‘Just Married’ ಟ್ರೇಲರ್ ಬಿಡುಗಡೆ; ಚಿತ್ರ ಆಗಸ್ಟ್ 22ರಂದು ತೆರೆಗೆ

ಅಲ್ಲಿ ಮದುವೆ ಮನೆ ವಾತಾವರಣ ನಿರ್ಮಾಣವಾಗಿತ್ತು. ಮುಂಭಾಗಲಿನಲ್ಲೇ ಮಂಗಳದ್ರವ್ಯಗಳನ್ನು ನೀಡಿ, ಮುತ್ತಿನ ಹಾರ ಹಾಕಿ ಬಂದ ಅತಿಥಿಗಳನ್ನು ಸ್ವಾಗತಿಸಲಾಯಿತು. ಹೆಣ್ಣುಮಕ್ಕಳು ಮೆಹಂದಿ ಹಾಕಿಸಿಸಕೊಂಡು ಸಂಭ್ರಮಿಸುತ್ತಿದ್ದದ್ದು ಅಲ್ಲಿ ಕಂಡು ಬಂತು. ಆದರೆ, ಅದು ಮದುವೆ ಮನೆಯಲ್ಲ. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.

abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ‘ಜಸ್ಟ್ ಮ್ಯಾರೀಡ್’ (Just Married) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ರಿಷಬ್ ಶೆಟ್ಟಿ ಆನ್ ಲೈನ್ ಮೂಲಕ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

‘ಜಸ್ಟ್ ಮ್ಯಾರೀಡ್‍’ ಚಿತ್ರದ ಮೂಲಕ ಅಜನೀಶ್‍ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಇದಕ್ಕೆ ಕಾರಣ ಹೇಳಿದ ಅವರು, ‘ನಾನು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗಿ ನಿಂತ ಸಿ.ಆರ್ ಬಾಬಿ ಅವರಿಗೆ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ನಾನು ಕೂಡ ಚಿತ್ರ ನಿರ್ದೇಶನ ಮಾಡಿ ಅಂತ ಹೇಳುತ್ತಿದ್ದೆ. ಆದರೆ, ಈಗ ಕಾಲ ಕೂಡಿ ಬಂದಿದೆ’ ಎಂದರು.

ನಿರ್ದೇಶನ ಮಾಡಬೇಕೆಂಬ ಬಾಬಿ ಅವರ ಹಲವು ವರ್ಷಗಳ ಕನಸಂಗೆ. ‘ಬಹು ತಾರಾಬಳಗವಿರುವ ನಮ್ಮ ಚಿತ್ರದ ಚಿತ್ರೀಕರಣ ನಿಗದಿತ ಯೋಜನೆಗೂ ಮೂರು ದಿನಗಳ ಮುಂಚೆ ಪೂರ್ಣವಾಗಿದೆ. ಅದಕ್ಕೆ ಕಾರಣ‌ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರ. ಅದರಲ್ಲೂ ಛಾಯಾಗ್ರಾಹಕ ಪಿ.ಜಿ ಅವರು ಮುಖ್ಯ ಕಾರಣ. ನಿರ್ಮಾಪಕ ಅಜನೀಶ್ ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ’ ಎಂದರು.

‘ಕಾಂತಾರ’ ಬಿಡುಗಡೆಯಾದ ಸ್ವಲ್ಪ ಸಮಯದಲ್ಲಿ ಅವರಿಂದ ಶೈನ್‍ಗೆ ಫೋನ್‍ ಬಂದಿತಂತೆ. ‘ನಾನೊಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನೀವು ನಾಯಕನಾಗಿ ನಟಿಸಬೇಕು ಎಂದರು. ಆನಂತರ ಸಿ‌.ಆರ್.ಬಾಬಿ ಹಾಗೂ ಅಜನೀಶ್ ಅವರು ಈ ಚಿತ್ರದ ಕಥೆ ಹೇಳಿದರು. ನನಗಂತೂ ಕಥೆ ಬಹಳ ಇಷ್ಟವಾಯಿತು. ನಂತರ ಚಿತ್ರೀಕರಣ ಪ್ರಾರಂಭವಾಯ್ತು. ಚಿತ್ರದಲ್ಲಿ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ಇಂತಹ ಹಿರಿಯರೊಡನೆ ನಟಿಸಿದ್ದು ಬಹಳ ಖುಷಿಯ ವಿಚಾರ’ ಎಂದರು ಶೈನ್ ಶೆಟ್ಟಿ.     

ಅಂಕಿತ ಅಮರ್ ಸಹ ಇದೇ ವಿಷಯವನ್ನು ಹೇಳಿದರು. ‘ಇದು ನನ್ನ ಎರಡನೇ ಚಿತ್ರ. ಎರಡನೇ ಚಿತ್ರದಲ್ಲೇ ಇಂತಹ ಮಹಾನ್ ತಾರೆಗಳ ಜೊತೆಗೆ ನಟಿಸುವ ಅವಕಾಶ ಒದಗಿ ಬಂತು‌ ಎಂದರು.

ಈ ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿವೆ. ಚಿತ್ರ ವೀಕ್ಷಣೆ ಮಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ವಿ.ಕೆ ಫಿಲಂಸ್ ಮೂಲಕ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಆಗಸ್ಟ್ 22ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಶ‍್ರುತಿ, ಮಾಳವಿಕಾ ಅವಿನಾಶ್‍, ಶ್ರೀಮಾನ್, ವಾಣಿ ಹರಿಕೃಷ್ಣ, ಅಭಿನವ್, ವೇದಿಕಾ, ನೃತ್ಯ ನಿರ್ದೇಶಕಿ ಶಾಂತಿ ಮಾಸ್ಟರ್, ಜಸ್ಕರಣ್ ಸಿಂಗ್ ಮುಂತಾದವರು ಹಾಜರಿದ್ದರು.


ಇದನ್ನೂ ಓದಿ :-


ಹೆಚ್ಚಿನ ಓದಿಗಾಗಿ :-


One thought on “‘Just Married’ ಟ್ರೇಲರ್ ಬಿಡುಗಡೆ; ಚಿತ್ರ ಆಗಸ್ಟ್ 22ರಂದು ತೆರೆಗೆ

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!