Kiccha Sudeep; ಸುದೀಪ್‍ ಕಿಚ್ಚ, ಸೋದರಳಿಯ ಪಚ್ಚ; ಸಂಚಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ

ಸುದೀಪ್‍ (sudeep) ಸೋದರಳಿಯ ಸಂಚಿತ್ ಸಂಜೀವ್‍ (Sanchith sanjeev) ಅಲಿಯಾಸ್‍ ಸಂಚಿ ಅಭಿನಯದಲ್ಲಿ ಜನವರಿಯಲ್ಲಿ ಹೊಸ ಚಿತ್ರ ಪ್ರಾರಂಭವಾಗಿತ್ತು. ಆದರೆ, ಚಿತ್ರದ ಮುಹೂರ್ತವಾದರೂ ಚಿತ್ರದ ಹೆಸರು ಘೋಷಣೆಯಾಗಿರಲಿಲ್ಲ. ಫೆ.5ರಂದು ಸಂಚಿ ಹುಟ್ಟುಹಬ್ಬದ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣಗೊಳಿಸುವುದಾಗಿ ಚಿತ್ರತಂಡದವರು ಹೇಳಿಕೊಂಡಿದ್ದರು.

ಅದರಂತೆ ಇದೀಗ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂಬ ಹೆಸರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಸಂಚಿತ್‍ನ ಮೊದಲ ನೋಟದ ಪೋಸ್ಟರ್ ಹಾಗೂ ಪ್ರೋಮೋ ಸಹ ಬಿಡುಗಡೆಯಾಗಿದೆ. ಸುದೀಪ್‍ ಈ ಪ್ರೋಮೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರೆ. ಬರೀ ಪ್ರೋಮೋ ಅಷ್ಟೇ ಅಲ್ಲ, ಈ ಪ್ರೋಮೋದ ಮೇಕಿಂಗ್‍ ವೀಡಿಯೋ ಸಹ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

 ಮೈಸೂರಿನ ಕ್ರೇಜಿ ಸ್ಟಾರ್ ಬಾರ್ ಅಂಡ್ ರೆಸ್ಟೊರೆಂಟ್‍ಗೆ ಎಂಟ್ರಿ ಕೊಡುವ ಫಾರಿನ್ ಲೇಡಿಗೆ, ಅಲ್ಲೊಂದು ಖಾಲಿ ಟೇಬಲ್‍ ಕಾಣುತ್ತದೆ. ಅಲ್ಲಿ ಹೋಗಿ ಕುಳಿತುಕೊಳ್ಳುವುದಕ್ಕೆ ಯಾರೂ ಬಿಡುವುದಿಲ್ಲ. ಆ ಟೇಬಲ್‍ ಯಾರದ್ದು? ಎಂದು ಕೇಳುವಾಗ ‘ಮ್ಯಾಂಗೋ ಪಚ್ಚ’ನ ಆಗಮನವಾಗುತ್ತದೆ. ಸಂಚಿ ಇಲ್ಲಿ ಮ್ಯಾಂಗೋ ಪಚ್ಚನಾಗಿ ಡಿವಿಡಿ ಅಂಗಡಿ ಮಾಲೀಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 ಈ ಚಿತ್ರಕ್ಕೆ ಮೈಸೂರಿನ ವಿವೇಕ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಚಿತ್ರವಾಗಿದ್ದು, ಮೈಸೂರಿನಲ್ಲಿ 2001ರಿಂದ 2011ರವರೆಗೂ ನಡೆಯುವ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ.

 ‘ಮ್ಯಾಂಗೋ ಪಚ್ಚಿ’ ಚಿತ್ರದಲ್ಲಿ ಸಂಚಿಗೆ ನಾಯಕಿಯಾಗಿ ‘ಪೆಪೆ’ ಚಿತ್ರ ಖ್ಯಾತಿಯ ನಟಿ ಕಾಜಲ್ ಕುಂದರ್ (kajol kundhor) ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಮಯೂರ್ ಪಟೇಲ್, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜಯ್, ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ (Charan raaj) ಸಂಗೀತ, ಶೇಖರ್ ಚಂದ್ರ ಛಾಯಾಗ್ರಾಹಣವಿದೆ.

 ಈ ಚಿತ್ರವನ್ನು ಸುದೀಪ್‍ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಮತ್ತು KRG Studios ಜೊತೆಯಾಗಿ ನಿರ್ಮಿಸುತ್ತಿದೆ.

Leave a Reply

Your email address will not be published. Required fields are marked *