ನಾನಲ್ಲದ ಪಾತ್ರವನ್ನು ಮಾಡುವುದಕ್ಕೆ ನನಗಿಷ್ಟ ಎಂದ Sara Ali Khan

ಅನುರಾಗ್ ಬಸು ನಿರ್ದೇಶನದ ‘ಮೆಟ್ರೋ …ಇನ್ ದಿನೋ’ (Metro in Dino) ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಆದಿತ್ಯ ರಾಯ್ ಕಪೂರ್ (Aditya Roy Kapur) ಮತ್ತು ಸಾರಾ ಅಲಿ ಖಾನ್ (Sara Ali Khan), ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರ ಮಾಡಿದ್ದಾರೆ.
‘ಮೆಟ್ರೋ … ಇನ್ ದಿನೋ’ ಚಿತ್ರವು ನಾಲ್ಕು ರೀತಿಯ ಕಥೆಗಳನ್ನು ಹೊಂದಿದ್ದು, ಪ್ರತಿಯೊಂದು ಕಥೆಯು ಪ್ರೀತಿ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳ ಭಾವನಾತ್ಮಕ ಏರಿಳಿತಗಳನ್ನು ಅನಾವರಣಗೊಳಿಸುತ್ತದೆ. ಪ್ರತಿಯೊಂದು ಕಥೆಯೂ ಒಂದಕ್ಕೊಂದು ಬೆಸೆದುಕೊಂಡಿದೆ. ಹಾಸ್ಯಮಯವಾಗಿರುವುದರ ಜೊತೆಗೆ ಹೃದಯಸ್ಪರ್ಶಿಯಾಗಿಯೂ ಜನರ ಮನಸ್ಸು ತಟ್ಟುವ ಚಿತ್ರ ಇದಾಗಿದೆ.

ಈ ಚಿತ್ರದ ಕುರಿತು ಮಾತನಾಡುವ ಆದಿತ್ಯ ರಾಯ್ ಕಪೂರ್, ‘ಇದರಲ್ಲಿ ವಿಭಿನ್ನ ವಯೋಮಾನದ ವಿಭಿನ್ನ ಪ್ರೇಮಕಥೆಗಳಿವೆ.ಪ್ರತಿಯೊಬ್ಬರೂ ತಮ್ಮನ್ನು ತಾವು ಈ ಚಿತ್ರದಲ್ಲಿ ನೋಡಿಕೊಳ್ಳಬಹುದು’ ಎಂದು ಹೇಳಿದರು.
ತಮ್ಮ ನಿಜಜೀವನಕ್ಕೂ, ಚಿತ್ರದಲ್ಲಿನ ಪಾತ್ರಕ್ಕೂ ಬಹಳ ವ್ಯತ್ಯಾಸವಿದೆ ಎಂದ ಸಾರಾ ಅಲಿ ಖಾನ್ (Sara Ali Khan), ‘ನಿಜಜೀವನದಲ್ಲಿ ನಾನು ಬಹಳ ವಾಚಾಳಿ ಮತ್ತು ನನಗನಿಸಿದ್ದನ್ನು ಹೇಳಿಕೊಳ್ಳುತ್ತೇನೆ. ಆದರೆ, ಚಿತ್ರದಲ್ಲಿನ ನನ್ನ ಪಾತ್ರವು ಅದಕ್ಕೆ ವಿರುದ್ಧವಾಗಿದೆ. ವಿಭಿನ್ನ ಪಾತ್ರಗಳನ್ನು ಮಾಡುತ್ತಿರಬೇಕು ಮತ್ತು ಎಲ್ಲಾ ಜಾನರ್‍ನ ಚಿತ್ರಗಳನ್ನು ಮಾಡುತ್ತಿರಬೇಕು ಎಂದು ನಂಬಿದವಳು ನಾನು. ನಾನಲ್ಲದ ಪಾತ್ರವನ್ನು ಮಾಡುವುದಕ್ಕೆ ನನಗಿಷ್ಟ. ಅಂಥದ್ದೊಂದು ಪಾತ್ರ ಈ ಚಿತ್ರದಲ್ಲಿ ಸಿಕ್ಕ ಕಾರಣ, ಇದನ್ನು ಒಪ್ಪಿಕೊಂಡೆ’ ಎಂದರು.
‘ಮೆಟ್ರೋ … ಇನ್ ದಿನೋ’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣಾ ಸೇನ್ ಶರ್ಮಾ, ಅಲಿ ಫಜಲ್, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ನೀನಾ ಗುಪ್ತಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಟಿ-ಸೀರೀಸ್ ಸಂಸ್ಥಥೆಯಡಿ ಭೂಷಣ್ ಕುಮಾರ್, ಕೃಷ್ಣಕುಮಾರ್ ಮುಂತಾದವರು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
One thought on “ನಾನಲ್ಲದ ಪಾತ್ರವನ್ನು ಮಾಡುವುದಕ್ಕೆ ನನಗಿಷ್ಟ ಎಂದ Sara Ali Khan”