‘ಜಾಕಿ 42’ ಚಿತ್ರಕ್ಕೆ Hrithika Srinivas ನಾಯಕಿ

ನಿರ್ದೇಶಕ ಮಹೇಶ್ ಬಾಬು ಅವರಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ನಟಿ ಎಂದರೆ ಅದು ಹೃತಿಕಾ ಶ್ರೀನಿವಾಸ್ (Hrithika Srinivas). ಎರಡ್ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಅಪರೂಪ’ ಚಿತ್ರದ ಮೂಲಕ ಹೃತಿಕಾ ಶ್ರೀನಿವಾಸ್, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ ಕಳೆದ ವರ್ಷ ಬಿಡುಗಡೆಯಾದ ‘ಔಟ್ ಆಫ್ ಸಿಲಬಸ್’ ಮತ್ತು ಬಿಡುಗಡೆಯಾಗಬೇಕಿರುವ ಪೃಥ್ವಿ ಶಾಮನೂರು ಅಭಿನಯದ ‘ಉಡಾಳ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.
ಈಗ್ಯಾಕೆ ಹೃತಿಕಾ ವಿಷಯ ಎಂದರೆ, ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ‘ಜಾಕಿ 42’ ಚಿತ್ರಕ್ಕೆ ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ತೆಲುಗು ಚಿತ್ರವೊಂದರಲ್ಲೂ ಅವರು ನಟಿಸುತ್ತಿದ್ದು, ಸದ್ಯದಲ್ಲೇ ‘ಜಾಕಿ 42’ ಚಿತ್ರ ತಂಡ ಸೇರಿಕೊಳ್ಳಲಿದ್ದಾರೆ.
‘ಜಾಕಿ 42’ ಕುದುರೆ ಸವಾರಿ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಭಾರತಿ ಸತ್ಯನಾರಾಯಣ ಈ ಚಿತ್ರ ನಿರ್ಮಿಸುತ್ತಿದ್ದಾರೆ. ತೆಲುಗು ಹಾಗೂ ತಮಿಳಿನ ಜನಪ್ರಿಯ ಚಿತ್ರಗಳಿಗೆ ಸಂಗೀತ ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ವಿನೋದ್ ಯಜಮಾನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಕುದುರೆ ರೇಸ್ ಭಾಗದ ಚಿತ್ರೀಕರಣ ನೆಡೆಯುತ್ತಿದೆ.

ಈ ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಕಿರಣ್ ರಾಜ್ ಮತ್ತು ಗುರುತೇಜ್ ಜೊತೆಯಾಟದ ಮೂರನೆಯ ಚಿತ್ರ ಇದು. ಇದಕ್ಕೂ ಮೊದಲು ಕಿರಣ್ ರಾಜ್ ಅಭಿನಯದ ‘ಬಡ್ಡೀಸ್’ ಮತ್ತು ‘ರಾನಿ’ ಚಿತ್ರಗಳನ್ನು ಗುರುತೇಜ್ ನಿರ್ದೇಶನ ಮಾಡಿದ್ದರು. ಆದರೆ, ಎರಡೂ ಚಿತ್ರಗಳು ದೊಡ್ಡ ಸದ್ದನ್ನೇನೂ ಮಾಡಲಿಲ್ಲ. ಈಗ ವಿಭಿನ್ನ ಚಿತ್ರಕಥೆಯೊಂದಿಗೆ ಕಿರಣ್ ಮತ್ತು ಗುರುತೇಜ್, ‘ಜಾಕಿ 42’ ಚಿತ್ರದ ಮೂಲಕ ಬರುತ್ತಿದ್ದಾರೆ.
‘ಜಾಕಿ 42’ ಚಿತ್ರವು ಕನ್ನಡದ ಮೊದಲ ಕುದುರೆ ರೇಸ್ ಕುರಿತಾದ ಚಿತ್ರ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
It is a pity, that I can not participate in discussion now. I do not own the necessary information. But…
One thought on “‘ಜಾಕಿ 42’ ಚಿತ್ರಕ್ಕೆ Hrithika Srinivas ನಾಯಕಿ”