ಪ್ರಭಾಸ್ ನಟನೆಯ ‘The Raja Saab’ ಬಿಡುಗಡೆ ಯಾವಾಗ ಗೊತ್ತಾ?

ಪ್ರಭಾಸ್‍ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರದ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ಈ ಮಧ್ಯೆ, ಪ್ರಭಾಸ್‍ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಪ್ರಭಾಸ್‍ ಅಭಿನಯದ ಚಿತ್ರವೊಂದರ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕಾದಿರುವಾಗಲೇ, ಕೊನೆಗೂ ಉತ್ತರ ಸಿಕ್ಕಿದೆ.

ಪ್ರಭಾಸ್‌ ನಟನೆಯ ‘ರಾಜಾ ಸಾಬ್’ (The Raja Saab) ಸಿನಿಮಾದಿಂದ ಬಿಗ್ ಅಪ್ಡೇಡ್ ಹೊರಬಿದ್ದಿದೆ. ಚಿತ್ರವು ಇದೇ ವರ್ಷದ ಡಿಸೆಂಬರ್ 5ರಂದು ‘ದಿ ರಾಜಾ ಸಾಬ್’ ಚಿತ್ರವು ತೆರೆಗೆ ಬರಲಿದೆ. ಇದೇ ಜೂನ್ 16ರಂದು ಟೀಸರ್ ಸಹ ಬಿಡುಗಡೆ ಆಗಲಿದೆ. ಇದುವರೆಗೂ ಆಕ್ಷನ್ ಅವತಾರದಲ್ಲಿಯೇ ಹೆಚ್ಚು ಮಿಂಚಿದ್ದ ನಟ ಪ್ರಭಾಸ್, ಇದೇ ಮೊದಲ ಬಾರಿಗೆ ‘ದಿ ರಾಜಾ ಸಾಬ್’ ಸಿನಿಮಾ ಮೂಲಕ ಹಾರರ್ ಚಿತ್ರದಲ್ಲಿ ನಟಿಸಿದ್ದರೆ. ಮಾರುತಿ ನಿರ್ದೇಶನದ ‘ದಿ ರಾಜಾ ಸಾಬ್’ ಭಯ ಮತ್ತು ಮನರಂಜನೆಯ ಮಿಶ್ರಣ ನೀಡುವ ಒಂದು ಪ್ರಯತ್ನ.

ಪೀಪಲ್ ಮೀಡಿಯಾ ಫ್ಯಾಚಕ್ಟರಿ ಬ್ಯಾನರ್ ಅಡಿಯಲ್ಲಿ, ಟಿ.ಜಿ. ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಕಾರ್ತಿಕ್ ಪಳನಿ ಛಾಯಾಗ್ರಹಣ, ಎಸ್‍.ಎಸ್. ಥಮನ್ ಸಂಗೀತವಿದೆ. ಈ ಹಿಂದೆ ‘ಪ್ರತಿ ರೋಜು ಪಂಡಗ’, ‘ಪ್ರೇಮ ಕಥಾ ಚಿತ್ರಂ’, ‘ಮಹಾನುಭಾವುಡು’ ಸೇರಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಮಾರುತಿ, ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕದ ಪೋಸ್ಟರ್ ಮಂಗಳವಾರ ಸೋಷಿಯಲ್‍ ಮೀಡಿಯಾದಲ್ಲಿ ಬಿಡುಗಡೆಯಾಗಿದೆ.

‘ದಿ ರಾಜಾ ಸಾಬ್‍’ ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರವಾಲ್ ಮತ್ತು ರಿಧಿ ಕುಮಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್‍ ದತ್‍, ಮುರಳಿ ಶರ್ಮ, ಅನುಪಂ ಖೇರ್, ಬ್ರಹ್ಮಾನಂದಂ, ಯೋಗಿ ಬಾಬು, ವರಲಕ್ಷ್ಮೀ ಶರತ್‍ ಕುಮಾರ್‌ ಮುಂತಾದವರು ಅಭಿನಯಿಸಿರುವ ಈ ಚಿತ್ರವು ತೆಲುಗಿನಲ್ಲಿ ತಯಾರಾಗಿದ್ದು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳೀಗೆ ಡಬ್‍ ಆಗಿ, ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. Покуреха порошки безвкусные (на язык), остальные горькие. Так проще всего определить. https://www.band.us/page/99926443/ уже ожидается что нибудь?

2 thoughts on “ಪ್ರಭಾಸ್ ನಟನೆಯ ‘The Raja Saab’ ಬಿಡುಗಡೆ ಯಾವಾಗ ಗೊತ್ತಾ?

Leave a Reply

Your email address will not be published. Required fields are marked *