ಸುದೀಪ್‍ಗೆ ನಾಯಕಿಯಾದ Malavika Mohanan; ಸದ್ಯದಲ್ಲೇ ಹೊಸ ಚಿತ್ರ ಪ್ರಾರಂಭ

ಸುಮಾರು ಒಂಬತ್ತು ವರ್ಷಗಳ ಹಿಂದೆ ಬಿಡುಗಡೆಯಾದ ಪ್ರೀತಂ ಗುಬ್ಬಿ ನಿರ್ದೇಶನದ ‘ನಾನು ಮತ್ತು ವರಲಕ್ಷ್ಮೀ’ ಚಿತ್ರದ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿ ಮಾಳವಿಕಾ ಮೋಹನನ್ (Malavika Mohanan), ಕನ್ನಡಕ್ಕೆ ಬಂದಿದ್ದರು. ಆ ನಂತರ ಅವರು ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ಅವರು ಕನ್ನಡಕ್ಕೆ ಮತ್ತೊಮ್ಮೆ ರೀಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದು, ಸುದೀಪ್ ಅಭಿನಯದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಕಳೆದ ವರ್ಷ ಯಶಸ್ವಿಯಾದ ಚಿತ್ರಗಳ ಪೈಕಿ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವೂ ಒಂದು. ಈ ಚಿತ್ರದ ಯಶಸ್ಸಿನಿಂದ ಪ್ರೇರೇಪಿತರಾಗಿರುವ ನಿರ್ದೇಶಕ ವಿಜಯ್ ಕಾರ್ತಿಕೇಯ, ಇದೀಗ ‘ಮ್ಯಾಕ್ಸ್ 2’ ಚಿತ್ರ ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಹೆಸರು ಕೇಳಿದರೆ, ಇದು ಮುಂದುವರೆದ ಭಾಗ ಎಂದನಿಸಿದರೂ, ಇದು ‘ಮ್ಯಾಕ್ಸ್’ ಚಿತ್ರದ ಪ್ರೀಕ್ವೆಲ್ ಅಂತೆ. ಈ ಚಿತ್ರದ ಚಿತ್ರೀಕರಣ ಜುಲೈ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಈ ಚಿತ್ರಕ್ಕೆ ಸುದೀಪ್‍ಗೆ ನಾಯಕಿಯಾಗಿ ಬಹುಭಾಷಾ ನಟಿ ಮಾಳವಿಕಾ ಮೋಹನನ್ ಆಯ್ಕೆಯಾಗಿದ್ದಾರೆ. ಈ ಚಿತ್ರಕ್ಕೆ ‘ಮ್ಯಾಕ್ಸ್ 2’ ಎಂಬ ಹೆಸರಿರುತ್ತದೋ ಅಥವಾ ಬೇರೆ ಹೆಸರಿನೊಂದಿಗೆ ಬಿಡುಗಡೆಯಾಗುತ್ತದೋ ಎಂಬ ವಿಷಯ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಸದ್ಯ ಪ್ರಭಾಸ್ ಅಭಿನಯದ ತೆಲುಗಿನ ‘ದಿ ರಾಜ ಸಾಬ್’ ಮತ್ತು ತಮಿಳಿನ ‘ಸರ್ದಾರ್ 2’ ಚಿತ್ರಗಳಲ್ಲಿ ನಟಿಸುತ್ತಿರುವ ಮಾಳವಿಕಾ ಮೋಹನನ್, ಈಗ ಮೊದಲ ಬಾರಿಗೆ ಸುದೀಪ್ ಜೊತೆಗೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಮೊದಲ ಭಾಗ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ತಮ್ಮ ಮಹಾಕ್ಷಯ್ ಪಾತ್ರವನ್ನು ಮುಂದುವರೆಸಲಿದ್ದಾರೆ.
ಈ ಚಿತ್ರವನ್ನು ಸತ್ಯಜ್ಯೋತಿ ಫಿಲಂಸ್ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಇದಕ್ಕೂ ಮೊದಲು ಸತ್ಯಜ್ಯೋತಿ ಫಿಲಂಸ್, ಸುದೀಪ್ ಅಭಿನಯದಲ್ಲಿ ಇನ್ನೊಂದು ಚಿತ್ರ ನಿರ್ಮಿಸಬೇಕಿತ್ತು. ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಚೇರನ್ ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಆ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:-
ಹೆಚ್ಚಿನ ಓದಿಗಾಗಿ:
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
One thought on “ಸುದೀಪ್‍ಗೆ ನಾಯಕಿಯಾದ Malavika Mohanan; ಸದ್ಯದಲ್ಲೇ ಹೊಸ ಚಿತ್ರ ಪ್ರಾರಂಭ”