ದುರಹಂಕಾರದ ರಾಯಭಾರಿಯಾದ Ragini Dwivedi; ‘ಜಾವಾ’ ಚಿತ್ರದಲ್ಲಿ R ಕ್ವೀನ್

ರಾಗಿಣಿ (Ragini Dwivedi) ಇತ್ತೀಚಿನ ದಿನಗಳಲ್ಲಿ ಬ್ಯಾಕ್ ಟು ಬ್ಯಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ‘ಸಿಂಧೂರಿ’, ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ (Sarkari Nyaya Bele Angadi) ಮತ್ತು ‘ಜಾವಾ’ (Jawa) ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದು, ಈ ಪೈಕಿ ಮೊದಲೆರಡು ಚಿತ್ರಗಳ ಮುಹೂರ್ತ ಇತ್ತೀಚೆಗೆ ಆಗಿದೆ. ‘ಜಾವಾ’ ಚಿತ್ರದ ಚಿತ್ರೀಕರಣ ಜುಲೈ ತಿಂಗಳಿನಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ರಾಗಿಣಿ ದ್ವಿವೇದಿ ಹುಟ್ಟುಹಬ್ಬಕ್ಕೆ ಚಿತ್ರತಂಡದಿಂದ ಏನೋ ವಿಶೇಷವಾದದ್ದು ಬಿಡುಗಡೆಯಾಗಲಿದೆ …’ ಎಂದು ನಿರ್ದೇಶಕ ದೇವ ಚಕ್ರವರ್ತಿ ಅಲಿಯಾಸ್ ಚಕ್ರವರ್ತಿ ಚಂದ್ರಚೂಡ್ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಂದು ಹೇಳಿದ್ದರು. ಅದರಂತೆ ರಾಗಿಣಿ ಹುಟ್ಟುಹಬ್ಬಕ್ಕೆ, ಅವರಿಗೆ ಶುಭಕೋರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ರಾಗಿಣಿ ಈ ಚಿತ್ರದಲ್ಲಿ ಪ್ರಸಿದ್ಧ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಾಗಿಣಿಯ ಹೆಸರನ್ನು ಚಿತ್ರತಂಡ ಹೇಳದಿದ್ದರೂ, R ಕ್ವೀನ್ ಎಂಬ ಬಿರುದನ್ನು ನೀಡಿದೆ. ಜೊತೆಗೆ ಆಕೆಯನ್ನು ದುರಹಂಕಾರದ ರಾಯಭಾರಿ ಎಂದು ಬಣ್ಣಿಸಿದೆ. ಈ ಪೋಸ್ಟರ್‍ನಲ್ಲಿ ರಾಗಿಣಿ, ಗ್ರೀನ್ ರೂಂನಲ್ಲಿ ಸಿಗಾರ್ ಹಿಡಿದು ಕುಳಿತಿರುವ ದೃಶ್ಯವನ್ನು ನೋಡಬಹುದು.
ಚಿತ್ರದಲ್ಲಿನ ರಾಗಿಣಿ ಪಾತ್ರದ ಕುರಿತು ಮಾತನಾಡವ ನಿರ್ದೇಶಕ ದೇವ ಚಕ್ರವರ್ತಿ, ‘ನಾಯಕಿ ಪಾತ್ರಕ್ಕೆ ಯಾರು ಸೂಕ್ತ ಎಂದು ಯೋಚಿಸಿದಾಗ, ನೆನಪಿಗೆ ಬಂದವರು ರಾಗಿಣಿ. ಅವರು ಇಂಥಾ ಪಾತ್ರ ಮಾಡುತ್ತಾರಾ? ಎಂಬ ಗೊಂದಲವಿತ್ತು. ಅವರಿಗೆ ಕಥೆ ಹೇಳಿದಾಗ, ‘ನನ್ನಿಂದ ಸ್ಫೂರ್ತಿ ಪಡೆದು ಕಥೆ ಬರೆದಿದ್ದೀರಾ’ ಎಂದರು. ಇದು ಚಿತ್ರರಂಗದಲ್ಲಿ ನಡೆಯುವ ಹಳವಂಡದ ಕಥೆ. ಒಬ್ಬ ಸಾಮಾನ್ಯ ಯುವಕನ ದೃಷ್ಟಿಯಲ್ಲಿ ಹೇಳಲಾಗುತ್ತದೆ’ ಎಂದು ಹೇಳಿದ್ದಾರೆ.
‘ಜಾವಾ’ ಚಿತ್ರವನ್ನು ನಟ ರಾಜವರ್ಧನ್ ನಿರ್ಮಿಸುತ್ತಿದ್ದಾರೆ. ಬಾರ್ನ್ ಸ್ವಾಲೋ ಕಂಪನಿ ಎಂಬ ನಿರ್ಮಾಣ ಸಂಸ್ಥೆಯನ್ನು ಅವರು ಪ್ರಾರಂಭಿಸಿದ್ದು, ಆ ಸಂಸ್ಥೆಯ ಮೊದಲ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ದೇವ ಚಕ್ರವರ್ತಿ (ಚಕ್ರವರ್ತಿ ಚಂದ್ರಚೂಡ್) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ರಾಜವರ್ಧನ್‍ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಇದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಅರ್ಜುನ್ ರಾಜ್ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನವಿದೆ.
ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
It is a pity, that I can not participate in discussion now. I do not own the necessary information. But…
2 thoughts on “ದುರಹಂಕಾರದ ರಾಯಭಾರಿಯಾದ Ragini Dwivedi; ‘ಜಾವಾ’ ಚಿತ್ರದಲ್ಲಿ R ಕ್ವೀನ್”