Gajarama; ಪೈಲ್ವಾನ್ ಅವತಾರದಲ್ಲಿ ಕಾಣಿಸಿಕೊಂಡ ರಾಜವರ್ಧನ್ …

Rajavardhan-Gajarama

ರಾಜವರ್ಧನ್‍ ನಾಯಕನಾಗಿ ಅಭಿನಯಿಸಿರುವ ‘ಗಜರಾಮ’ ಚಿತ್ರವು ಫೆಬ್ರವರಿ 07ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ರಾಜವರ್ಧನ್‍ ಪೈಲ್ವಾನ್‍ ಆಗಿ ಕಾಣಿಸಿಕೊಂಡಿದ್ದಾರೆ.

‘ಗಜರಾಮ’ (Gajarama) ಚಿತ್ರದ ಟ್ರೇಲರ್‍ ಆನಂದ್‍ ಆಡಿಯೋದಲ್ಲಿ ಬಿಡುಗಡೆಯಾಗಿದ್ದು, 2 ನಿಮಿಷ 46 ಸೆಕೆಂಡ್‍ಗಳ ಟ್ರೇಲರ್‌ನಲ್ಲಿ ಆಕ್ಷನ್, ಎಮೋಷನ್ ದೃಶ್ಯಗಳು ಗಮನ ಸೆಳೆಯುತ್ತಿವೆ. ರಾಜವರ್ಧನ್‌ ಕುಸ್ತಿಕಣದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದು, ಕಬೀರ್ ಸಿಂಗ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ‘ಶಿಷ್ಯ’ ದೀಪಕ್‍ ಅಭಿನಯಿಸಿದ್ದು, ತಪಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Gajarama
Gajarama

‘ಬಲದಲ್ಲಿ ಭೀಮ, ತಾಳ್ಮೆಯಲ್ಲಿ ರಾಮ, ಕೋಪದಲ್ಲಿ ವ್ಯಾಘ್ರನಿಗಿಂತ ಜಾಸ್ತಿ …’ ಎಂದು ಶರತ್‍ ಲೋಹಿತಾಶ್ವ ಅವರ ನಾಯಕನನ್ನು ಪರಿಚಯಿಸುವ ಮಾತುಗಳಿಂದ ಈ ಟ್ರೇಲರ್‍ ಆರಂಭವಾಗುತ್ತದೆ. ಈ ಚಿತ್ರದಲ್ಲಿ ರಾಜವರ್ಧನ್‍, ರಾಮ ಎಂಬ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನ ಪ್ರೇಮಕಥೆಯ ಜೊತೆಗೆ ಮಾನವ ಕಳ್ಳಸಾಗಣೆಯ ಕುರಿತಾದ ವಿಷಯಗಳೂ ಈ ಚಿತ್ರದಲ್ಲಿದೆ.

‘ಗಜರಾಮ’ ಸುಮಾರು ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ನಿರ್ಮಾಣ ಮಾಡಿದ್ದು, ಸುನೀಲ್‍ ಕುಮಾರ್‍ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣವಿದ್ದು, ರಾಜವರ್ಧನ್‍, ‘ಶಿಷ್ಯ’ ದೀಪಕ್‍, ತೇಜಸ್ವಿನಿ ಪೂಣಚ್ಚ, ಕಬೀರ್ ದುಹಾನ್‍ ಸಿಂಗ್‍, ವಿಜಯ್‍ ಚೆಂಡೂರು ಮುಂತಾದವರು ನಟಿಸಿದ್ದಾರೆ.

(Gajarama Trailer starring Rajavardan and Thapaswini Poonacha)

Leave a Reply

Your email address will not be published. Required fields are marked *