ಒಂದು ರಾತ್ರಿ, ಒಂದು ಫೋನ್‍ ಕಾಲ್‍, ಒಂದು Wrong Turn …

Vritta

ಒಂದು ರಾತ್ರಿಯಲ್ಲಿ ನಡೆಯುವ ಕಥೆಗಳು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗುತ್ತಿವೆ. ವಿಜಯ್‍ ರಾಘವೇಂದ್ರ ಅಭಿನಯದ ‘6 ಟು 6’ ನಂತರ ಆ ಸಾಲಿಗೆ ‘ವೃತ್ತ’ ಎಂಬ ಹೊಸ ಚಿತ್ರ ಸಹ ಸೇರಿದೆ. ಈ ಚಿತ್ರವು ಇದೇ ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಜೀವನದಲ್ಲಿ ಒಂದು ರಾಂಗ್ ಟರ್ನ್(Wrong Turn) ತೆಗೆದುಕೊಂಡರೆ ಏನೆಲ್ಲಾ ಆಗಬಹುದು? ಎಂಬ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಈ ಚಿತ್ರಕ್ಕೆ ಯೋಗೇಶ್‌ ಗೌಡ ಕಥೆ ಬರೆದರೆ, ಲಿಖಿತ್‌ ಕುಮಾರ್ ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಲಿಖಿತ್‍, ‘ಇದೊಂದು ಭಾವಪೂರ್ಣ ಪಯಣ. ಈ ಚಿತ್ರ ಒಂದು ರಾತ್ರಿ ನಡೆಯುವ ಘಟನಾವಳಿಗಳನ್ನು ಒಳಗೊಂಡಿದೆ. ಸಿದ್ದಾರ್ಥ್‌ ಎಂಬ ಪಾತ್ರದ ಸುತ್ತ ನಡೆಯುವ ಕಥೆ ಇದರಲ್ಲಿದ್ದು, ಸಿದ್ದಾರ್ಥ್‌ಗೆ ಆತನ ಮಸ್ಥಿತಿಯೇ ಶತ್ರುವಾಗಿರುತ್ತದೆ. ಒಂದು ರಾತ್ರಿ, ಒಂದು ಕರೆ ಮತ್ತು ಒಂದು ರಾಂಗ್‍ ಟರ್ನ್‍ನಿಂದ ನಾಯಕನ ಜೀವನದಲ್ಲಿ ಏನೆಲ್ಲಾ ಸಂಭವಿಸುತ್ತದೆ ಎಂಬುದು ಚಿತ್ರದ ಕಥೆ’ ಎನ್ನುತ್ತಾರೆ ಲಿಖಿತ್.

ಈ ಚಿತ್ರದಲ್ಲಿ ನವನಟ ಮೊಹಿಯುದ್ದೀನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ವೀಕ್ಷಿಸಿದ ನಟ ನೀನಾಸಂ ಸತೀಶ್ ಚಿತ್ರದ ವಿಷಯ ಮೆಚ್ಚಿ, ತಮ್ಮ ಸತೀಶ್‍ ಪಿಕ್ಚರ್ ಹೌಸ್‍ ಬ್ಯಾನರ್ ಅಡಿ ಅರ್ಪಿಸುತ್ತಿದ್ದಾರೆ.

ಲಕ್ಷಯ್ ಆರ್ಟ್ಸ್ ಬ್ಯಾನರ್ ಅಡಿ ಟಿ. ಶಿವಕುಮಾರ್ ನಿರ್ಮಿಸಿರುವ ‘ವೃತ್ತ’ ಚಿತ್ರದಲ್ಲಿ ಮೊಹಿಯುದ್ದೀನ್‍, ಜೊತೆಗೆ ಹರಿಣಿ ಸುಂದರ ರಾಜನ್, ಚೈತ್ರಾ ಆಚಾರ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು ಆಂಟೋನಿ ಹಾಗೂ ಹರಿ ಕೃಷಾಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಂಕರ ರಾಮನ್ ಅವರ ಸಂಭಾಷಣೆ, ಗೌತಮ್ ಕೃಷ್ಣ ಛಾಯಗ್ರಹಣ ಈ ಚಿತ್ರಕ್ಕಿದೆ.


ಇದನ್ನೂ ಓದಿ :-

2 thoughts on “ಒಂದು ರಾತ್ರಿ, ಒಂದು ಫೋನ್‍ ಕಾಲ್‍, ಒಂದು Wrong Turn …

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