Marco: ಕನ್ನಡದಲ್ಲಿ ಬರ್ತಿದೆ ಮಾರ್ಕೊ; ಕನ್ನಡದಲ್ಲೇ ಪೋಸ್ಟ್ ಮಾಡಿ ಸುದ್ದಿ ತಿಳಿಸಿದ ಉನ್ನಿ ಮುಕುಂದನ್

ಮಲಯಾಳಂ ನಟ ಉನ್ನಿ ಮುಕುಂದನ್ (Unni Mukundan) ಅವರ ಮಾರ್ಕೊ ಸಿನಿಮಾ ಕನ್ನಡಕ್ಕೆ ಬರುತ್ತಿದೆ. ಈಗಾಗಲೇ ಯಾವುದೇ ಭಾರೀ ಪ್ರಚಾರ ಇಲ್ಲದೇ ಕೇವಲ ಬಾಯಿಮಾತಿನ ಮೂಲಕ ಮಾರ್ಕೊ ಯಶಸ್ಸು ಗಳಿಸಿದೆ. ಈ ಚಿತ್ರ 100 ಕೋಟಿ ಕ್ಲಬ್ ಕೂಡಾ ಸೇರಿದೆ.
ಮಾರ್ಕೊನ ಕನ್ನಡ ಅವತರಣಿಗೆ ಬಿಡುಗಡೆ ಆಗುವುದರ ಬಗ್ಗೆ ಸ್ವತಃ ನಟ ಉನ್ನಿ ಮುಕುಂದನ್ ತಮ್ಮ ಸಾಮಾಜಿಕ ಜಾತಲಾಣದಲ್ಲಿ ಕನ್ನಡಲ್ಲೇ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. “ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ! ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ ಪ್ರಶಂಶೆಗೊಳಗಾದ #ಮಾರ್ಕೋ ಸಿನಿಮಾ ಈಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ” ಎಂದು ಅವರು ಕ್ಯಾಪ್ಶನ್ ಬರೆದಿದ್ದಾರೆ.

ಹನೀಫ್ ಅದೇನಿ ನಿರ್ದೇಶಿಸಿದ ಮಲಯಾಳಂ ಚಲನಚಿತ್ರವು ಉನ್ನಿ ಮುಕುಂದನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮಲಯಾಳಂ ಸಿನಿಮಾ ಎಂಬ ಖ್ಯಾತಿಯೂ ಈಗ ಮಾರ್ಕೊ ಬೆನ್ನಿನಲ್ಲಿದೆ.
ಸಿನಿಮಾಕ್ಕೆ ವಿರೋಧ: –
100 ಕೋಟಿ ಕ್ಲಬ್ ಸೇರಿದರೂ, ಹಿಂದಿ ಹಾಗೂ ಇತರೆ ಭಾಷೆಯಲ್ಲಿ ಜನ ನೋಡಿ ಮೆಚ್ಚಿಕೊಂಡರೂ ಈ ಚಿತ್ರದಲ್ಲಿ ಬರುವ ಹಿಂಸಾತ್ಮಕ ದೃಶ್ಯಗಳ ಬಗ್ಗೆ ವಿರೋಧ ವ್ಯಕ್ತವಾಗಿದೆ. ಕೇರಳ ಮಾತ್ರವಲ್ಲದೇ ಬೇರೆ ಚಿತ್ರರಂಗದಲ್ಲೂ ಈ ಮಾತು ಕೇಳಿಬರುತ್ತಿದೆ. ಪ್ರೇಕ್ಷಕರು ಚಿತ್ರವು ಅನಿಮಲ್, ಕಿಲ್, ಕೆಜಿಎಫ್ ಸಿನಿಮಾಗಳಿಗಿಂತ ಹೆಚ್ಚು ರಕ್ತಸಿಕ್ತವಾಗಿದೆ ಎಂದು ಟೀಕಿಸಿದ್ದಾರೆ.
ಅದೇನೇ ಇದ್ದರೂ ಕೂಡಾ ಮಾರ್ಕೊ ಕಮರ್ಷಿಯಲ್ ಹಿಟ್ ಕೊಟ್ಟಿದೆ. ಈ ಕರ್ಷಿಯಲ್ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ಮಾರ್ಕೋದಲ್ಲಿ ಮಾರ್ಕೋ ಸಿದ್ದಿಕ್, ಜಗದೀಶ್, ಅಭಿಮನ್ಯು ಎಸ್ ತಿಲಕನ್ ಮತ್ತು ಕಬೀರ್ ದುಹಾನ್ ಸಿಂಗ್ ಬಣ್ಣಹಚ್ಚಿದ್ದಾರೆ. ಮಾರ್ಕೋ ಕಳೆದ ವರ್ಷ ಡಿಸೆಂಬರ್ 20 ರಂದು ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಯಿತು. ಜನವರಿ 1 ರಂದು ತೆಲುಗು ರಾಜ್ಯಗಳಲ್ಲಿ ತೆರೆಕಂಡಿತು. ಆರಂಭದಲ್ಲಿ 50 ಥಿಯೇಟರ್ಗಳಲ್ಲಿ ಬಿಡುಗಡೆ ಆದ ಸಿನಿಮಾ ನಂತರ 300 ಥಿಯೇಟರ್ಗಳನ್ನು ಬಾಚಿಕೊಂಡಿತು. ಸದ್ಯ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಚಿತ್ರ ಇದಾಗಿದೆ.