Prabhas ಆಯ್ತು, ಈಗ Hrithik Roshan ಅಭಿನಯದಲ್ಲಿ Hombale Films ಚಿತ್ರ ನಿರ್ಮಾಣ

ರಿಷಭ್ ಶೆಟ್ಟಿ (Rishabh Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ಹೊರತುಪಡಿಸಿದರೆ, ಹೊಂಬಾಳೆ ಫಿಲಂಸ್ (Hombale Films) ಯಾವುದೇ ಹೊಸ ಚಿತ್ರವನ್ನು ಶುರು ಮಾಡಿಲ್ಲ. ಪ್ರಭಾಸ್ (Prabhas) ಅಭಿನಯದ ಮೂರು ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆಯಾದರೂ, ಆ ಯಾವುದೇ ಚಿತ್ರಗಳು ಇನ್ನೂ ಶುರುವಾಗಿಲ್ಲ.
ಹೀಗಿರುವಾಲೇ, ಹೊಂಬಾಳೆ ಫಿಲಂಸ್ ಸಂಸ್ಥೆಯು ಬಾಲಿವುಡ್ ನಟ ಹೃತಿಕ್ ರೋಶನ್ (Hrithik Roshan) ಅಭಿನಯದಲ್ಲಿ ಪ್ಯಾನ್ ಇಂಡಿಯಾ (Pan India) ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದೆ. ಈ ಸಂಬಂಧ, ಬುಧವಾರ ಸೋಷಿಯಲ್ ಮೀಡಿಯಾದಲ್ಲಿ ಹೃತಿಕ್ ರೋಶನ್ ಅಭಿನಯದಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಘೋಷಿಸಿದೆ.

ಹೊಂಬಾಳೆ ಫಿಲಂಸ್ ಸಂಸ್ಥೆಯು ಕನ್ನಡವಲ್ಲದೆ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳನ್ನು ನಿರ್ಮಿಸಿತ್ತು. ಹಿಂದಿಯಲ್ಲೂ ಚಿತ್ರ ನಿರ್ಮಿಸುವುದಾಗಿ ಹೇಳಿತ್ತು. ಆದರೆ, ಯಾವೊಂದು ಚಿತ್ರವನ್ನೂ ನಿರ್ಮಿಸಿರಲಿಲ್ಲ. ಈಗ ಹೃತಿಕ್ ರೋಶನ್ ಅಭಿನಯದ ಚಿತ್ರದ ಜೊತೆಗೆ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಬಾಲಿವುಡ್‍ಗೆ ಕಾಲಿಟ್ಟಿದೆ. ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೆ, ಯಾರು ನಿರ್ದೇಶನ ಮಾಡುತ್ತಾರೆ ಎಂಬ ಮಾಹಿತಿಗಳು ಇನ್ನಷ್‍ಟೇ ಹೊರಬೀಳಬೇಕಿದೆ.

ಹೃತಿಕ್ ರೋಶನ್ ಅಭಿನಯದ ‘ವಾರ್ 2’ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಇದಲ್ಲದೆ ‘ಕ್ರಿಶ್ 4’ ಚಿತ್ರದಲ್ಲೂ ಹೃತಿಕ್ ರೋಶನ್ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಈ ಚಿತ್ರವನ್ನು ಅವರೇ ನಿರ್ದೇಶಿಸುತ್ತಿರುವ ಮಾಹಿತಿ ಇದೆ. ಈ ಚಿತ್ರ ಇದೇ ವರ್ಷ ಪ್ರಾರಂಭವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ :-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
It is a pity, that I can not participate in discussion now. I do not own the necessary information. But…
One thought on “Prabhas ಆಯ್ತು, ಈಗ Hrithik Roshan ಅಭಿನಯದಲ್ಲಿ Hombale Films ಚಿತ್ರ ನಿರ್ಮಾಣ”