ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ Pranam…

ಏಳೂವರೆ ವರ್ಷಗಳ ನಂತರ ನನ್ನದೊಂದು ಚಿತ್ರ ಬಿಡುಗಡೆಯಾಗುತ್ತಿದೆ. ತುಂಬಾ ಗ್ಯಾಪ್ ಆಗಿತ್ತು. ಸಾಕಷ್ಟು ಕಾರಣಗಳಿಂದ ನನ್ನ ಚಿತ್ರಗಳು ಬಿಡುಗಡೆಯಾಗಲಿಲ್ಲ. ಈ ಚಿತ್ರ ನನ್ನ ರೀಲಾಂಚ್ ಎಂದರೆ ತಪ್ಪಿಲ್ಲ. ರೀಲಾಂಚ್‍ಗೆ ಇಂಥದ್ದೊಂದು ಸಿನಿಮಾ ಸಿಕ್ಕಿರುವುದು ನನ್ನ ಪುಣ್ಯ. ನನ್ನ ಮೊದಲ ಸಿನಿಮಾ ಓಡಲಿಲ್ಲ. ಜನ ನನ್ನ ಕೆಲಸ ನೋಡಿಲ್ಲ. ನಾನು ಹೇಗೆ ನಟಿಸುತ್ತೇನೆ, ನನ್ನ ಪ್ರತಿಭೆ ಏನು ಗೊತ್ತಿಲ್ಲ. ಅದನ್ನು ಈ ಸಿನಿಮಾದಲ್ಲಿ ನೋಡುತ್ತಾರೆ ಎಂಬ ನಂಬಿಕೆ ಇದೆ … ಹಾಗಂತ ಹೇಳಿದ್ದು ಪ್ರಣಾಮ್ (Pranam).
ಹಿರಿಯ ನಟ ದೇವರಾಜ್ ಅವರ ಮಗ ಅಭಿನಯದ ಎರಡನೇ ಚಿತ್ರ ‘S/O ಮುತ್ತಣ್ಣ’, ಆಗಸ್ಟ್ 22ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಒಂದು ಹಾಡು ಈಗಾಗಲೇ ಬಿಡುಗಡೆಯಾಗಿದೆ. ಈಗ ಸಂಜಿತ್ ಹೆಗ್ಡೆ ಹಾಡಿರುವ ‘ಮಿಡ್‍ನೈಟ್ ರಸ್ತೆಯಲ್ಲಿ …’ ಎಂಬ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಬರೆದಿರುವ ಈ ಹಾಡಿಗೆ ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದು, ಧನಂಜಯ್ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಈ ಹಾಡಿಗೆ ಪ್ರಣಾಂ ಮತ್ತು ಖುಷಿ ಹೆಜ್ಜೆ ಹಾಕಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಪ್ರಣಾಮ್, ‘ಕಥೆ ಕೇಳಿದಾಗಿನಿಂದ ಇಲ್ಲಿಯವರೆಗೂ ನನ್ನ ಮನಸ್ಸಿನಲ್ಲಿ ಬಹಳ ಹತ್ತಿರವಾಗಿದೆ. ಬಿಡುಗಡೆಯಾದ ಮೇಲೆ ಹತ್ತಿರವಾಗಿರುತ್ತದೆ. ಶ್ರೀಕಾಂತ್ ಕಥೆ ಹೇಳಿದ ತಕ್ಷಣ ಅಪ್ಪ ಒಪ್ಪಿಕೊಂಡು, ಏನೂ ಬದಲಾವಣೆ ಬೇಡ ಎಂದು ಹೇಳಿ ಕಳುಹಿಸಿದರು. ರಂಗಾಯಣ ರಘು ಅವರ ಜೊತೆಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಅವರಿಂದ ತುಂಬಾ ಕಲಿತಿದ್ದೇನೆ. ಎರ ಡನೇ ಚಿತ್ರದಲ್ಲಿ ಅಂಥವರ ಜೊತೆಗೆ ಕೆಲಸ ಮಾಡಿದ್ದು, ಮರೆಯಲಾಗದ ಅನುಭವ’ ಎಂದರು.
ಈ ಪಾತ್ರದ ಬಗ್ಗೆ ಒಂದು ಸಾಲಿನಲ್ಲಿ ಹೇಳೋದು ಕಷ್ಟ ಎನ್ನುವ ಪ್ರಣಾಮ್, ‘ಈ ಪಾತ್ರಕ್ಕೆ ಹಲವು ಭಾವನೆಗಳಿವೆ. ಮೆಚ್ಯೂರ್ಡ್ ಪಾತ್ರ. ಒಬ್ಬ ಮಗ ತನ್ನ ತಂದೆಯನ್ನು ಹೇಗೆ ನೋಡಿಕೊಳ್ಳುತ್ತಾನೆ? ಏನಾದರೂ ಸಮಸ್ಯೆಯಾದರೆ, ಅಪ್ಪನಿಗೆ ಸಮಸ್ಯೆಯಾಗದೆ ಹಾಗೆ ಹೇಗೆ ಬಗೆಹರಿಸುತ್ತಾನೆ? ಒಬ್ಬ ಒಳ್ಳೆಯ ಮಗನ ಪಾತ್ರ. ಮುಗ್ಧನಾದರೂ ಚಾಲಾಕಿತನದಿಂದಲೇ ಎಲ್ಲವನ್ನೂ ಬಗೆಹರಿಸುತ್ತಾನೆ. ಇದನ್ನು ನಿರ್ದೇಶಕರು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶ್ರೀಕಾಂತ್ ಹುಣಸೂರು ಮಾತನಾಡಿ, ‘ಈ ಹಾಡನ್ನು ಕೇವಲ ಎರಡು ದಿನಗಳಲ್ಲಿ ಮಾಡಿದ್ದೇವೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರಣಾಂ ಅವರ ನೃತ್ಯದ ವೇಗಕ್ಕೆ ಖುಷಿ ಮ್ಯಾಚ್ ಮಾಡಿದ್ದಾರೆ. ಮೊದಲೇ ಕೆಲವು ದಿನಗಳ ಕಾಲ ರಿಹರ್ಸಲ್ ಮಾಡಿ ಕೇವಲ ಎರಡು ದಿನಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಈ ತರಹದ ಕಲಾವಿದರು ಸಿಕ್ಕರೆ, ಕಡಿಮೆ ಬಜೆಟ್‍ನಲ್ಲಿ ಅದ್ಭುತವಾದ ಚಿತ್ರಗಳನ್ನು ಮಾಡಬಹುದು’ ಎಂದರು.
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ‘S/O ಮುತ್ತಣ್ಣ’ ಚಿತ್ರಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಈ ಚಿತ್ರದಲ್ಲಿ ರಂಗಾಯಣ ರಘು, ಗಿರಿ ಶಿವಣ್ಣ, ತಬಲಾ ನಾಣಿ, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
[…] ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ … […]
[…] ʻPEDDIʼಗಾಗಿ ರಾಮ್ ಚರಣ್ ಭರ್ಜರಿ ತಯಾರಿ … […]
[…] ʻPEDDIʼಗಾಗಿ ರಾಮ್ ಚರಣ್ ಭರ್ಜರಿ ತಯಾರಿ … […]
[…] ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ … […]
https://ping.space/
2 thoughts on “ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ Pranam…”