Kannada Holi Songs: ನಿಮ್ಮ ಕಾಮನ ಹಬ್ಬದ ಆಚರಣೆಗೆ ಇಲ್ಲಿದೆ ಹೋಳಿ ಹಬ್ಬದ ಸ್ಪೆಷಲ್‌ ಚಿತ್ರಗೀತೆಗಳು..!

ಕಪ್ಪು ಬಿಳುಪಿನ ಕಾಲದಲ್ಲೇ ಕಣ್ಣಿಗೆ ಬೆರಗಿನ ಚಿತ್ರವನ್ನು ಮೂಡಿಸಿದ್ದು ಬೆಳ್ಳಿ ಪರದೆ. ಅದಕ್ಕೆ ಚಿತ್ರರಂಗವನ್ನ ರಂಗಿನ ಪರದೆ, ಬಣ್ಣದ ಲೋಕ, ಕಲರ್‌ ಫುಲ್‌ ದುನಿಯಾ ಎಂತೆಲ್ಲಾ ಕರೆಯುತ್ತಾರೆ. ಈ ಕಲರ್‌ ಫುಲ್‌ ದುನಿಯಾದಲ್ಲಿ ಬಣ್ಣಗಳ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ಏಕೆಂದರೆ ಸಿನಿಮಾಗಳಲ್ಲಿ ಕಂಡುಬರುವ ಜಾತ್ರೆ, ಹಬ್ಬಗಳಲ್ಲಿ ಈ ಬಣ್ಣದ ಓಕುಳಿಯೂ ಒಂದು. ಹೀಗಾಗಿ ಬಣ್ಣಗಳ ಮೇಲೆ, ಹೋಳಿ ಹಬ್ಬದ ಕುರಿತು ಅನೇಕ ಗೀತೆಗಳನ್ನು ರಚಿಸಲಾಗಿದೆ. ಅಂತಹ ಸಿನಿಮಾ ಗೀತೆಗಳ ಪಟ್ಟಿ ಇಲ್ಲಿದೆ.. ಈ ಪಟ್ಟಿಯಲ್ಲಿ ಮಿಸ್‌ ಆದ ಗೀತೆ ನಿಮಗೆ ಗೊತ್ತಿದ್ದಲ್ಲಿ ಕಮೆಂಟ್‌ನಲ್ಲಿ ತಿಳಿಸಿ..

ಬಂಧನ – ‘ಬಣ್ಣ ನನ್ನ ಒಲಿವಿನ ಬಣ್ಣ’; ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ನಟನೆಯ ‘ಬಂಧನ’ ಸಿನಿಮಾ ಇಂದಿಗೂ ಎಲ್ಲರ ಫೆವರಿಟ್. ಆ ಸಿನಿಮಾದ ‘ಬಣ್ಣ ನನ್ನ ಒಲಿವಿನ ಬಣ್ಣ’ ಹಾಡು ನಿಮ್ಮ ಹೋಳಿ ಹಬ್ಬವನ್ನು ರಂಗೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಬಂಧನ ಸಿನಿಮಾ 32ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಹಾಗೇ ನಾಯಕ ವಿಷ್ಣುವರ್ಧನ್ ಮತ್ತು ಸಂಗೀತ ನಿರ್ದೇಶಕ ಎಂ. ರಂಗಾರಾವ್ ರವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.

ಈ ಬಂಧನ – ಬಣ್ಣ ಬಣ್ಣ: – 2007ರಲ್ಲಿ ವಿಷ್ಣುವರ್ಧನ್‌ ಮತ್ತು ಜಯಪ್ರದಾ ನಟಿಸಿದ ಈ ಬಂಧನ ಸಿನಿಮಾದಲ್ಲಿ ದರ್ಶನ್‌ ಮತ್ತು ಜೆನ್ನಿಫರ್ ಕೊತ್ವಾಲ್ ಪ್ರೀತಿಯ ಹಾಡು ಈ ಬಣ್ಣ ಬಣ್ಣ. ಕೌಟುಂಬಿಕ ಮಹತ್ವಗಳನ್ನು ಸಾರುವ ಈ ಚಿತ್ರ ಜನ ಮನ್ನಣೆಯನ್ನು ಪಡೆದಿತ್ತು.

ಪ್ರೀತ್ಸೆ – ‘ಹೋಳಿ ಹೋಳಿ’; ಹೋಳಿ ಎಂದಾಗ ಮೊದಲು ನೆನಪಿಗೆ ಬರುವ ಹಾಡು ಇದೇ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್‌ ಹಿರೋ ಶಿವಣ್ಣ ಹೋಳಿ ಆಚರಿಸುವ ಹಾಡಿದು. ಡಾ.ರಾಜೇಂದ್ರ ಬಾಬು ನಿರ್ದೇಶನದ ಶಿವರಾಜಕುಮಾರ್ ಜೊತೆ ಉಪೇಂದ್ರ, ಸೋನಾಲಿ ಬೇಂದ್ರೆ, ಅನಂತನಾಗ್ ನಟಿಸಿದ್ದರು. ರಾಕಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. 1993 ರಲ್ಲಿ ತೆರೆಕಂಡ ಹಿಂದಿ `ಡರ್’ ಚಿತ್ರದ ರೀಮೇಕ್ ಆಗಿತ್ತು.

