ರಕ್ತಸಿಕ್ತ ಅವತಾರದಲ್ಲಿ Pruthvi Ambaar ಅಬ್ಬರ; ‘Chowkidar’ ಟೀಸರ್ ಬಿಡುಗಡೆ

ಪೃಥ್ವಿ ಅಂಬಾರ್ (Pruthvi Ambaar) ಹಾಗೂ ಧನ್ಯ ರಾಮ್ ಕುಮಾರ್ (Dhanya Ramkumar) ನಟನೆಯ ‘ಚೌಕಿದಾರ್’ (Chowkidar) ಚಿತ್ರದ ಚಿತ್ರೀಕರಣ ಮುಗಿದು ಈಗಾಗಲೇ ಐದು ತಿಂಗಳುಗಳಾಗಿವೆ. ಡಿಸೆಂಬರ್ ತಿಂಗಳಲ್ಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ತಯಾರಿ ನಡೆಸಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್ MRT ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಿದೆ.
‘ಚೌಕಿದಾರ್’ ಚಿತ್ರದಲ್ಲಿ ಪೃಥ್ವಿ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡರೆ, ಧನ್ಯ ರಾಮ್ ಕುಮಾರ್ ಗ್ಲಾಮರ್ ಇಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಚಿತ್ರದಲ್ಲಿ ಸುಧಾರಾಣಿ, ಸಾಯಿಕುಮಾರ್, ಧರ್ಮ ಮುಂತಾದವರು ಈ ಚಿತ್ರದಲ್ಲ ನಟಿಸಿದ್ದಾರೆ.

ಈ ಚಿತ್ರದ ಮೂಲಕ ‘ಚೈತ್ರದ ಪ್ರೇಮಾಂಜಲಿ’ ಖ್ಯಾತಿಯ ಶ್ವೇತಾ, ಕನ್ನಡ ಚಿತ್ರರಂಗಕ್ಕೆ 20 ವರ್ಷಗಳ ನಂತರ ಎಂಟ್ರಿ ಕೊಟ್ಟಿದ್ದಾರೆ. ಉಪೇಂದ್ರ ಅಭಿನಯದ ‘ಕುಟುಂಬ’ ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಅವರು, ‘ಚೌಕಿದಾರ್’ ಚಿತ್ರದ ಮೂಲಕ ಹಿರಿತೆರೆಗೆ ವಾಪಸ್ಸಾಗಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕ ಪೃಥ್ವಿ ಅಂಬಾರ್ ತಾಯಿಯಾಗಿ ಮತ್ತು ಸಾಯಿಕುಮಾರ್ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ‘ಪ್ರತಿಯೊಬ್ಬ ಮನೆಯಲ್ಲಿಯೂ ಚೌಕಿದಾರ್ ಇರುತ್ತಾರೆ. ಅವರ ಕಥೆಯನ್ನು ನಾವು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ. ಗ್ರಾಮಾಂತರ ಪ್ರದೇಶದಿಂದಲೇ ಚಿತ್ರ ಶುರುವಾಗುತ್ತದೆ. ಸಾಯಿಕುಮಾರ್ ಹಾಗೂ ಪೃಥ್ವಿ ತಂದೆ ಮಗನಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ’ ಎಂದು ಹೇಳುತ್ತಾರೆ.
‘ಚೌಕಿದಾರ್’ ಚಿತ್ರವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಿಸಿದ್ದು, ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಮತ್ತು ಸಿದ್ದು ಕಂಚನಹಳ್ಳಿ ಛಾಯಗ್ರಹಣವಿದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
It is a pity, that I can not participate in discussion now. I do not own the necessary information. But…
One thought on “ರಕ್ತಸಿಕ್ತ ಅವತಾರದಲ್ಲಿ Pruthvi Ambaar ಅಬ್ಬರ; ‘Chowkidar’ ಟೀಸರ್ ಬಿಡುಗಡೆ”