Zee 5 ಜೊತೆ ಕೈ ಜೋಡಿಸಿದ KRG ಸ್ಟುಡಿಯೋಸ್‍; ವೆಬ್ ಸಿರೀಸ್ ನಿರ್ಮಾಣ

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್‍ ನೇತೃತ್ವದ KRG ಸ್ಟುಡಿಯೋಸ್ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಹೆಸರು ಮಾಡಿರುವ KRG ಸ್ಟುಡಿಯೋಸ್ ವೆಬ್ ಸಿರೀಸ್ ನಿರ್ಮಾಣಕ್ಕಿಳಿದೆ. Zee 5 ಜೊತೆ ಕೈ ಜೋಡಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ವೆಬ್‍ ಸರಣಿಗಳ ನಿರ್ಮಾಣಕ್ಕೆ ಕೈಹಾಕಿದೆ.

ಮೊದಲ ಹಂತವಾಗಿ ‘ಶೋಧ’ ಎಂಬ ವೆಬ್ ಸರಣಿಯನ್ನು KRG ನಿರ್ಮಿಸಿದೆ. ಈ ವೆಬ್‍ ಸರಣಿಯನ್ನು ಸುನೀಲ್ ಮೈಸೂರು ನಿರ್ದೇಶಿಸಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸರಣಿಯಾಗಿದೆ. ಆರು ಸಂಚಿಕೆಯುಳ್ಳ ಈ ವೆಬ್ ಸರಣಿಗೆ ಸುಹಾಸ್ ನವರತ್ನ ಕಥೆ ಬರೆದಿದ್ದಾರೆ.

‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’ ಮತ್ತು ‘ಲೂಸಿಯಾ’ ಚಿತ್ರಗಳ ಮೂಲಕ ನಟನೆ ಹಾಗೂ ನಿರ್ದೇಶನದಲ್ಲಿ ಹೆಸರು ಮಾಡಿರುವ ಪವನ್ ಕುಮಾರ್, ‘ಶೋಧ’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕವಲುದಾರಿ’, ‘ಸಕುಟುಂಬ ಸಪರಿವಾರ ಸಮೇತ’ ಹಾಗೂ ‘ಸ್ವಾತಿಮುತ್ತಿನ ಮಳೆ ಹನಿಯೇ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಸಿರಿ ರವಿಕುಮಾರ್ ಈ ಸರಣಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

‘ಅಯ್ಯನ‌ ಮನೆ’ ಸರಣಿ ಬಳಿಕ Zee 5ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮತ್ತೊಂದು ವೆಬ್ ಸರಣಿ ಈ ಶೋಧ. ಈ ಸರಣಿಯು ಆಗಸ್ಟ್ 22ರಂದು ಸ್ಟ್ರೀಮಿಂಗ್ ಆಗಲಿದೆ.


ಇದನ್ನೂ ಓದಿ :-


ಹೆಚ್ಚಿನ ಓದಿಗಾಗಿ :-


49 thoughts on “Zee 5 ಜೊತೆ ಕೈ ಜೋಡಿಸಿದ KRG ಸ್ಟುಡಿಯೋಸ್‍; ವೆಬ್ ಸಿರೀಸ್ ನಿರ್ಮಾಣ

Leave a Reply

Your email address will not be published. Required fields are marked *