Shashank ಚಿತ್ರಜೀವನದ ದುಬಾರಿ ಹಾಡು ‘ನಾನೇ ನೀನಂತೆ …’ ಬಿಡುಗಡೆ

Naane neenanthe

ಶಶಾಂಕ್‍ (Shashank) ತಮ್ಮ ಚಿತ್ರಗಳಲ್ಲಿ ಹಾಡುಗಳು ವಿಶೇಷವಾಗಿರುವಂತೆ ನೋಡಿಕೊಳ್ಳುತ್ತಾರೆ. ‘ಮೊಗ್ಗಿನ ಮನಸ್ಸು’ ಚಿತ್ರದಿಂದ ‘ಕೌಸಲ್ಯ ಸುಪ್ರಜಾ ರಾಮ’ವರೆಗೂ ಅವರ ಬಹುತೇಕ ಚಿತ್ರಗಳ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ, ಇದೇ ಮೊದಲ ಬಾರಿಗೆ ತಮ್ಮ ಚಿತ್ರಜೀವನದಲ್ಲೇ ಅತೀ ಹೆಚ್ಚು ಸಮಯ ತೆಗೆದುಕೊಂಡು ಮಾಡಿದ ಹಾಗೂ ಅತ್ಯಂತ ದುಬಾರಿ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

ಕೃಷ್ಣ ಅಭಿನಯದಲ್ಲಿ ಶಶಾಂಕ್‍, ‘ಬ್ರ್ಯಾಟ್‍’ ಎಂಬ ಪ್ಯಾನ್ ‍ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ‘ನಾನೇ ನೀನಂತೆ …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಿಂದೆ ಶಶಾಂಕ್‍ ನಿರ್ದೇಶನದ ‘ಲವ್‍ 360’ ಚಿತ್ರಕ್ಕೆ ‘ಜಗವೇ ನೀನು …’ ಹಾಡಿದ್ದ ಸಿದ್‍ ಶ್ರೀರಾಮ್‍ ಈ ಹಾಡನ್ನೂ ಹಾಡಿದ್ದಾರೆ ಮತ್ತು ಆ ಹಾಡನ್ನು ಸಂಯೋಜಿಸಿದ್ದ ಅರ್ಜುನ್‍ ಜನ್ಯ, ಈ ಹಾಡಿಗೂ ರಾಗ ಹಾಕಿದ್ದಾರೆ. ಈ ಹಾಡು ಇದೀಗ ಆನಂದ್‍ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

ಈ ಹಾಡಿನ ಕುರಿತು ಮಾತನಾಡುವ ಶಶಾಂಕ್‍, ‘ನನ್ನ ವೃತ್ತಿ ಜೀವನದಲ್ಲೇ ಅತೀ ಹೆಚ್ಚು ವೆಚ್ಚದಲ್ಲಿ ಮೂಡಿಬಂದಿರುವ ಮತ್ತು ಅತೀ ಹೆಚ್ಚು ಸಮಯ ತೆಗೆದುಕೊಂಡು ಮಾಡಿರುವ ಹಾಡಿದು. ಈ ಹಾಡಿನ ಟ್ಯೂನ್ ಫೈನಲ್‍ ಆಗಲು ಸುಮಾರು 6 ತಿಂಗಳು ಬೇಕಾಯಿತು. ಈ ಹಾಡು ಮಾಡುವ ಮೊದಲೇ ಇದನ್ನು ಸಿದ್‍ ಶ್ರೀರಾಮ್‍ ಅವರಿಂದ ಹಾಡಿಸಬೇಕೆಂದು ತೀರ್ಮಾನವಾಗಿತ್ತು. ಸಿದ್‍ ಅಲ್ಲದೆ ಶ್ರೇಯಾ ಘೋಶಾಲ್‍ ಅವರಿಂದ ಹಾಡಿಸುವ ಯೋಚನೆ ಇತ್ತು. ಅಷ್ಟರಲ್ಲಿ ಅರ್ಜುನ್‍ ಜನ್ಯ, ಕನ್ನಡದಲ್ಲೇ ಶ್ರೇಯಾ ಲೆವೆಲ್‍ಗೆ ಒಬ್ಬ ಗಾಯಕಿಯನ್ನು ಹುಡುಕಿರುವುದಾಗಿ ಹೇಳಿದರು. ಆ ಗಾಯಕಿಯೇ ಲಹರಿ ಮಹೇಶ್. ನನಗೆ ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ನಿಜಕ್ಕೂ ಆಕೆ ಆ ಲೆವೆಲ್‍ಗೆ ಹಾಡುತ್ತಾರಾ ಎಂದನಿಸಿತು. ಆದರೆ, ಲಹರಿ ಅದ್ಭುತವಾಗಿ ಹಾಡಿದ್ದಾರೆ’ ಎಂದರು. ಈ ಹಾಡು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ನಾಯಕ ಕೃಷ್ಣ ಮಾತನಾಡಿ, ‘ಶಶಾಂಕ್‍ ಈ ಟ್ಯೂನ್‍ ಕೇಳಿಸಿದಾಗ, ಇದು ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ಇತ್ತು. ಒಂದು ಅದ್ಭುತ ಹಾಡು ಕೊಟ್ಟಿದ್ದಿಕ್ಕೆ ಧನ್ಯವಾದಗಳು. ತುಂಬಾ ಚೆನ್ನಾಗಿ ಕಾಣಿಸುತ್ತಿದೆ. ಚಿತ್ರದಲ್ಲಿ ಬೇರೆ ತರಹ ಕಾಣಬೇಕು ಎಂದು ಬೇರೆ ತರಹದ ಕಾಸ್ಟ್ಯೂಮ್‍ಗಳನ್ನು ಕೊಟ್ಟಿದ್ದಾರೆ. ಇಲ್ಲಿ ನನಗೆ ಹೆಚ್ಚು ಕೆಲಸವಿರಲಿಲ್ಲ. ಸ್ನಾನ ಮಾಡಿಕೊಂಡು ಹೋಗಿ ಕ್ಯಾಮೆರಾ ಮುಂದೆ ನಿಲ್ಲುವುದೇ ಕೆಲಸವಾಗಿತ್ತು. ಮಿಕ್ಕಿದ್ದೆಲ್ಲವೂ ಅವರೇ ಮಾಡಿದ್ದಾರೆ’ ಎಂದರು.

ಈ ಹಿಂದೆ ‘ಫಸ್ಟ್ ರ‍್ಯಾಂಕ್ ರಾಜು’ ನಿರ್ಮಿಸಿದ್ದ ಮಂಜುನಾಥ್‍ ಕುಂದಕೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೃಷ್ಣಗೆ ನಾಯಕಿಯಾಗಿ ಮನಿಷಾ ಕುಂದುಕೂರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಚ್ಯುತ್‍ ಕುಮಾರ್, ರಮೇಶ್‍ ಇಂದಿರಾ, ಡ್ರ್ಯಾಗನ್‍ ಮಂಜು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಅಭಿಲಾಷ್‍ ಕಲ್ಲತ್ತಿ ಛಾಯಾಗ್ರಹಣವಿದೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-

  1. Покуреха порошки безвкусные (на язык), остальные горькие. Так проще всего определить. https://www.band.us/page/99926443/ уже ожидается что нибудь?


Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