ಪುಟ್ನಂಜ – ‘ರಂಗೇರೋ ಹೋಳಿ’; ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಿರ್ಮಿಸಿ, ನಾಯಕನಾಗಿ ನಟಿಸಿದ್ದ ಪುಟ್ನಂಜ ಸಿನಿಮಾ ‘ರಂಗೇರೋ ಹೋಳಿ’ ಹಾಡು ಕೂಡ ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸಲಿದೆ. ಈ ಸಿನಿಮಾದಲ್ಲಿ ತಮಿಳು ನಟಿ ಮೀನಾ ನಾಯಕಿಯಾಗಿ ನಟಿಸಿದ್ದರು. ರವಿಚಂದ್ರನ್ ಅವರ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಉಮಾಶ್ರೀ ಫಿಲ್ಮ್ ಪೇರ್ ಪ್ರಶಸ್ತಿ ಪಡೆದರು. ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತವಿತ್ತು.

ಲವ ಕುಶ – ‘ಕಾಮಣ್ಣನ ಮಕ್ಕಳು’: ಉಪೇಂದ್ರ ಹಾಗೂ ಶಿವರಾಜಕುಮಾರ್ ಅಭಿನಯದ ಲವ ಕುಶ ಸಿನಿಮಾದ ‘ಕಾಮಣ್ಣನ ಮಕ್ಕಳು’ ಹಾಡು ಕೂಡಾ ಹೋಳಿ ಹಬ್ಬವನ್ನು ಆಚರಿಸಲು ಉತ್ಸಾಹ ನೀಡುತ್ತದೆ.. ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಸಿನಿಮಾಗೆ ಗುರುಕಿರಣ್ ಸಂಗೀತ ನೀಡಿದ್ದರು.

ಚಮಕ್ – ‘ನೀ ನನ್ನ ಒಲವು’: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಚಮಕ್’ ಸಿನಿಮಾದ ‘ನೀ ನನ್ನ ಒಲವು’ ಹಾಡಿನಲ್ಲಿ ಕೂಡ ಹೋಳಿಯ ರಂಗಿದೆ. ಈ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು.

ಜಗವೇ ಬಣ್ಣ ಬಣ್ಣ (Jagave Banna Banna): ಡೈನಮಿಕ್‌ ಪ್ರಿನ್ಸ್‌ ಮಸ್ತ್‌ ಸ್ಟೆಪ್‌ ಹಾಕಿದ, ರಘು ದೀಕ್ಷಿತ್‌ ಕಂಠದಲ್ಲಿ ಮೂಡಿಬಂದ ಕೋಟೆ ಚಿತ್ರದ ಹಾಡು ಜಗವೇ ಬಣ್ಣ ಬಣ್ಣ. ವಿ ನಾಗ್ರೇಂದ್ರ ಪ್ರಸಾದ್‌ ಸಾಹಿತ್ಯದಲ್ಲಿ ಗೀತೆ ಇದೆ.

ಹೋಳಿಯಾಡು ಜಾಲಿ ಮಾಡು: ತರುಣ್‌ ಚಂದ್ರ ಮತ್ತು ರೇಖಾ ವೇದವ್ಯಾಸ್‌ ಅವರ ನಟನೆಯಲ್ಲಿ ಮೂಡಿಬಂದ ಮ್ಯೂಸಿಕಲ್‌ ಹಿಟ್‌ ಲವ್‌ ಸ್ಟೋರಿ ಪರಿಚಯದ ಹಾಡಿ ʻಹೋಳಿಯಾಡು ಜಾಲಿ ಮಾಡುʼ. ಈ ಚಿತ್ರದಲ್ಲಿ ಭೇಟಿಯಾಗದೇ ಪ್ರೀತಿಸುವ ಕಥೆಯ ಇದರಲ್ಲಿದೆ. 2009ರಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಕೆ ಸಂಜಯ್ ನಿರ್ದೇಶಿಸಿದ್ದಾರೆ ಮತ್ತು ಎಸ್‌.ಜಿ. ಕೃಷ್ಣ ಮೂರ್ತಿ ಬಂಡವಾಳ ಹೂಡಿದ್ದರು.

ಬಣ್ಣಗಳೆ ಬಣ್ಣಗಳೆ: ಭಾಮ ಸತ್ಯಭಾಮ ಚಿತ್ರದಲ್ಲಿ ʻಬಣ್ಣಗಳೆ ಬಣ್ಣಗಳೆʼ ಎಂಬ ಹಾಡಿದ್ದು, ಇದರಲ್ಲಿ ಬಣ್ಣಗಳ ಸಂಕೇತದ ಬಗ್ಗೆ ವಿವರಿಸಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಮತ್ತು ಎಸ್‌ ನಾರಾಯಣ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಎಸ್‌. ನಾರಾಯಣ್‌ ಅವರೇ ಬರೆದು, ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾದಲ್ಲಿ ಎಸ್‌. ನಾರಾಯಣ್‌ ಹಿನ್ನೆಲೆ ಗಾಯನವನ್ನು ಮಾಡಿರುವುದು ವಿಶೇಷ. ಬಣ್ಣಗಳೆ ಬಣ್ಣಗಳೆ ಹಾಡನ್ನು ಕಲಾ ಸಾಮ್ರಾಟ್‌ ಎಸ್‌. ನಾರಾಯಣ್‌ ಅವರೇ ಬರೆದಿದ್ದು, ಕೆ.ಎಸ್‌. ಚಿತ್ರ ಅವರ ದನಿಯನ್ನು ಗೀತೆ ಮೂಡಿಬಂದಿದೆ.

ಇವು ನಮ್ಮ ಪಟ್ಟಿಗೆ ಸಿಕ್ಕ ಹೋಳಿ ಹಬ್ಬದ ಹಾಡುಗಳು ನಿಮ್ಮ ನೆಚ್ಚಿನ ಬಣ್ಣದ ಹಾಡು ಯಾವುದು ಎಂಬುದನ್ನು ಕಮೆಂಟ್‌ ಮಾಡಿ..

(Holi celebration Kannada song)

Leave a Reply

Your email address will not be published. Required fields are marked *