Jhonty Son of Jayaraj: ಅಮ್ಮನ ಬಗ್ಗೆ ‘ಜೋಗಿ’ ಪ್ರೇಮ್ ಇನ್ನೊಂದು ಹಾಡು …
 
			ಅಮ್ಮನ ಹಾಡುಗಳಿಗೆ ‘ಜೋಗಿ’ ಪ್ರೇಮ್ (Jogi Prem) ಬಹಳ ಜನಪ್ರಿಯರು. ಈ ಹಿಂದೆ ‘ಎಕ್ಸ್ಕ್ಯೂಸ್ ಮೀ’ (Excuse Me) ಚಿತ್ರದ ‘ಬ್ರಹ್ಮ ವಿಷ್ಣು ಶಿವ …’, (Brahma Vishnu Shiva) ‘ಜೋಗಿ’ (Jogi) ಚಿತ್ರದ ‘ಕೇಳುವೆನು ವರವನ್ನು ಕೊಡೆ ತಾಯಿ ಜನ್ಮವನು …’ ಮುಂತಾದ ಹಾಡುಗಳನ್ನು ಹಾಡಿದ್ದರು. ಇದೀಗ ಅವರು ತಾಯಿ ಕುರಿತು ಇನ್ನೊಂದು ಹಾಡನ್ನು ಹಾಡಿದ್ದಾರೆ.
‘ಜಾಂಟಿ ಸನ್ ಆಫ್ ಜಯರಾಜ್’ (Jhonty Son of Jayaraj) ಚಿತ್ರದಲ್ಲಿ ಬರುವ `ಲೋಕದ ಮೂಲ ಬ್ರಹ್ಮನಂತೆ, ಪ್ರೀತಿಯ ಮೂಲ ಅಮ್ಮನಂತೆ, ಅಮ್ಮ ಕ್ಷಮಿಸು …’ ಎನ್ನುವ ಹಾಡಿಗೆ ‘ಜೋಗಿ’ ಪ್ರೇಮ್ ಧ್ವನಿಯಾಗಿದ್ದು, ಆ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡನ್ನು ನಿರ್ದೇಶಕ ಯೋಗರಾಜ್ ಭಟ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಬಿಡುಗಡೆ ಮಾಡಿದರು.
ಈ ಚಿತ್ರಕ್ಕೆ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಆನಂದರಾಜ್ ಮಾತನಾಡಿ, ‘ಅಮ್ಮನ ಗೀತೆಗೆ ಪಲ್ಲವಿ ಬರೆದು ರಾಗ ಸಂಯೋಜಿಸಲು ವಿಜೇತ್ ಮಂಜಯ್ಯ ಅವರಿಗೆ ಕಳುಹಿಸಿದೆ. ಅವರು ಟ್ಯೂನ್ ಸಿದ್ದಪಡಿಸಿದ್ದನ್ನು ಕೇಳಿ, ಖಂಡಿತ ಹಿಟ್ ಆಗುತ್ತೆ ಅಂತ ಹೇಳಿದೆ. ರಸ್ತೆ ಇನ್ನಿತರ ಸ್ಥಳಗಳಲ್ಲಿ ತಪ್ಪು ಮಾಡಿದರೆ ತಕ್ಷಣವೆ ಸಾರಿ ಕೇಳುತ್ತೇವೆ. ಆದರೆ ಹೆತ್ತು, ಹೊತ್ತು ಬೆಳೆಸಿದ ಅಮ್ಮನ ಬಳಿ ಕ್ಷಮಿಸು ಅಂತ ಕೇಳೋದಿಲ್ಲ. ನಮ್ಮ ಸಿನಿಮಾ ಮೂಲಕ ಎಲ್ಲಾ ತಾಯಂದರಿಗೂ ಸಾರಿ ಅಂತ ಕೇಳುತ್ತೇವೆ. ಇದು ಸಿನಿಮಾದ ಕ್ಲೈಮಾಕ್ಸ್‌ದಲ್ಲಿ ಬರುತ್ತದೆ. ಮಗ ತಾಯಿ ಆಸೆಪಟ್ಟಂತೆ ಸಮಾಜದಲ್ಲಿ ಬದುಕದೆ, ತನ್ನದೇ ಹಾದಿಯಲ್ಲಿ ಸಾಗುತ್ತಾನೆ. ಕೊನೆಗೆ ಅಮ್ಮನೇ ಸರ್ವಸ್ವ ಎಂದು ತಿಳಿದಾಗ ಹಿನ್ನಲೆಯಲ್ಲಿ ಹಾಡು ಬರುತ್ತದೆ. ಕೆಲವು ಗಾಯಕರಿಗೆ ಅವರದೇ ಆದ ಧ್ವನಿ ಇರುತ್ತದೆ. ನಮ್ಮ ‘ಜೋಗಿ’ ಪ್ರೇಮ್ ಸರ್ ಒಳಗೆ ತಾಯಿ ಇದ್ದಾಳೆ. ಅದಕ್ಕೆ ಅಮ್ಮನ ಕುರಿತಾಗಿ ಅವರು ಹಾಡಿದ ಗೀತೆಗಳು ಇಂದಿಗೂ ಆಲಿಸುವಂತಗಿದೆ’ ಎಂದರು.



