ಈ ದಿನದಂದು ಬಿಡುಗಡೆಯಾಗಲಿದೆ #NTRNeel ಜೋಡಿಯ ಹೊಸ ಚಿತ್ರ

jr ntr and prashanth neel combination movie

ಕಳೆದ ವಾರವಷ್ಟೇ Jr NTR ಬಂದು ಮಂಗಳೂರಿನಲ್ಲಿ ಚಿತ್ರತಂಡ ಸೇರಿಕೊಳ್ಳುವುದರ ಜೊತೆಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ #NTRNeel ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಬಿಡುಗಡೆಯ ದಿನಾಂಕ ಸಹ ಘೋಷಣೆಯಾಗಿದೆ.

ತೆಲುಗಿನ ಜನಪ್ರಿಯ ನಟ Jr NTR ಅಭಿನಯದಲ್ಲಿ ಪ್ರಶಾಂತ್‍ ನೀಲ್‍ ನಿರ್ದೇಶನದ ಹೊಸ ಚಿತ್ರದ ತಂಡದಿಂದ ಒಂದು ಮಹತ್ವದ ವಿಷಯ ಹೊರಬಿದ್ದಿದೆ. ಚಿತ್ರವು 2026ರ ಜೂನ್‍ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಅಲ್ಲಿಗೆ ಇನ್ನೊಂದು ವರ್ಷ ಪ್ರಶಾಂತ್‍ ನೀಲ್‍ ಈ ಚಿತ್ರದ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಿಡುಗಡೆಯ ನಂತರ ‘ಸಲಾರ್ 2’ ಅಥವಾ ‘ಕೆಜಿಎಫ್‍ 3’ ಚಿತ್ರವು ಬಿಡುಗಡೆಯಾಗಲಿದೆ.

ಸದ್ಯಕ್ಕೆ #NTRNeel ಎಂದು ಕರೆಯಲಾಗುತ್ತಿರುವ ಈ ಹೊಸ ಚಿತ್ರದ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ಚಿತ್ರಕ್ಕೆ ‘ಡ್ರ್ಯಾಗನ್‍’ ಎಂಬ ಹೆಸರು ಇಡುವ ಸಾಧ್ಯತೆ ಇದೆ ಎಂಬ ವಿಷಯ ಸಹ ಕೇಳಿಬರುತ್ತಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು NTR ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿಕೃಷ್ಣ ಕೊಸರಾಜು ನಿರ್ಮಿಸುತ್ತಿದ್ದಾರೆ.

Jr NTR ತಮ್ಮ ಹುಟ್ಟುಹಬ್ಬವನ್ನು ಇದೇ ಮೇ 20ರಂದು ಆಚರಿಸಿಕೊಳ್ಳುತ್ತಿದ್ದು, ಅಂದು ಚಿತ್ರದ ಮೊದಲ ನೋಟ ಅಥವಾ ಟೀಸರ್‌ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಚಿತ್ರವು ತೆಲುಗಿನಲ್ಲಿ ನಿರ್ಮಾಣವಾಗುತ್ತಿದ್ದು, ಕನ್ನಡ, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್‍ ಆಗಿ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

ಈ ಚಿತ್ರದಲ್ಲಿ ಸಾಕಷ್ಟು ಕನ್ನಡಿಗರು ಕೆಲಸ ಮಾಡುತ್ತಿರುವುದು ವಿಶೇಷ. ಪ್ರಶಾಂತ್‍ ನೀಲ್‍ ತಂಡದ ಖಾಯಂ ಸದಸ್ಯರಾದ ಛಾಯಾಗ್ರಾಹಕ ಭುವನ್‍ ಗೌಡ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ಇಲ್ಲೂ ಮುಂದುವರೆಯಲಿದ್ದಾರೆ. ಜೊತೆಗೆ ಈ ಬಾರಿ ರುಕ್ಮಿಣಿ ವಸಂತ್‍ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “ಈ ದಿನದಂದು ಬಿಡುಗಡೆಯಾಗಲಿದೆ #NTRNeel ಜೋಡಿಯ ಹೊಸ ಚಿತ್ರ

Leave a Reply

Your email address will not be published. Required fields are marked *