ಬರಲಿದ್ಯಾ ಮ್ಯಾಕ್ಸ್‌ನ ಪ್ರಿಕ್ವೆಲ್, ಬಿಲ್ಲ ರಂಗ ಭಾಷಕ್ಕೂ ಮೊದಲೇ ತೆರೆಕಾಣುತ್ತಾ kiccha sudeepನ ಮತ್ತೊಂದು ಚಿತ್ರ..?

ಸುದೀಪ್ (kiccha sudeep) ಅಭಿನಯದ ಮಾಸ್ ಎಂಟಟೈನರ್ ಫಿಲ್ಮ್ ಮ್ಯಾಕ್ಸ್. ಇದರಲ್ಲಿ ಪೊಲೀಸ್ ಪಾತ್ರದಲ್ಲಿ ಕಿಚ್ಚ ಎಲ್ಲರಿಗೆ ಇಷ್ಟ ಆಗಿದ್ದಾರೆ. ಹಿಟ್ ಆದ ಮ್ಯಾಕ್ಸ್‌ನ ಪ್ರಿಕ್ವೆಲ್ ಅಥವಾ ಸಿಕ್ವೆಲ್ ಬರುವ ಸಾಧ್ಯತೆ ಇದೆ. ʻಮ್ಯಾಕ್ಸ್ 2ʼ ಬರುವುದು ನಿಜವಷ್ಟೇ ಅಲ್ಲ, ಅದು ‘ಬಿಲ್ಲ ರಂಗ ಬಾಷ’ ಚಿತ್ರಕ್ಕೂ ಮೊದಲೇ ಬಿಡುಗಡೆಯಾಗಲಿದೆ. ಹೌದು, ʻಮ್ಯಾಕ್ಸ್ 2ʼ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ಮೊದಲ ಭಾಗ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.
ಕಲೈಪುಲಿ ಎಸ್. ಧನು ಮತ್ತು ಸುದೀಪ್ ಜೊತೆಯಾಗಿ ಮ್ಯಾಕ್ಸ್ ಚಿತ್ರವನ್ನು ನಿರ್ಮಿಸಿದ್ದರು. ʻಮ್ಯಾಕ್ಸ್ʼ ಪ್ಯಾನ್ ಇಂಡಿಯಾ ಹಿಟ್ ಆಗಿತ್ತು. ಚಿತ್ರದ ಆರಂಭದಲ್ಲಿ ಸುದೀಪ್ ಬಗ್ಗೆ ಅವರ ಹಿಂದಿನ ಕೆಲಸದ ಬಗ್ಗೆ ಸ್ವಲ್ಪ ಹಿಂಟ್ ಕೊಡಲಾಗಿತ್ತು. ಅದನ್ನೇ ಕಥೆ ಮಾಡುತ್ತಾರೋ ಅಥವಾ ಕಥೆಯ ಮುಂದುವರೆದ ಭಾಗವನ್ನು ಚಿತ್ರಿಸಿಲಾಗುತ್ತದೆ.
ಅರ್ಜುನ್ ಮಹಾಕ್ಷಯ್ ಸಸ್ಪೆಂಡ್ ಆಗಿದ್ದಾದರೂ ಯಾಕೆ?
ʻಮ್ಯಾಕ್ಸ್ 2ʼ ಎಂಬ ಹೆಸರು ಕೇಳುತ್ತಿದ್ದಂತೆಯೇ ಇದು ‘ಮ್ಯಾಕ್ಸ್’ (Max 2) ಚಿತ್ರದ ಮುಂದುವರೆದ ಭಾಗ ಎಂದೆನಿಸಬಹುದು. ಆದರೆ, ಇದು ಸೀಕ್ವೆಲ್ ಅಲ್ಲ. ಅದರ ಪ್ರೀಕ್ವೆಲ್ ಎಂದು ಹೇಳಲಾಗುತ್ತಿದೆ. ʻಮ್ಯಾಕ್ಸ್ʼ ಚಿತ್ರದಲ್ಲಿ ಸುದೀಪ್ ಸಸ್ಪೆಂಡ್ ಆಗಿ ನಂತರ ಡ್ಯೂಟಿಗೆ ಮರಳಿರುತ್ತಾರೆ. ‘ಮ್ಯಾಕ್ಸ್ 2’ನಲ್ಲಿ ಅದರ ಹಿಂದಿನ ಕಥೆಯನ್ನು ಹೇಳಲಾಗುತ್ತದಂತೆ. ಸುದೀಪ್ ಅವರ ಮಹಾಕ್ಷಯ್ ಪಾತ್ರ ಯಾಕೆ ಸಸ್ಪೆಂಡ್ ಆಗಿರುತ್ತದೆ ಮತ್ತು ಅದರ ಹಿಂದೆ ಏನೆಲ್ಲಾ ಘಟನೆಗಳು ನಡೆದಿರುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದಂತೆ. ಈ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಮುಂದುವರೆಯಲಿದ್ದು, ಮಿಕ್ಕಂತೆ ಬಹಳಷ್ಟು ಹೊಸ ಪಾತ್ರಗಳು ಸೇರಿಕೊಳ್ಳಲಿವೆ. ಈ ಚಿತ್ರದ ಚಿತ್ರೀಕರಣ ಸಹ ಮಹಾಬಲಿಪುರಂ ಸುತ್ತಮುತ್ತ ನಡೆಯುತ್ತದೆ ಎಂದು ಹೇಳಲಾಗಿದೆ.
