Benny; ಕನ್ನಡಕ್ಕೆ ವಾಪಸ್ಸಾದ ‘ಜಿಂಕೆ ಮರಿ’ಯ ನಂದಿತಾ ಶ್ವೇತಾ

ಯೋಗಿ ಅಭಿನಯದ ‘ನಂದ ಲವ್ಸ್ ನಂದಿತಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಿತರಾದ ಶ್ವೇತಾ (NANDITA SWETHA), ಆ ನಂತರದ ದಿನಗಳಲ್ಲಿ ನಂದಿತಾ ಎಂದೇ ಜನಪ್ರಿಯರಾದವರು. ಈ ಚಿತ್ರದಲ್ಲಿ ‘ಜಿಂಕೆ ಮರೀನಾ, ಜಿಂಕೆ ಮರೀನಾ …’ ಅಂತ ತಾ ಕುಣಿದು ಜನಪ್ರಿಯವಾಗಿದ್ದ ಶ್ವೇತಾ ಅಲಿಯಾಸ್ ನಂದಿತಾ ಶ್ವೇತಾ, ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.
2008ರಲ್ಲಿ ಬಿಡುಗಡೆಯಾದ ‘ನಂದಾ ಲವ್ಸ್ ನಂದಿತಾ’ ಚಿತ್ರದ ನಂತರ ನಂದಿತಾ ಶ್ವೇತಾ, ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಒಂದೆರಡು ಕನ್ನಡ ಚಿತ್ರಗಳಲ್ಲಿ ಅವರು ನಟಿಸುತ್ತಾರೆ ಎಂದು ಸುದ್ದಿಯಾಯಿತಾದರೂ, ಅವರ ಕನ್ನಡ ಚಿತ್ರವೂ ಬಿಡುಗುಡೆಯಾಗಲಿಲ್ಲ. ಈಗ ಸುಮಾರು 18 ವರ್ಷಗಳ ನಂತರ ನಂದಿತಾ ಶ್ವೇತಾ, ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದೇ ‘ಬೆನ್ನಿ’ (Benny).
ನಂದಿತಾ ಶ್ವೇತಾ ಅವರನ್ನು ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಕರೆತಂದಿರುವುದು ‘ಹೊಂದಿಸಿ ಬರೆಯಿರಿ’ ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಅವರು ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ವಿನಯ್ ರಾಜಕುಮಾರ್ ಅಭಿನಯದ ‘ಪೆಪೆ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀಲೇಶ್ ಎಸ್. ನಾಯರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ಶ್ವೇತಾ ‘ಬೆನ್ನಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಟೀಸರ್‍ಗೆ ಸುದೀಪ್ ಧ‍್ವನಿ ನೀಡಿದ್ದು, ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಂದಿತಾ ಶ್ವೇತಾ ಮತ್ತು ಚಿತ್ರತಂಡದವರು ಸುದೀಪ್ ಅವರನ್ನು ಭೇಟಿ ಮಾಡಿದ್ದು, ಸುದೀಪ್ ಚಿತ್ರಕ್ಕೆ ಧ್ವನಿ ನೀಡುವುದರ ಜೊತೆಗೆ ಶುಭ ಹಾರೈಸಿದ್ದಾರೆ.
ಈ ಚಿತ್ರವು ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸುತ್ತಿದ್ದು, ಸಚಿನ್ ಬಸ್ರೂರು ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ:-
That’s a great point about player experience! Seems like platforms like hm 88 app are really focusing on accessibility & smooth gameplay – crucial for enjoying slots or live casino games. A user-friendly interface makes all the difference! ✨
Interesting read! Regulatory landscapes are shifting, impacting online platforms like hm 88 slot in Vietnam. Ensuring legitimacy & a secure experience (like their account verification) is key for players & compliance.