Krishna Ajai Rao Yuddhakaanda; ಯುದ್ಧಕಾಂಡಕ್ಕಾಗಿಯೇ ಕಾರು ಮಾರಿದ್ರಾ ಅಜಯ್‌; ಕೃಷ್ಣನ ವಾಹನದ ಕಥೆ

ಯುದ್ಧಕಾಂಡ (Yuddhakaanda) ಸಿನಿಮಾದ ಮೂಲಕ ನಟರಾಗಿ, ನಿರ್ಮಾಪಕರಾಗಿ ಕೃಷ್ಣ ಅಜಯ್‌ ರಾವ್‌ (krishna Ajai Rao) ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. 2021ರಲ್ಲಿ ಲವ್ ಯು ರಚ್ಚು ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಯಾವುದೇ ಸಿನಿಮಾ ಅಪ್ಡೇಟ್‌ ಅಜಯ್‌ ಕೊಟ್ಟಿರಲಿಲ್ಲ. ಸುಮಾರು ನಾಲ್ಕು ವರ್ಷಗಳ ಅಂತರ ತೆಗೆದುಕೊಂಡು ಒಂದು ಉತ್ತಮ ಕಳಕಳಿಯ ಸಿನಿಮಾ ಮಾಡಲು ಕೃಷ್ಣ ಅಜಯ್‌ ಮುಂದಾಗಿದ್ದಾರೆ.

ಅಜಯ್‌ ರಾವ್‌ ಎಂದಾಕ್ಷಣ ನೆನಪಾಗುವುದು ಕೃಷ್ಣ ಟೈಟಲ್‌ ಸರಣಿಯಲ್ಲಿ ಬಂದ ಹಿಟ್‌ ಚಿತ್ರಗಳು. ಅವರ ಕೃಷ್ಣನ ಲವ್‌ ಸ್ಟೋರಿಯಿಂದ ಬೆನ್ನು ಬೆನ್ನು ಕೃಷ್ಣ ಟೈಟಲ್‌ ಸಿನಿಮಾಗಳು ಬಂದವು. ನಂತರ ತಾಯಿಗೆ ತಕ್ಕ ಮಗ ಎಂಬ ಲಾಯರ್‌ ಮಗನ ಪಾತ್ರ ಮಾಡಿದ್ದರು. ಅದರಲ್ಲಿ ಸುಮಲತಾ ಅವರ ಮಗನಾಗಿ ನಟಿಸಿದ್ದರು. ಈಗ ಸ್ವತಃ ಅಜಯ್‌ ರಾವ್‌ ಕಪ್ಪುಕೋಟು ಧರಿಸಿ ವಾದಕ್ಕೆ ಇಳಿದಿದ್ದಾರೆ.

ಹೌದು.., ಕೃಷ್ಣ ಅಜಯ್ ರಾವ್ ಪವನ್ ಭಟ್ ನಿರ್ದೇಶನದಲ್ಲಿ ಯುದ್ಧಕಾಂಡ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ. ಸ್ತ್ರೀಯರಿಗೆ ಸಮಾಜದಲ್ಲಿ ಆಗುತ್ತಿರುವ ಶೋಷಣೆಗಳ ವಿರುದ್ಧ ದನಿ ಎತ್ತುವ ಲಾಯರ್‌ ಆಗಿ ಅಜಯ್‌ ರಾವ್‌ ಕಾಣಿಸಿಕೊಳ್ಳುತ್ತಿದ್ದಾರೆ. ಕೋರ್ಟ್‌ ಕಥೆಯನ್ನು ಒಳಗೊಂಡಿರುವ ಜೈ ಭೀಮ್‌ ನಂತಹ ಪರ ಭಾಷೆಯ ಸಿನಿಮಾಗಳು ಕನ್ನಡಿಗರ ಮೆಚ್ಚುಗೆಯನ್ನೂ ಪಡೆದಿತ್ತು. ಈಗ ಕನ್ನಡದಲ್ಲೂ ಅಂತಹದ್ದೇ ಒಂದು ಪ್ರಯತ್ನ ಇದು ಎಂದು ಹೇಳಬಹುದಾಗಿದೆ.

ಪವನ್‌ ಭಟ್‌ ಬಂದು ಕಥೆ ಹೇಳಿದ ಕೂಡಲೇ ಅಜಯ್‌ ರಾವ್‌ ತಾವೇ ನಿರ್ಮಾಣ ಮಾಡುವುದಾಗಿ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಅವರ ಮಗಳು ಎಂದು ಇತ್ತೀಚಿಗೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರು. “ನನಗೂ ಮಗಳಿದ್ದಾಳೆ. ಕಥೆ ಕೇಳಿದಾಗ ನನಗೆ ಮೊದಲು ತಲೆಗೆ ಬಂದದ್ದೇ ಅದು ಹೀಗಾಗಿ ನಾನೇ ಸಿನಿಮಾ ನಿರ್ಮಾಣಕ್ಕೂ ಇಳಿದೆ” ಎಂದು ಅಜಯ್‌ ರಾವ್‌ ಹೇಳಿದ್ದಾರೆ.


ಅಜಯ್‌ ರಾವ್‌ ಅವರ ಮಗಳು ಕಾರಿ ಬಳಿ ಅಳುತ್ತಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗ್ತಿದೆ. ಯುದ್ಧಕಾಂಡ ಸಿನಿಮಾಕ್ಕಾಗಿ ಅಜಯ್‌ ರಾವ್‌ ಕಾರು ಮಾರಿದ್ದಾರೆ ಎಂದು ಎಲ್ಲೆಡೆ ಇದೇ ಸುದ್ದಿ. ಆದರೆ ಇರದ ಸತ್ಯವೇ ಬೇರೆ. ಈಗ ವೈರಲ್‌ ಆಗಿರುವ ವಿಡಿಯೋ ಎರಡು ವರ್ಷಗಳ ಹಳೆಯದ್ದು ಎಂದು ನಿರ್ದೇಶ ಪವನ್‌ ಭಟ್‌ ಮತ್ತು ನಟ, ನಿರ್ಮಾಪಕ ಅಜಯ್‌ ರಾವ್‌ ಸಂದರ್ಶನಗಳಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

‘ಯುದ್ಧಕಾಂಡ’ ಚಿತ್ರ ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ / ಅಜಯ್ ರಾವ್ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ಪವನ್‌ ಭಟ್‌ ಕಥೆ, ಚಿತ್ರಕಥೆ ಬರೆದಿದ್ದಾರೆ.


  1. […] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍ […]

  2. […] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]

  3. […] ತುಳು ಭಾಷೆಯ ‘Daskath’, ಈಗ ಕನ್ನಡಕ್ಕೆ ಡಬ್‍ ಆಗಿ ಬಿಡುಗಡೆ […]

Leave a Reply

Your email address will not be published. Required fields are marked *