Pruthvi Ambaar; ಸದ್ದಿಲ್ಲದೆ ಮುಗಿದ ಪೃಥ್ವಿ ಹೊಸ ಚಿತ್ರ; ಈ ಚಿತ್ರಕ್ಕೆ ಯಶ್ ತಾಯಿ ನಿರ್ಮಾಪಕಿ

ಪೃಥ್ವಿ ಅಂಬಾರ್ ಅಭಿನಯದ ಹೊಸ ಚಿತ್ರವನ್ನು ಪಿ.ಎ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಬಂದಿತ್ತು. ಈಗ ಆ ಪಿ. ಎ ಯಾರು ಎಂಬ ವಿಷಯ ಬಹಿರಂಗವಾಗಿದೆ. ಪಿ.ಎ ಎಂದರೆ ಪುಷ್ಪಾ ಅರುಣ್ ಕುಮಾರ್ ಎಂದರ್ಥ. ಯಶ್ ಅವರ ತಾಯಿ ಪುಷ್ಪಾ ಇದೀಗ ಚಿತ್ರ ನಿರ್ಮಾಣಕ್ಕಿಳಿದಿದ್ದು, ಪೃಥ್ವಿ ಅಂಬಾರ್ ಅಭಿನಯದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರಕ್ಕೆ ‘ಕೊತ್ತಲವಾಡಿ’ ಎಂದು ಹೆಸರು ಇಡಲಾಗಿದೆ. ಈ ಚಿತ್ರಕ್ಕೆ ಶ್ರೀರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕೆ.ವಿ. ರಾಜು, ರವಿ ಶ್ರೀವತ್ಸ ಮುಂತಾದವರ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಪೃಥ್ವಿ ಅಂಬಾರ್ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ‘ಮತ್ಸ್ಯಗಂಧ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಮತ್ತು ‘ಚೌಕಿದಾರ್’ ಚಿತ್ರದಲ್ಲಿ ಇನ್ನೊಂದು ವಿಭಿನ್ನ ಪಾತ್ರವಿದೆಯಂತೆ. ಈಗ ‘ಕೊತ್ತಲವಾಡಿ’ ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಾಗಿದ್ದ, ಪೃಥ್ವಿ ಅಂಬಾರ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ, ಅಕ್ಷಯ ತೃತೀಯ ದಿನದ ಅಂಗವಾಗಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ.
‘ಕೊತ್ತಲವಾಡಿ’ ಚಿತ್ರದಲ್ಲಿ ಪೃಥ್ವಿ ಅಂಬಾರ್‍ಗೆ ನಾಯಕಿಯಾಗಿ ಕಿರುತೆರೆ ನಟಿ ಕಾವ್ಯಾ ಶೈವ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಮುಂತಾದ ಜನಪ್ರಿಯ ನಟರು ನಟಿಸುತ್ತಿದ್ದಾರೆ. ‘ಕೊತ್ತಲವಾಡಿ’ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಇದೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತವಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
One thought on “Pruthvi Ambaar; ಸದ್ದಿಲ್ಲದೆ ಮುಗಿದ ಪೃಥ್ವಿ ಹೊಸ ಚಿತ್ರ; ಈ ಚಿತ್ರಕ್ಕೆ ಯಶ್ ತಾಯಿ ನಿರ್ಮಾಪಕಿ”