ಮದುವೆಗಾಗಿ ಬಂತು ‘Just Married’ ಚಿತ್ರದಿಂದ ಹೊಸ ಹಾಡು …

ಕನ್ನಡ ಚಿತ್ರಗಳಲ್ಲಿ ಮದುವೆ, ಹುಟ್ಟುಹಬ್ಬವಲ್ಲದೆ ಯುಗಾದಿ, ದೀಪಾವಳಿ ಮುಂತಾದ ಹಬ್ಬಗಳಿಗಾಗಿಯೇ ಹಲವು ಹಾಡುಗಳು ಇವೆ. ಈಗ ‘Just Married’ ಚಿತ್ರತಂಡದಿಂದ ಮದುವೆಗಾಗಿಯೇ ಒಂದು ಹೊಸ ಹಾಡು ಬಿಡುಗಡೆಯಾಗಿದೆ.
ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ, abbs studios ಲಾಂಛನದಲ್ಲಿ ನಿರ್ಮಾಣ ಮಾಡಿರುವ ‘ಜಸ್ಟ್ ಮ್ಯಾರೀಡ್’ ಚಿತ್ರಕ್ಕಾಗಿ ಹೆಸರಾಂತ ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್ ಬರೆದಿರುವ ‘ಮಾಂಗಲ್ಯಂ ತಂತು ನಾನೇನಾ’ ಎಂಬ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ‘ಇದು ಮೊದಲನೇ ಸ್ವಾಗತಾನಾ …’, ‘ಅಭಿಮಾನಿಯಾಗಿ ಹೋದೆ …’ ಮತ್ತು ‘ಕೇಳೋ ಮಚ್ಚ …’ ಹಾಡುಗಳ ಜೊತೆಗೆ ಟೀಸರ್ ಸಹ ಬಿಡುಗಡೆಯಾಗಿದೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಸಿರುವ ‘ಮಾಂಗಲ್ಯಂ ತಂತು ನಾನೇನಾ …’ ಹಾಡನ್ನು ಸಂಜಿತ್ ಹಗ್ಡೆ, ಐಶ್ವರ್ಯ ರಂಗರಾಜನ್ ಹಾಗೂ ವರುಣ್ ರಾಮಚಂದ್ರನ್ ಹಾಡಿದ್ದಾರೆ. ಈ ಹಾಡಿನಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ದೇವರಾಜ್ ಸೇರಿದಂತೆ ಚಿತ್ರದ ಹಲವು ಪ್ರಮುಖ ಪಾತ್ರಧಾರಿಗಳು ಕಾಣಿಸಿಕೊಂಡಿದ್ದಾರೆ.

ಸಿ.ಆರ್.ಬಾಬಿ ಮೊದಲ ಬಾರಿಗೆ ನಿರ್ದೇಶಿಸಿರುವ, ಈ ಚಿತ್ರದಲ್ಲಿ ಪ್ರೇಮಕಥೆಯ ಜೊತೆಗೆ ಕೌಟುಂಬಿಕ ಕಥಾಹಂದರ ಹೊಂದಿದೆ. ಚಿತ್ರಕ್ಕೆ ಸಿ.ಆರ್. ಬಾಬಿ ಚಿತ್ರಕ್ಕೆ ಕಥೆ ಬರೆದಿದ್ದು, ಸಿ.ಆರ್. ಬಾಬಿ ಹಾಗೂ ಧನಂಜಯ್ ರಂಜನ್ ಚಿತ್ರಕಥೆ ರಚಿಸಿದ್ದಾರೆ.
‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ (Shine Shetty) ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ಅಭಿನಯಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್ ಮುಂತಾದವರು ಅಭಿನಯಿಸಿದ್ದಾರೆ.
‘ಜಸ್ಟ್ ಮ್ಯಾರೀಡ್’ ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣಪತ್ರವನ್ನು ನೀಡಿದೆ. ಚಿತ್ರದ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
https://the.hosting/