Horror Film; ‘ಬ್ಲಿಂಕ್‍’ ನಂತರ ಶ್ರೀನಿಧಿ ಹೊಸ ಪ್ರಯೋಗ; ಈ ಬಾರಿ ಹಾರರ್ ಚಿತ್ರ

‘ಬ್ಲಿಂಕ್‍’ (Blink) ಚಿತ್ರದ ನಂತರ ನಿರ್ದೇಶಕ ಶ್ರೀನಿಧಿ ಬೆಂಗಳೂರು (Srinidhi Bengaluru) ಮತ್ತು ನಟ ದೀಕ್ಷಿತ್‍ ಶೆಟ್ಟಿ (Dheekshith Shetty) ಮತ್ತೆ ಜೊತೆಯಾಗಿದ್ದಾರೆ. ಈ ಬಾರಿ ಈ ಜೋಡಿ ಹಾರರ್‌ ಚಿತ್ರವೊಂದನ್ನು ಮಾಡುತ್ತಿದ್ದು, ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ.

ಹಾರರ್‌ ಚಿತ್ರಗಳಲ್ಲೇ Found Footage ಎಂಬ ಶೈಲಿಯೂ ಒಂದು. ಒಂದು ಸ್ಥಳದಲ್ಲಿ ನಡೆಯುವ ಒಂದಿಷ್ಟು ಚಿತ್ರವಿಚಿತ್ರ ಘಟನೆಗಳನ್ನು ಒಂದು ಕ್ಯಾಮೆರಾ ಮೂಲಕ ಹೇಳುವ ಪ್ರಯತ್ನವೇ ಈ Found Footage. ಈ ತರಹದ ಚಿತ್ರಗಳ ಸಾಲಿನಲ್ಲಿ ಕನ್ನಡದಲ್ಲಿ ಬಂದ ‘6-5=2’ ಚಿತ್ರ ಸಹ ಒಂದು. ‘6-5=2’ ನಂತರ ಯಾರೂ ಈ ತರಹದ್ದೊಂದು ಪ್ರಯತ್ನ ಮಾಡಿರಲಿಲ್ಲ. ಈಗ ಅದೇ ಶೈಲಿಯ ಇನ್ನೊಂದು ಪ್ರಯತ್ನ ಮಾಡುತ್ತಿದ್ದಾರೆ ಶ್ರೀನಿಧಿ ಬೆಂಗಳೂರು. ಒಂದು ಹಾಂಟೆಡ್‍ ಸ್ಥಳಕ್ಕೆ ವ್ಲಾಗರ್‌ ಹೋದಾಗ, ಅಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರ ಹೇಳುತ್ತದಂತೆ.

ಈ ಹೊಸ ಚಿತ್ರದ ಚಿತ್ರೀಕರಣ ಕಳೆದ ಡಿಸೆಂಬರ್‌ನಲ್ಲೇ ಪ್ರಾರಂಭವಾಗಿದ್ದು, ಎರಡು ಹಂತಗಳ ಚಿತ್ರೀಕರಣ ಸಹ ಮುಗಿದಿದೆಯಂತೆ. ಈ ಚಿತ್ರಕ್ಕೆ ಐದಾರು ಕ್ಯಾಮೆರಾಗಳನ್ನು ಸತತವಾಗಿ ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ. ಇಲ್ಲಿ ಕಲಾವಿದರ ಜೊತೆಗೆ ಕ್ಯಾಮೆರಾ ಸಹ ಪ್ರಮುಖ ಪಾತ್ರ ವಹಿಸಲಿದೆಯಂತೆ.

‘ಬ್ಲಿಂಕ್‍’ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಇಲ್ಲೂ ಕೆಲಸ ಮಾಡಲಿದೆಯಂತೆ. ಆ ಚಿತ್ರವನ್ನು ರವಿಚಂದ್ರ ನಿರ್ಮಿಸಿದ್ದರು. ಈ ಚಿತ್ರಕ್ಕೆ ಅವರೊಬ್ಬರು ಬದಲಾಗಿದ್ದು, ಮಿಕ್ಕಂತೆ ‘ಬ್ಲಿಂಕ್‍’ ಚಿತ್ರಕ್ಕೆ ಕೆಲಸ ಮಾಡಿದ ಛಾಯಾಗ್ರಾಹಕ ಅವಿನಾಶ್‍ ಶಾಸ್ತ್ರಿ, ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್‌ ಮುಂತಾದ ತಂತ್ರಜ್ಞರೇ ಇಲ್ಲೂ ಮುಂದುವರೆಯಲಿದ್ದಾರೆ.

ಆ ಚಿತ್ರದಲ್ಲಿ ನಾಯಕನಾಗಿದ್ದ ದೀಕ್ಷಿತ್‍ ಶೆಟ್ಟಿ, ಇಲ್ಲೂ ನಾಯಕನಾಗಿದ್ದು, ಜೊತೆಗೆ ಐವರು ಹೊಸ ನಟ-ನಟಿಯರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಕಿ ಉಳಿದಿರುವ ಚಿತ್ರೀಕರಣ ಬೇಗ ಮುಗಿಸಿ, ಮುಂದಿನ ಕೆಲವು ತಿಂಗಳುಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದು ಶ್ರೀನಿಧಿ ಯೋಚನೆ. ಈ ಚಿತ್ರದ ಹೆಸರು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟೀಸರ್‌ನಲ್ಲೇ ಚಿತ್ರದ ಹೆಸರು ಸಹ ಘೋಷಣೆಯಾಗಲಿದೆ.


(After the movie Blink, director Srinidhi Bengaluru and actor Dheekshith Shetty are teaming up once again. This time, the duo is working on a horror film, which is set to release this year.

In the horror genre, there is a style called Found Footage. This style involves narrating a series of strange incidents happening in a particular place through the perspective of a camera. The Kannada film 6-5=2 was one such example of a found footage movie. After 6-5=2, no one attempted this style in Kannada cinema. Now, Srinidhi Bengaluru is making another attempt in the same style.

The film revolves around a vlogger who visits a haunted location and experiences a series of eerie and mysterious events. The movie aims to showcase what happens to the vlogger in this terrifying journey.)

Leave a Reply

Your email address will not be published. Required fields are marked *