ಮೇ 30ಕ್ಕೆ ಕೋಮಲ್ ಅಭಿನಯದ ಚಿತ್ರದ ಬಿಡುಗಡೆ; ಆದರೆ ಇದು ಕನ್ನಡ ಚಿತ್ರವಲ್ಲ

ಚಿತ್ರರಂಗದಿಂದ ಸ್ವಲ್ಪ ಕಾಲ ದೂರವಿದ್ದ ಕೋಮಲ್, ಆ ನಂತರ ಒಂದರಹಿಂದೊಂದು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಸದ್ಯ ಅವರ ಅಕೌಂಟ್‍ನಲ್ಲಿ ‘ಕೋಣ’, ‘ಕುಟೀರ’, ‘ರೋಲೆಕ್ಸ್’ ಮತ್ತು ‘ಕಾಲಾಯ ನಮಃ’ ಚಿತ್ರಗಳಿದ್ದು, ಅವೆಲ್ಲವೂ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಹೀಗಿರುವಾಗಲೇ, ಅವರು ಸದ್ದಿಲ್ಲದೆ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಇದೇ ಮೇ 30ರಂದು ಬಿಡುಗಡೆ ಆಗುತ್ತಿದೆ. ಕೋಮಲ್ ಸುಮಾರು 1 ವರ್ಷದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಳ್ಳುವುದರ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿದ್ದರು. ಅದೇ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿರುವುದು. ಹೆಸರು ‘ರಾಜಪುತ್ರನ್’.
ತಮಿಳಿನ ಜನಪ್ರಿಯ ನಟು ಪ್ರಭು ಈ ಚಿತ್ರದ ನಾಯಕ. ಈ ಚಿತ್ರದಲ್ಲಿ ಹಿರಿಯ ನಟ ಪ್ರಭು ಜೊತೆಗೆ ವೆಟ್ರಿ, ಕೃಷ್ಣಪ್ರಿಯಾ, ಮನ್ಸೂರ್ ಅಲಿ ಖಾನ್ ಮುಂತಾದವರು ನಟಿಸಿದ್ದು, ಮಹಾಕಂದನ್ ನಿರ್ದೇಶನ ಮಾಡಿದ್ದಾರೆ.
‘ರಾಜಪುತ್ರನ್’ ಚಿತ್ರದ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಈ ಟ್ರೇಲರ್‍ನಲ್ಲಿ ಬಾಯಲ್ಲಿ ಸಿಗಾರ್ ಹಚ್ಚಿಕೊಂಡು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಎಂಟ್ರಿ ಕೊಡುವ ದೃಶ್ಯವಿದೆ. ಚಿತ್ರದಲ್ಲಿ ಅವರ ಪಾತ್ರವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಕೋಮಲ್ ಇದಕ್ಕೂ ಮುನ್ನ 2014ರಲ್ಲಿ ಬಿಡುಗಡೆಯಾಗಿದ್ದ ‘ಐಂದಾಂ ತಲೈಪಮುರೈ ಸಿದ್ಧ ವೈದ್ಯ ಶಿಖಾಮಣಿ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಈಗ ಸುಮಾರು 11 ವರ್ಷಗಳ ನಂತರ ಕೋಮಲ್ ಅಭಿನಯದ ಇನ್ನೊಂದು ತಮಿಳು ಚಿತ್ರ ಬಿಡುಗಡೆಯಾಗುವುದಕ್ಕೆ ಸಿದ್ಧವಾಗುತ್ತಿದೆ.
ಬಿಡುಗಡೆಯಾದ ಕೋಮಲ್ ಅಭಿನಯದ ಕೊನೆಯ ಕನ್ನಡ ಚಿತ್ರವೆಂದರೆ ಅದು ‘ಎಲಾ ಕುನ್ನಿ’. ಈ ಚಿತ್ರದಲ್ಲಿ ಅವರು ವಜ್ರಮುನಿಯಾಗಿ ನಟಿಸಿದ್ದರು. ಅಕ್ಟೋಬರ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]