Megastar Chiranjeevi; ಒಂದೂವರೆ ವರ್ಷಗಳ ನಂತರ ಸೆಟ್ಟೇರಿತು ಚಿರಂಜೀವಿ ಹೊಸ ಸಿನಿಮಾ

ಚಿರಂಜೀವಿ (Megastar Chiranjeevi) ಅಭಿನಯದ ಚಿತ್ರವೊಂದು ಸೆಟಟೇರಿ ಒಂದೂವರೆ ವರ್ಷಗಳೇ ಆಗಿವೆ. 2023ರ ಆಗಸ್ಟ್ ತಿಂಗಳಲ್ಲಿ ಅವರ ‘ವಿಶ್ವಂಭರ’ ಚಿತ್ರವು ಸೆಟ್ಟೇರಿತ್ತು. ಆ ಚಿತ್ರ ಈ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಕಾರಣಾಂತರಗಳಿಂದ ತಡವಾಗಿ ಚಿತ್ರ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರವನ್ನು ಜುಲೈ 24ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಒಂದು ಪಕ್ಷ ಚಿತ್ರ ಇನ್ನೂ ತಡವಾದರೆ, ಚಿರಂಜೀವಿ ಹುಟ್ಟುಹಬ್ಬದ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈ ಮಧ್ಯೆ, ಯುಗಾದಿ ಹಬ್ಬಕ್ಕೆ ಚಿರಂಜೀವಿ ಅಭಿನಯದ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‍ನಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ನಟ ವೆಂಕಟೇಶ್ ಕ್ಲ್ಯಾಪ್ ಮಾಡಿದರೆ, ನಿರ್ಮಾಪಕ ಅಲ್ಲು ಅರವಿಂದ್ ಕ್ಯಾಮೆರಾಗೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ಮೊದಲ ದೃಶ್ಯಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಇದು ಚಿರಂಜೀವಿ ಅಭಿನಯದ 157ನೇ ಚಿತ್ರವಾಗಿದ್ದು, ಚಿತ್ರಕ್ಕೆ ತಾತ್ಕಾಲಿಕವಾಗಿ ಮೆಗಾ 157 ಎಂದು ಕರೆಯಲಾಗುತ್ತಿದೆ. ವೆಂಕಟೇಶ್ ಅಭಿನಯದ ‘ಸಂಕ್ರಾಂತಿಕಿ ವಸ್ತುನ್ನಾಂ’ ನಿರ್ದೇಶಿಸಿದ್ದ ಅನಿಲ್ ರವಿಪುಡಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಂಕರ್ ವರಪ್ರಸಾದ್ ಎಂಬ ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ.
ಶೈನ್ ಸ್ಕ್ರೀನ್ ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿ ಸಾಹು ಗರಪತಿ ಮತ್ತು ಸುಶ್ಮಿತಾ ಕೊನಿಡೇಲ ಚಿತ್ರ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಭೀಮ್ ಸಿಸಿರೋಲಿಯೋ ಸಂಗೀತ, ಸಮೀರ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.
‘ಚಿರಂಜೀವಿ 157’ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ, ಚಿತ್ರದ ಹೆಸರೇನು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದ್ದು, ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

The much-anticipated film, tentatively titled #MEGA157, featuring Megastar Chiranjeevi and directed by Anil Ravipudi, was officially launched on March 30, 2025, coinciding with the auspicious festival of Ugadi. The grand pooja ceremony marked the commencement of this exciting project.
The event was graced by several prominent figures from the Telugu film industry:
Victory Venkatesh sounded the first clap.
Allu Aravind switched on the camera for the muhurat shot.
K. Raghavendra Rao, the legendary director, directed the first shot.
Dil Raju and Shirish handed over the script to the filmmakers.
The ceremony also saw the presence of other notable personalities, including Naga Vamsi, UV Creations’ Vikram, Director Vassishta, Srikanth Odela, Bobby, Shiva Nirvana, Vamshi Paidipally, Mythri Naveen & Ravi, Aswini Dutt, Ram Achanta, Sharrath Marar, Vijayendra Prasad, KS Rama Rao, KL Narayana, Suresh Babu, Venkata Satish Kilaru, Gemini Kiran, Chukkapalli Avinash, and Nimakayala Prasad.