‘ಯೋಗಿ’ ಆಯ್ತು, ಈಗ ‘ಲೂಸ್‍ ಮಾದ’ನಾದ ಲೂಸ್ ಮಾದ Yogi …

Loose mada yogi

ಇಷ್ಟು ದಿನ ಯಾಕೆ ಯಾರೂ ಯೋಗಿ ಅಭಿನಯದಲ್ಲಿ ಇಂಥದ್ದೊಂದು ಶೀರ್ಷಿಕೆ ಇಟ್ಟು ಚಿತ್ರ ಮಾಡಲಿಲ್ಲವೋ ಗೊತ್ತಿಲ್ಲ. ಯೋಗಿ ಅಭಿನಯದಲ್ಲಿ ‘Yogi’ ಎಂಬ ಚಿತ್ರ ಕೆಲವು ವರ್ಷಗಳ ಹಿಂದೆ ಬಂದಿತ್ತಾದರೂ, ‘ಲೂಸ್‍ ಮಾದ’ ಎಂಬ ಶೀರ್ಷಿಕೆಯನ್ನು ಯಾರೂ ಮುಟ್ಟಿರಲಿಲ್ಲ. ಇದೀಗ ‘ಲೂಸ್‍ ಮಾದ’ ಎಂಬ ಶೀರ್ಷಿಕೆಯಡಿ ಚಿತ್ರ ಪ್ರಾರಂಭವಾಗಿದೆ.

ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ‘ದುನಿಯಾ’ ಚಿತ್ರದಲ್ಲಿ ‘ಲೂಸ್ ಮಾದ’ ಎಂಬ ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ನಂತರ ಯೋಗಿ, ‘ಲೂಸ್ ಮಾದ’ ಅಂತಲೇ ಜನಪ್ರಿಯರಾದರು. ಈಗ ಅದೇ ಹೆಸರಿನ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಮುಹೂರ್ತವಾಗಿದೆ.

ಈ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು ಎನ್ನುವ ಯೋಗಿ, ‘ನಾನೇ ಈ ಶೀರ್ಷಿಕೆ ಬೇಡ ಎನ್ನುತ್ತಿದ್ದೆ. ಈ ಚಿತ್ರಕ್ಕೂ ಬೇಡ ಎಂದಿದ್ದೆ. ಆದರೆ, ಈ ಕಥೆಗೂ ಶೀರ್ಷಿಕೆಗೂ ಪೂರಕವಾಗಿದೆ. ಇಲ್ಲಿ ನನ್ನ ಪಾತ್ರ ಸಹ ಅದೇ ತರಹ ಇದೆ. ಹಾಗಂತ ‘ದುನಿಯಾ’ ಸಿನಿಮಾದ ಲೂಸ್ ಮಾದನ‌ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಇದೇ ವಿಭಿನ್ನವಾದ ಚಿತ್ರ ಮತ್ತು ಪಾತ್ರವಾಗಲಿದೆ’ ಎನ್ನುತ್ತಾರೆ ಯೋಗಿ.

ಈ ಚಿತ್ರಕ್ಕೆ ರಂಜಿತ್‍ ಗೌಡ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಯೋಗಿ ಅಭಿನಯದಲ್ಲಿ ರಂಜಿತ್‍, ‘ಕಂಸ’ ಎಂಬ ಚಿತ್ರವನ್ನು ಘೋಷಿಸಿದ್ದರು. ಆದರೆ, ಅದು ಕಾರಣಾಂತರಗಳಿಂದ ಅದನ್ನು ಬಿಟ್ಟು, ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

‘ಲೂಸ್‍ ಮಾದ’ ಕುರಿತು ಮಾತನಾಡುವ ರಂಜಿತ್‍, ‘ಈ ಚಿತ್ರಕ್ಕೆ ‘The Wolf’ ಎಂಬ ಅಡಿಬರಹವಿದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಬೇರೆ ಪ್ರಾಣೀಗಳಿಗೆ ಹೋಲಿಸಿದರೆ, ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ.  ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಅಂಜದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ’ ಎಂದು ಹೇಳಿದರು.

‘ಲೂಸ್‍ ಮಾದ’ ಚಿತ್ರವನ್ನು ಮಂಗಳೂರಿನ ಧರ್ಮೇಂದ್ರ ನಿರ್ಮಿಸುತ್ತಿದ್ದಾರೆ. ಅವರು ಯೋಗಿಯ ಅಭಿಮಾನಿಯಂತೆ. ಚಿತ್ರದಲ್ಲಿ ಆದಿ ಲೋಕೇಶ್‍, ಕಿಶೋರ್, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ಪ್ರದೀಪ್ ರೆಡ್ಡಿ ಛಾಯಾಗ್ರಹಣವಿದೆ.

ಅಂದ ಹಾಗೆ, ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-


28 thoughts on “‘ಯೋಗಿ’ ಆಯ್ತು, ಈಗ ‘ಲೂಸ್‍ ಮಾದ’ನಾದ ಲೂಸ್ ಮಾದ Yogi …

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!