡೆ ಚಿತ್ರೀಕರಣ ಮುಗಿಸಿದ್ದೇವೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ಅಕ್ಟೋಬರ್‌ದಲ್ಲಿ ಚಿತ್ರವನ್ನು ತೆರೆಗೆ ತರಲು ಯೋಚನೆ ನಡೆದಿದೆ’ ಎಂದರು.


ಇದನ್ನೂ ಓದಿ:-


ಹೆಚ್ಚಿನ ಓದಿಗಾಗಿ:-

  1. Новые порносайты предлагают инновационный контент для развлечений для взрослых. Откройте для себя безопасные новые платформы для современного опыта. My homepage…

  2. Новые порносайты предлагают инновационный контент для развлечений для взрослых. Откройте для себя безопасные новые платформы для современного опыта. My homepage…


3 thoughts on “ಕನ್ನಡ ಚಿತರರಂಗದಲ್ಲಿ ‘ಮತ್ತೆ ಮಳೆ ಹೊಯ್ಯುತ್ತಿದೆ’ …

  1. Scratch cards always felt like a little burst of optimism, didn’t they? It’s cool to see platforms like og777 app elevating the experience with secure logins & VIP access – a modern take on classic fun! 🎉

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!