Kantara Chapter 1: ಕಾಂತಾರ 1ಕ್ಕೆ ಜಲ ಅವಾಂತರ; ಜೂನಿಯರ್‌‌ ಆರ್ಟಿಸ್ಟ್‌ ಸಾ*ವು

Kantara Chapter 1

ಕಾಂತಾರ ಸಿನಿಮಾ ಮಾಡಿದ ನಂತರ ರಿಷಬ್‌ ಶೆಟ್ಟಿ ಅವರ ಸ್ಟಾರ್‌ ಏನೋ ಬದಲಾಯಿತು. ಹಾಗೇ ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆಯೂ ಹೆಚ್ಚಿತು. ಕಾಂತಾರದ ಯಶಸ್ಸಿನ ಬೆನ್ನಲ್ಲೇ ಅದರ ಪ್ರಿಕ್ವೆಲ್‌ Kantara Chapter 1 ತೆಗೆಯುವುದಾಗಿ ರಿಷಬ್‌ ಪ್ರಕಟಿಸಿದ್ದರು. ಅದರಂತೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡರು.

ಆದರೆ ಎರಡನೇ ಚಿತ್ರ ನಿರ್ಮಾಣದ ವೇಳೆ ರಿಷಬ್‌ ಶೆಟ್ಟಿಗೆ ಮೇಲಿಂದ ಮೇಲೆ ತಡೆಗಳು ಬರತೊಡಗಿದವು. ಈ ಚಿತ್ರವನ್ನು ತೆಗೆಯುವ ಮುನ್ನವೇ ದೈವದ ಅಪ್ಪಣೆಯನ್ನು ರಿಷಬ್‌ ಪಡೆದಿದ್ದರು. ಇತ್ತೀಚೆಗೆ ದೈವವೊಂದು ರಿಷಬ್‌ಗೆ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಜೂನಿಯರ್ ಆರ್ಟಿಸ್ಟ್ ದಾರುಣವಾಗಿ ಸಾವನಪ್ಪಿದ್ದಾರೆ.

ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ (Kollur) ಈ ದುರ್ಘಟನೆ ಸಂಭವಿಸಿದೆ. ಕೊಲ್ಲೂರು ಸೌಪರ್ಣಿಕ ನದಿಯಲ್ಲಿ ಮುಳುಗಿ ಕಪಿಲ್ ಸಾವೀಗಿಡಾಗಿದ್ದಾರೆ.

ಕಾಂತಾರಕ್ಕೆ ಒಂದಲ್ಲ ಒಂದು ಗಂಡಾಂತರ:

ಈ ಹಿಂದೆ ಕೊಲ್ಲೂರಿನಲ್ಲೇ ಜೂನಿಯರ್ ಆರ್ಟಿಸ್ಟ್ ಗಳಿದ್ದ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬಳಿಕ ಗಾಳಿ ಮಳೆಗೆ ಬೃಹತ್ ಸೆಟ್ ಹಾರಿ ಹೋಗಿತ್ತು. ಈ ಬೆನ್ನಲ್ಲೇ ಜೂನಿಯರ್ ಆರ್ಟಿಸ್ಟ್ ದಾರುಣವಾಗಿ ಮೃತಪಟ್ಟಿದ್ದಾರೆ.

ನಿನ್ನೆ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೊಲ್ಲೂರು ಭಾಗದಲ್ಲಿ ಕಾಂತಾರ ಚಾಪ್ಟರ್‌‌ 1 ಶೂಟಿಂಗ್ ಆಗುತ್ತಿತ್ತು. ಶೂಟಿಂಗ್ ಮುಗಿಸಿ ಸೌಪರ್ಣಿಕ ನದಿಗೆ ಕಪಿಲ್ ಹಾಗು ತಂಡದವರು ಈಜಲು ಹೋಗಿದ್ದರು ಎನ್ನಲಾಗಿದೆ. ನೀರಿನ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “Kantara Chapter 1: ಕಾಂತಾರ 1ಕ್ಕೆ ಜಲ ಅವಾಂತರ; ಜೂನಿಯರ್‌‌ ಆರ್ಟಿಸ್ಟ್‌ ಸಾ*ವು

Leave a Reply

Your email address will not be published. Required fields are marked *