ಶಿವಣ್ಣ ನನ್ನನ್ನು ಕ್ಷಮಿಸಿದರೆ ನಾನು ಜೀವನ ಕಟ್ಟಿಕೊಳ್ಳುತ್ತೇನೆ ಎಂದ Madenuru Manu

madenur manu and shivarajkumar controversy

ಮಡೆನೂರು ಮನು (Madenuru Manu) ಕಳೆದ ಎರಡು ತಿಂಗಳುಗಳಿಂದ ಒಂದಲ್ಲ ಒಂದು ವಿವಾದದಲ್ಲಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೆಲವು ದಿನಗಳ ಕಾಲ ಜೈಲುಪಾಲಾಗಿದ್ದರು. ಅದರ ಜೊತೆಗೆ ಶಿವರಾಜಕುಮಾರ್, ದರ್ಶನ್‍ (Challenging star Darshan) ಮತ್ತು ಧ್ರುವ (Dhruva Sarja) ಸರ್ಜಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮನು, ಅದಕ್ಕೆ ಚಿತ್ರರಂಗದಿಂದ ಬ್ಯಾನ್‍ ಸಹ ಆಗಿದ್ದರು. ಇದೀಗ ಬೇಲ್‍ ಮೇಲೆ ಹೊರಗೆ ಬಂದಿರುವ ಅವರು, ಇತ್ತೀಚೆಗೆ ಪತ್ರಿಕಾಗೋಷ್ಠಿ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನನಾಡಿರುವ ಮನು, ‘ನನ್ನ ಮೇಲೆ ಅಷ್ಟೊಂದು ದ್ವೇಷ ಯಾಕೆ? ನನ್ನನ್ನು ಅಷ್ಟೊಂದು ದ್ವೇಷ ಮಾಡುವ ಬದಲು ತಟ್ಟೆಯಲ್ಲಿ ಒಂದಿಷ್ಟು ವಿಷ ಹಾಕಿಕೊಟ್ಟಿದ್ದರೆ ಆಗುತ್ತಿತ್ತು. ಯವುದೋ ಪ್ರಕರಣದಲ್ಲಿ ರಾಜಿಯಾಗೋಣ ಎಂದು ಕರೆದು ನನ್ನ ಧ್ವನಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ನಾನು ಹಳ್ಳಿಯಿಂದ ಬಂದವನು. ಏನು ಮಾತನಾಡಬೇಕೆಂದು ನನಗೆ ಗೊತ್ತಿಲ್ಲ. ಹೋಗಿ ಹಳ್ಳಕ್ಕೆ ಬಿದ್ದೆ. ಅಂದು ನಾನು ಹಲವು ಖುಷಿಯ ವಿಚಾರಗಳನ್ನು ಹೇಳಿಕೊಂಡಿದ್ದೆ. ಆದರೆ, ಅದೆಲ್ಲವನ್ನೂ ಬಿಟ್ಟು, ಕೆಲವು ವಿಷಯಗಳನ್ನು ಮಾತ್ರ ಬಹಿರಂಗಪಡಿಸಿದ್ದಾರೆ’ ಎಂದಿದ್ದಾರೆ,

ಆ ಆಡಿಯೋ ತನ್ನದಲ್ಲ ಎಂದಿದ್ದ ಮನು, ಇದೀಗ ಆ ಧ್ವನಿ ತನ್ನದೇ ಎಂದು ಹೇಳಿಕೊಂಡಿದ್ದಾರೆ. ‘ಆ ಆಡಿಯೋದಲ್ಲಿರುವುದು ನನ್ನದೇ ಧ್ವನಿ. ಆದರೆ, ಅದನ್ನು ಹೇಳುವಾಗ ನಾನು ಪ್ರಜ್ಞೆಯಲ್ಲಿರಲಿಲ್ಲ. ನಾನು ಯಾವತ್ತೂ ಯಾರಿಗೂ ಸಾವು ಬಯಸುವುದಿಲ್ಲ. ನಾನು ಹಾಗೆ ಮಾತಾಡಿದ್ದಿಕ್ಕೆ ದಿನಾ ಪಶ್ಚಾತ್ತಾಪ ಪಡುತ್ತಿದ್ದೇನೆ. ಇಷ್ಟು ವರ್ಷದ ಜರ್ನಿ ಹೀಗಾಯ್ತಲ್ಲಾ ಎಂಬ ಬೇಸರವಿದೆ. ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿ, ಜ್ಯೂನಿಯರ್ ಆರ್ಟಿಸ್ಟ್ ಆಗಿ, ಕಿರುತೆರೆಯಲ್ಲಿ ಕಾಣಿಸಿಕೊಂಡು, ನನ್ನ ಗುಂಡಿಯನ್ನು ನಾನೇ ತೋಡಿಕೊಳ್ಳುತ್ತೇನಾ? ಕಲೆಯನ್ನು ನಂಬಿ ಬಂದವನು ನಾನು. ನನಗೆ ಇನ್ನೂ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಶಿವಣ್ಣ, ದರ್ಶನ್‍ ಮತ್ತು ಧ್ರುವ ಆಶೀರ್ವಾದ ಮಾಡಿದರೆ, ಚಿತ್ರವನ್ನು ರೀ-ರಿಲೀಸ್‍ ಮಾಡುವ ಯೋಚನೆ ಇದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-


One thought on “ಶಿವಣ್ಣ ನನ್ನನ್ನು ಕ್ಷಮಿಸಿದರೆ ನಾನು ಜೀವನ ಕಟ್ಟಿಕೊಳ್ಳುತ್ತೇನೆ ಎಂದ Madenuru Manu

Leave a Reply

Your email address will not be published. Required fields are marked *

ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ ಕನ್ನಡಕ್ಕೆ ವಾಪಸ್ಸಾದ ‘ಜಿಂಕೆ ಮರಿ’ಯ ನಂದಿತಾ ಶ್ವೇತಾ ಮಗಳ ಜೊತೆ ಮಿಲನಾ ನಾಗರಾಜ್‌