Nanu Mattu Gunda; ಮುಂದುವರೆದ ಭಾಗದೊಂದಿಗೆ ಮತ್ತೆ ಬಂದ ಗುಂಡ; ಟೀಸರ್ ಬಿಡುಗಡೆ
‘ನಾನು ಮತ್ತು ಗುಂಡ’ (Nanu Mattu Gunda) ಚಿತ್ರ ಮಾಡುವಾಗಲೇ ಅದರ ಮುಂದುವರೆದ ಭಾಗದ ಬಗ್ಗೆ ಯೋಚನೆ ಮಾಡಿದ್ದರಂತೆ ನಿರ್ಮಾಪಕ ರಘು ಹಾಸನ್. ಅದಕ್ಕೆ ಸರಿಯಾಗಿ ಚಿತ್ರ ಬಿಡುಗಡೆಯಾಗಿ ತಕ್ಕ ಮಟ್ಟಿಗೆ ಹೆಸರು ಮಾಡಿದೆ. ಇದರಿಂದ ಪ್ರೇರಿತರಾದ ಅವರು, ‘ನಾನು ಮತ್ತು ಗುಂಡ 2’ ಎಂಬ ಮುಂದುವರೆದ ಭಾಗ ಮಾಡಿದ್ದಾರೆ.
‘ನಾನು ಮತ್ತು ಗುಂಡ’ ಚಿತ್ರವನ್ನು ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಮಾಡಿದರೆ, ರಘು ಹಾಸನ್ ನಿರ್ಮಿಸಿದ್ದರು. ಶಿವರಾಜ್ ಕೆ.ಆರ್. ಪೇಟೆ ಮತ್ತು ಸಿಂಬ ಎಂಬ ಶ್ವಾನವು ‘ನಾನು ಮತ್ತು ಗುಂಡ’ನಾಗಿ ಅಭಿನಯಿಸಿದ್ದರು. ಈಗ ಮುಂದುವರೆದ ಭಾಗವನ್ನು ರಘು ಅವರ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟೀಸರನ್ನು ‘ಕೆ.ಜಿ.ಎಫ್’ ಖ್ಯಾತಿಯ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ಕಿರಗಂದೂರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ-ನಿರ್ದೇಶಕ ರಘು ಹಾಸನ್, ಈ ಚಿತ್ರದಲ್ಲಿ ರಾಕೇಶ್ ಆಡಿಗ ನಾಯಕನಾಗಿದ್ದು, ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಕೇಶ್ ಅಡಿಗ ಈ ಚಿತ್ರದಲ್ಲಿ ಶಿವರಾಜ್ ಅವರ ಮಗನಾಗಿ ನಟಿಸಿದ್ದಾರೆ. ಶಂಕರನ ಮಗ ಹಾಗೂ ಶ್ವಾನದ ಪಾತ್ರದ ಮೂಲಕ ಸಿನಿಮಾ ಮುಂದುವರೆಯಲಿದೆ. ಅಲ್ಲದೆ ಸಿಂಬ ಜೊತೆ ಬಂಟಿ ಎಂಬ ಇನ್ನೊಂದು ಶ್ವಾನವೂ ಅಭಿನಯಿಸಿದೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಸಾಮಾಜಿಕ ಕಳಕಳಿ ಜೊತೆಗೆ ದೈವಿಕ ಅಂಗಳಿರುವ ಈ ಚಿತ್ರಕ್ಕೆ ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದರು.
ಈ ಚಿತ್ರವನ್ನು ಮೇ ವೇಳೆಗೆ ಬಿಡುಗಡೆ ಮಾಡುವ ಯೋಚನೆ ಇದೆಯಂತೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಆರ್.ಪಿ. ಪಟ್ನಾಯಕ್ ಸಂಗೀತ ಸಂಯೋಜಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ನಾನು ಮತ್ತು ಗುಂಡ 2’ ಚಿತ್ರದಲ್ಲಿ ರಾಕೇಶ್ ಅಡಿಗ ಮತ್ತು ರಚನಾ ಇಂದರ್ ಜೊತೆಗೆ ಯುವನ್ ಸಾಯಿ, ಗೋವಿಂದೇ ಗೌಡ, ಸಾಧು ಕೋಕಿಲ, ಅವಿನಾಶ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
Hello just wanted to give you a quick heads up. The text in your content seem to be running off…
Appreciate this post. Let me try it out.
This is a topic which is close to my heart… Many thanks! Where are your contact details though?
vergleich wettanbieter in deutschland (Wilburn) bonus
all the time i used tto read smaller aarticles which as well clear thir motive, and that is also happening…





One thought on “Nanu Mattu Gunda; ಮುಂದುವರೆದ ಭಾಗದೊಂದಿಗೆ ಮತ್ತೆ ಬಂದ ಗುಂಡ; ಟೀಸರ್ ಬಿಡುಗಡೆ”