ಯೋಗರಾಜ್ ಭಟ್ ಮಾತನಾಡಿ, ‘ಬದುಕಲ್ಲಿ ನಾವು ಏನೇ ತಪ್ಪು ಮಾಡಿದರೂ ಕ್ಷಮಿಸುವಂತಹ ಗುಣ ಇರೋದು ತಾಯಿಗೆ ಮಾತ್ರ. ಇಂತಹ ವಿಷಯವನ್ನು ಇಟ್ಟುಕೊಂಡು ಸಾಹಿತ್ಯ ರಚಿಸಿದ ಆನಂದರಾಜ್, ಸಂಗೀತ ಸಂಯೋಜಕ ಮತ್ತು ಧ್ವನಿ ನೀಡಿದ ಪ್ರೇಮ್‌ಗೆ ನನ್ನ ಕಡೆಯಿಂದ ವೈಯಕ್ತಿಕ ಅಭಿನಂದನೆಗಳು’ ಎಂದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ ಹೇಳುವಂತೆ, ‘ನಾವು ಎಲ್ಲವನ್ನೂ ಅಮ್ಮನಿಂದ ಮಾಡಿಸಿಕೊಳ್ಳುತ್ತೇವೆ. ಆದರೆ, ಥ್ಯಾಂಕ್ಸ್ ಹೇಳೋದನ್ನು ಮರೆಯುತ್ತೇವೆ. ಈ ನಿಟ್ಟಿನಲ್ಲಿ ಈ ಗೀತೆ ಮನಮುಟ್ಟುವಂತಿದೆ’ ಎಂದರು.
‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದಲ್ಲಿ ಅಜಿತ್ ಜಯರಾಜ್, ನಿವಿಷ್ಕಾ ಪಟೇಲ್, ರಾಜವರ್ಧನ್, ಶರತ್ ಲೋಹಿತಾಶ್ವ, ಕಿಶನ್, ಸೋನು ಪಾಟೀಲ್, ಸಚಿನ್ ಪುರೋಹಿತ್, ಮೈಕೋ ನಾಗರಾಜ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಪ್ರಚಾರ ಕಾರ್ಯದಲ್ಲಿ ಅನುಭವ ಹೊಂದಿರುವ ಸುಗೂರು ಕುಮಾರ್ ಪ್ರಥಮ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:-
‘Jhonty Son of Jayaraj’ is an upcoming Kannada film that has garnered attention for its unique premise and emotional depth. Directed by Anand Raj, the film features Ajith Jayaraj, son of the late Bengaluru underworld figure MP Jayaraj, in the lead role. Ajith portrays a dual character: ‘Jhonty’, a fictional persona, and his real-life father, MP Jayaraj. He expressed his enthusiasm about playing his father’s role on screen, stating, “I play two shades—Jhonty, a scripted character, and I am glad that I get to play my father Jayaraj on screen. That’s the highlight, with room for a Chapter 2.” 
The film’s first song, ‘Lokada Moola Brahmanante, Preetiya Moola Ammanante’, was recently released and has been well-received for its emotional resonance. The song, composed by Vijetha Manjaiah with lyrics by Anand Raj, emphasizes the significance of a mother’s love and has struck a chord with audiences. 
‘Jhonty Son of Jayaraj’ is backed by debut producer Suguru Kumar and features a cast that includes Rajavardhan, Sharath Lohitashwa, and Nivishka Patil. The film is set in Bengaluru and promises a narrative filled with action, emotion, and familial ties. 
- ಹೊಂಬಾಳೆ ಫಿಲ್ಮ್ಸ್ನಿಂದ ದೀಪಾವಳಿಯ ಶುಭಾಶಯ: Kantara Chapter 1 ಅದ್ಭುತ ಟ್ರೈಲರ್ ಬಿಡುಗಡೆ!
- ಮಾಸ್ ಅವತಾರದಲ್ಲಿ Antony Pepe : ಸಖತ್ ಕಿಕ್ ಕೊಡುವ ‘ಕಟ್ಟಾಳನ್’ ಫಸ್ಟ್ ಲುಕ್ ರಿಲೀಸ್!
- ನೂತನ ಚಿತ್ರದ ಮಾಹಿತಿ ನೀಡಿದ ನಿರ್ಮಾಪಕಿ( Pushpa Arun Kumar) ಪುಷ್ಪ ಅರುಣ್ ಕುಮಾರ್
- Biggboss season 12 : ಬಿಗ್ ಸರ್ಪ್ರೈಸ್ ಸ್ಪರ್ಧಿಗಳ ಎಂಟ್ರಿ, ಅಸಲಿ ಆಟ ಶುರು …….
- ಅವತಾರ್ನ fire and ash 2ನೇ ಟ್ರೇಲರ್ ಫುಲ್ ವೈರಲ್
- Hey! Would you mind if I share your blog with my facebook group? There’s a lot of folks that I… 
- Всё по теме по ссылке: https://samaraonline24.ru/interesnoe/view/udalenie-volos-v-spb-lazernaa-epilacia-sugaring-elektroepilacia 
- Hi there! This is my first visit to your blog! We are a collection of volunteers and starting a new… 
- Today, I went to the beachfront with my kids. I found a sea shell and gave it to my 4… 
- Greetings! Very useful advice within this post! It’s the little changes that make the largest changes. Thanks a lot for… 


 
                                             
                                             
                                             
                                            
 
				 
				 
				 
				 
				

2 thoughts on “Jhonty Son of Jayaraj: ಅಮ್ಮನ ಬಗ್ಗೆ ‘ಜೋಗಿ’ ಪ್ರೇಮ್ ಇನ್ನೊಂದು ಹಾಡು …”