ಬಿಲ್ಲ ರಂಗ ಬಾಷ ಕಥೆ ಏನು?
‘ಬಿಲ್ಲ ರಂಗ ಭಾಷಾ’ ಚಿತ್ರದ ಮುಹೂರ್ತ ಏಪ್ರಿಲ್ 16ರಂದು ನಡೆದಿತ್ತು. ಅಲ್ಲಿಂದ ಸುಮಾರು 10 ದಿನಗಳ ಕಾಲ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಸದ್ಯ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ನೈಸ್ ರಸ್ತೆಯ ಬಳಿ ಚಿತ್ರಕ್ಕೆಂದೆ ದೊಡ್ಡ ಸೆಟ್ ನಿರ್ಮಿಸಲಾಗುತ್ತಿದೆ. ತೆಲುಗಿನಲ್ಲಿ ‘ಹನುಮಾನ್’ ಚಿತ್ರವನ್ನು ನಿರ್ಮಿಸಿದ್ದ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ, ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಬಿಆರ್‌ಬಿ ನಿರ್ಮಾಣವಾಗುತ್ತಿದೆ. ವಿಕ್ರಾಂತ್ ರೋಣದ ನಂತರ ಕಿಚ್ಚನಿಗೆ ಅನೂಪ್ ಭಂಡಾರಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
‘ಬಿಲ್ಲ ರಂಗ ಭಾಷ’ ಚಿತ್ರದ ಗ್ಯಾಪ್‍ನಲ್ಲೇ ‘ಮ್ಯಾಕ್ಸ್ 2’ ಚಿತ್ರದ ಚಿತ್ರೀಕರಣ ನಡೆಯಲಿದ್ದು, ʻಮ್ಯಾಕ್ಸ್ 2ʼ ಮೊದಲು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] ಪ್ರತಿಯೊಬ್ಬ ಅಪ್ಪ-ಅಮ್ಮನಿಗೂ ಎಸ್. ನಾರಾಯಣ್ ಸಂದೇಶ … […]
[…] ಚಿತ್ರಮಂದಿರಗಳಲ್ಲಿ ‘Ajnathavasi’ ನೋಡದವರಿಗೆ ಓಟಿಟಿಯಲ್ಲಿ ನೋಡಲು ಅವಕಾಶ […]
[…] ಕೆಂಪೇಗೌಡರ ಕುರಿತು ಇನ್ನೊಂದು ಚಿತ್ರ; ಈ ಬಾರಿ AI ತಂತ್ರಜ್ಞಾನದಲ್ಲಿ […]
[…] […]
[…] 20 ನಿಮಿಷ ಹೊಸ ದೃಶ್ಯಗಳೊಂದಿಗೆ ‘Sanju Weds Geetha 2’ ಮತ್ತೆ ಮರುಬಿಡುಗಡೆ […]
One thought on “ಬರಲಿದ್ಯಾ ಮ್ಯಾಕ್ಸ್‌ನ ಪ್ರಿಕ್ವೆಲ್, ಬಿಲ್ಲ ರಂಗ ಭಾಷಕ್ಕೂ ಮೊದಲೇ ತೆರೆಕಾಣುತ್ತಾ kiccha sudeepನ ಮತ್ತೊಂದು ಚಿತ್ರ..?”