ನಿರ್ಮಾಣಕ್ಕಿಳಿದ Raja Vardan; JAWA ಚೊಚ್ಚಲ ಚಿತ್ರ

ಬಾರ್ನ್ ಸ್ವಾಲೋ ಕಂಪನಿ ಎಂಬ ಹೆಸರಿನ ಸಂಸ್ಥೆಯಿಂದ JAWA ಚೊಚ್ಚಲ ಚಿತ್ರವನ್ನು ರಾಜವರ್ಧನ್‍ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ‘ಬಿಚ್ಚುಗತ್ತಿ’, ‘ಹಿರಣ್ಯ’, ‘ಗಜರಾಮ’ ಚಿತ್ರಗಳ ಮೂಲಕ ನಾಯಕನಾಗಿ ಮಿಂಚಿದ್ದರು.

ಎರಡು ವರ್ಷಗಳ ಹಿಂದೆ ರಾಜವರ್ಧನ್‍ ಹಂಚಿಕೊಂಡಿದ್ದ ಕನಸು ಈಗ ನನಸಾಗಿದೆ ಎಂದೇ ಹೇಳಬಹುದು. ಬೆನ್ನು ಬೆನ್ನು ಚಿತ್ರಗಳಲ್ಲಿ ಅಭಿನಯಿಸಿದ್ದರಿಂದ ನಿರ್ಮಾಣ ಸಂಸ್ಥೆ ಸ್ವಲ್ಪ ನಿಧಾನವಾಗಿ ಆರಂಭವಾಗಿದೆ. ರಾಜವರ್ಧನ್‍ ತಮ್ಮ ನಿರ್ಮಾಣ ಸಂಸ್ಥೆ ಸಿನಿಮಾ ಮಾಡುದರ ಬಗ್ಗೆ ಪ್ರಕಟಿಸಿದ್ದಾರೆ.

ತಮ್ಮ ಬಾರ್ನ್ ಸ್ವಾಲೋ ಕಂಪನಿ ಅಡಿ ‘ಜಾವಾ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ದೇವ ಚಕ್ರವರ್ತಿ (ಚಕ್ರವರ್ತಿ ಚಂದ್ರಚೂಡ್‍) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಾಜವರ್ಧನ್‍ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ಚಿತ್ರದ ಕುರಿತು ಮಾತನಾಡುವ ರಾಜವರ್ಧನ್‍, ‘ನಟನೆ ಜೊತೆಗೆ ಬೇರೆ ಏನಾದರೂ ಮಾಡಬೇಕು ಎಂಬ ಆಸೆಯಿಂದ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದೇನೆ. ಚಕ್ರವರ್ತಿ, ಎರಡು ವರ್ಷಗಳ ಹಿಂದೆ ಒಂದು ಕಾಡುವ ಕಥೆ ಹೇಳಿದ್ದರು. 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ಒಂದು ಘಟನೆ ಆಧಾರಿಸಿ ಈ ಚಿತ್ರ ಮಾಡುತ್ತಿದ್ದೇವೆ. ಈ ಘಟನೆ ಬಗಗ್ಗೆ ಚಿತ್ರರಂಗದಲ್ಲೇ ಎಷ್ಟೋ ಜನರಿಗ ಗೊತ್ತಿಲ್ಲ. ಹೊರಗಿನವರಿಗಂತೂ ತೀರಾ ಹೊಸದು’ಎಂದರು.

ರಾಜವರ್ಧನ್‍ಗೆ ದೇವ ಚಕ್ರವರ್ತಿ ಎರಡು ಕಥೆ ಹೇಳಿದ್ದರಂತೆ. ‘ರಾಜ್‍ ಎರಡೂ ಕಥೆಗಳು ತಮಗೇ ಬೇಕು ಎಂದು ಹೇಳಿದರು. ಆ ಪೈಕಿ ಇದು ಮೊದಲು ಚಿತ್ರ ಮಾಡಬೇಕು ಎಂದು ತೀರ್ಮಾನವಾಯಿತು. ನಾಯಕಿ ಪಾತ್ರಕ್ಕೆ ಯಾರು ಸೂಕ್ತ ಎಂದು ಯೋಚಿಸಿದಾಗ, ನೆನಪಿಗೆ ಬಂದವರು ರಾಗಿಣಿ. ಅವರು ಇಂಥಾ ಪಾತ್ರ ಮಾಡುತ್ತಾರಾ? ಎಂಬ ಗೊಂದಲವಿತ್ತು. ಅವರಿಗೆ ಕಥೆ ಹೇಳಿದಾಗ, ‘ನನ್ನಿಂದ ಸ್ಫೂರ್ತಿ ಪಡೆದು ಕಥೆ ಬರೆದಿದ್ದೀರಾ’ ಎಂದರು. ಇದು ಚಿತ್ರರಂಗದಲ್ಲಿ ನಡೆಯುವ ಹಳವಂಡದ ಕಥೆ. ಒಬ್ಬ ಸಾಮಾನ್ಯ ಯುವಕನ ದೃಷ್ಟಿಯಲ್ಲಿ ಹೇಳಲಾಗುತ್ತದೆ’ ಎಂದರು.

ಕಳೆದ 15 ವರ್ಷಗಳಲ್ಲಿ ಸಾಕಷ್ಟು ಏಳು-ಬೀಳುಗಳನ್ನು ನೋಡಿರುವುದಾಗಿ ಹೇಳುವ ರಾಗಿಣಿ, ‘ಎಲ್ಲಾ ಆಯಾಮಗಳನ್ನು ನೋಡಿದ್ದೇನೆ. ಈ ವರ್ಷ ನನ್ನ ಪಾಲಿಗೆ ವಿಶೇಷ ವರ್ಷ. ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಅದರಲ್ಲಿ ಇದೂ ಸಹ ಒಂದು’ ಎಂದರು.

ರಾಗಿಣಿ ದ್ವಿವೇದಿ ಇದೇ ಮೇ 24ಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅಂದು ಚಿತ್ರತಂಡದಿಂದ ಏನೋ ವಿಶೇಷವಾದದ್ದು ಬಿಡುಗಡೆಯಾಗಲಿದೆಯಂತೆ. ಈ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಪ್ರಾರಂಭವಾಗಲಿದೆ.

ಇದನ್ನೂ ಓದಿ:-


ಹೆಚ್ಚಿನ ಓದು:-

2 thoughts on “ನಿರ್ಮಾಣಕ್ಕಿಳಿದ Raja Vardan; JAWA ಚೊಚ್ಚಲ ಚಿತ್ರ

Leave a Reply

Your email address will not be published. Required fields are marked *