Niranjan Sudhindra; ಸೆಟ್ಟೇರಿತು ‘ಸ್ಪಾರ್ಕ್’; ಪತ್ರಕರ್ತನಾದ ನಿರಂಜನ್ ಸುಧೀಂದ್ರ

ಅರ್ಜುನ್‍ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಎಂಬ ಚಿತರದಲ್ಲಿ ನಾಯಕನಾಗಿ ಅಭಿನಯಿಸಿರುವ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‍ ಸುಧೀಂದ್ರ, ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಮಧ್ಯೆ, ಅವರು ‘ಸ್ಪಾರ್ಕ್’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿದೆ. ‘ಡಾರ್ಲಿಂಗ್’ ಕೃಷ್ಣ ,‌ ಮಿಲನಾ ನಾಗರಾಜ್ ಹಾಗೂ ನವೀನ್ ಶಂಕರ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

ಇದಕ್ಕೂ ಮೊದಲು ‘ಜೇಮ್ಸ್’, ‘ಭರಾಟೆ’, ‘ಕನಕ’ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಹಾಂತೇಶ್ ಹಂದ್ರಾಳ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ಭರ್ಜರಿ’ ಚೇತನ್ ಕುಮಾರ್, ಆರ್. ಚಂದ್ರು ಅವರ ಗರಡಿಯಲ್ಲಿ ಪಳಗಿರುವ ಮಹಾಂತೇಶ್‍, ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ನಿರಂಜನ್ ಸುಧೀಂದ್ರ ಮಾತನಾಡಿ, ‘ಸ್ಪಾರ್ಕ್‍ ಎಂದರೆ ಕಿಡಿ ಎಂದರ್ಥ. ಮೀಡಿಯಾದವರಿಗೆ ಇರುವ ಸ್ಪಾರ್ಕ್ ಇನ್ಯಾರಿಗೂ ಇರುವುದಿಲ್ಲ. ಯಾವುದೇ ವಿಷಯದ ಬಗ್ಗೆ ಮೊದಲು ಕಿಡಿ ಹತ್ತಿಸುವವರು ಅವರೇ. ನಮ್ಮ ಕಥೆಯಲ್ಲಿ ಚಿಕ್ಕ ಕಿಡಿ ಇದೆ. ಅದನ್ನು ಸ್ಪಾರ್ಕ್ ಚಿತ್ರದ ಮೂಲಕ ಅದ್ಭುತವಾಗಿ ಹೇಳಲು ಹೊರಟ್ಟಿದ್ದಾರೆ. ಸಿನಿಮಾದಲ್ಲಿ ನಾನು ಅಭಿರಾಮ್ ಎಂಬ ಪರ್ತಕರ್ತನ ಪಾತ್ರ ಮಾಡುತ್ತಿದ್ದೇನೆ’ ಎಂದು ಚಿತ್ರದ ಬಗ್ಗೆ ಮಾತನಾಡಿದರು.

ಇದೊಂದು ನೈಜ ಘಟನೆ ಆಧಾರಿತ ಚಿತ್ರ ಎನ್ನುವ ನಿರ್ದೇಶಕ ಮಹಾಂತೇಶ್, ‘ಇದು ನನ್ನ ಮೊದಲ ಸಿನಿಮಾ. ಇದೇ ತಿಂಗಳ ಕೊನೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ. ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿಯೇ ಇರುತ್ತದೆ. ಇದೊಂದು ನೈಜ ಘಟನೆ ಆಧರಿಸಿದ ಸಿನಿಮಾ’ ಎಂದರು.

`ಸ್ಪಾರ್ಕ್’ ಚಿತ್ರವನ್ನು ಡಾ. ಗರಿಮಾ ಅವಿನಾಶ್ ವಸಿಷ್ಠ, ಗರಿಮಾ ಅವಿನಾಶ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಿರಂಜನ್‍ಗೆ ನಾಯಕಿಯಾಗಿ ರಚನಾ ನಟಿಸುತ್ತಿದ್ದು, ಅಶ್ವಿನ್‍ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ‌ ಈ ಚಿತ್ರಕ್ಕಿದೆ.

(Niranjan Sudhindra is all set for his next film, Spark, which also stars Rachana Inder as the female lead. Darling Krishna and Milana Nagaraj, along with Naveen Shankar, graced the event as special guests. D Mahantesha Handral, who has worked as a co-director on over 15 films, including James, Bharaate, and Kanaka, is now making his independent directorial debut with Spark. The movie is backed by two producers, including Dr Garima Avinash Vashishta, who is making her debut as a film producer.)

Leave a Reply

Your email address will not be published. Required fields are marked *