ಹೊಸ ‘ಟಾಸ್ಕ್’ ಮುಗಿಸಿದ Raghu Shivamogga; ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯ
ಈ ಹಿಂದೆ ‘ಚೂರಿಕಟ್ಟೆ’ ಚಿತ್ರ ನಿರ್ದೇಶಿಸಿದ್ದ ರಾಘು ಶಿವಮೊಗ್ಗ (Raghu Shivamogga), ಕಳೆದ ವರ್ಷ ‘ದಿ ಟಾಸ್ಕ್’ ಎಂಬ ಹೊಸ ಚಿತ್ರ ಪ್ರಾರಂಭಿಸಿದ್ದರು. ಹಾಡುಗಳಿಲ್ಲದ, ನಾಯಕಿ ಇಲ್ಲದ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮಡಿಕೇರಿ ಮುಂತಾದ ಕಡೆ ಸುಮಾರು 46 ದಿನಗಳ ಕಾಲ ನಡೆದು ಇದೀಗ ಜುಲೈ 22ರಂದು ಸಂಪೂರ್ಣವಾಗಿದೆ.
‘ದಿ ಟಾಸ್ಕ್’ ಚಿತ್ರಕ್ಕೆ ಇಬ್ಬರು ಹೀರೋಗಳು. ‘ಭೀಮ’ ಚಿತ್ರದಲ್ಲಿ ನಟಿಸಿದ್ದ ಡಿವೈಎಸ್ಪಿ ರಾಜೇಶ್ ಅವರ ಮಗ ಜಯಸೂರ್ಯ ಒಬ್ಬರಾದರೆ, ‘ಪೆಂಟಗನ್’ನಲ್ಲಿ ನಟಿಸಿದ್ದ ಸಾಗರ್ ಇನ್ನೊಬ್ಬರು. ಮಿಕ್ಕಂತೆ ಶ್ರೀಲಕ್ಷ್ಮೀ, ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಸಂಗೀತಾ ಭಟ್, ತನಿಷಾ ಕುಪ್ಪುಂದ, ಸಂಪತ್ ಮೈತ್ರೇಯಾ, ಕಿರಣ್ ನಾಯ್ಕ್, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಸೇರಿದಂತೆ ಹಲವರು ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ರಾಘು ಶಿವಮೊಗ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೊಂದು ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಚಿತ್ರ ಎನ್ನುವ ‘ಪ್ರತಿಯೊಬ್ಬರಿಗೂ, ಪ್ರತಿ ದಿನವೂ ಒಂದೊಂದು ಕೆಲಸವಿರುತ್ತದೆ. ಅದೇ ರೀತಿಯಲ್ಲಿ ಇಲ್ಲಿನ ಪಾತ್ರಗಳಿಗೂ ಒಂದಿಷ್ಟು ಜವಾಬ್ದಾರಿಗಳಿರುತ್ತವೆ. ಅದನ್ನು ಅವರು ಹೇಗೆ ನಿರ್ವಹಿಸುತ್ತಾರೆ? ಅದರಿಂದ ಏನೆಲ್ಲಾ ಆಗುತ್ತದೆ? ಎಂಬುದೇ ಚಿತ್ರದ ಕಥೆ. ಇಲ್ಲಿ ಎರಡು ಪಾತ್ರಗಳನ್ನಿಟ್ಟುಕೊಂಡು ಕಥೆ ಮಾಡಿದ್ದೇವೆ. ಡಿವೈಎಸ್ಪಿ ರಾಜೇಶ್ ಅವರಿಂದ ಹಲವು ವಿಷಯಗಳನ್ನು ಸಂಗ್ರಹಿಸಿ ನಾನು ಮತ್ತು ಶೈಲೇಶ್ ಕಥೆ, ಚಿತ್ರಕಥೆ ಮಾಡಿದ್ದೇವೆ’ ಎನ್ನುತ್ತಾರೆ.
‘ದಿ ಟಾಸ್ಕ್’ ಚಿತ್ರವನ್ನು ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ‘ದಿ ಟಾಸ್ಕ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ ಮಾಡಿದ್ದು, ಜಾರೆಡ್ ಮತ್ತು ಜೂಡಾ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ.
Hurrah, that’s what I was looking for, what a material! existing here at this webpage, thanks admin of this website.
I just could not leave your website prior to suggesting that I really loved the usual info an individual provide…
Listen ᥙp, Singapore folks, maths іs liкely the highly crucial primary subject, fostering innovation tһrough challenge-tackling іn groundbreaking jobs. National…
What i do not realize is in truth how you’re no longer actually a lot more well-favored than you might…
discoveramazingthings – Exciting name, visuals and content give a sense of adventure.






**mind vault**
mind vault is a premium cognitive support formula created for adults 45+. It’s thoughtfully designed to help maintain clear thinking