HIT: The 3rd Case Teaser; ನಾನಿಯ ʻಅರ್ಜುನ್ ಸರ್ಕಾರ್ʼ ಲುಕ್ ಹೀಗಿದೆ..!

ಹಿಟ್ 2 ಸಿನಿಮಾದ ಕೊನೆಯಲ್ಲಿ ನಾನಿ ಬಂದು ಮೂರನೇ ಕೇಸ್ ತೆಗೆದುಕೊಳ್ಳುವುದಾಗಿ ಹೇಳಿ ಹೋಗುತ್ತಾರೆ. ಅಲ್ಲಿಂದ ಆರಂಭವಾದ ಕುತೂಹಲಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ನಾನಿ ಅವರ ಬರ್ತ್‌ಡೇಗೆ ಹಿಟ್ 3 ಸಿನಿಮಾ ತಂಡ ಕೆಣಕು ನೋಟವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ತಿಳಿಸಿದೆ. ನಾನಿ ಫ್ಯಾನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ ಜಾನರ್ ಸಿನಿಮಾ ಪ್ರೇಮಿಗಳಿಗೇ ಇದು ಸಂತಸದ ಸುದ್ದಿ.
ಹಿಟ್ 1 ಚಿತ್ರದಲ್ಲಿ ವಿಶ್ವಕ್ಸೇನ್, ಹಿಟ್ 2 ನಲ್ಲಿ ಅಡವಿ ಶೇಶ್ ನಟಿಸಿದ್ದರು. ಹಿಟ್ 3 ರಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಶೈಲೇಶ್ ಕೊಳನೂ ನಿರ್ದೇಶನದ ಕ್ರೈಮ್ ಮತ್ತು ಆಕ್ಷನ್ ಥ್ರಿಲ್ಲರ್ ಇದು. ಚಿತ್ರವನ್ನು ವಾಲ್ ಪೋಸ್ಟರ್ ಸಿನಿಮಾ ಮತ್ತು ಯುನಾನಿಮಸ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಕಳೆದೆರಡು ಚಿತ್ರದಂತೆ ಈ ಸಿನಿಮಾದಲ್ಲೂ ಸೀರಿಯಲ್ ಕಿಲ್ಲರ್ ಒಬ್ಬನನ್ನು ಭೇದಿಸುವ ಕಥೆ ಇದೆ. ಹಾಯ್ ನನ್ನ, ಜಂಟಲ್‌ಮನ್, ದಸರಾ ಹೀಗೇ ಬೇರೆ ಬೇರೆ ಶೈಲಿಯ ಕಾಣಿಸಿಕೊಂಡಿದ್ದ ನಾನಿ, ಇಲ್ಲಿ ಖಡಕ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಪಾತ್ರಕ್ಕೆ ʻಅರ್ಜುನ್ ಸರ್ಕಾರ್ʼ ಎಂಬ ಹೆಸರು ಕೊಡಲಾಗಿದೆ. ನಾನಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ಛಾಯಾಗ್ರಹಣ, ಮಿಕ್ಕಿ ಜೆ ಮೇಯರ್ ಸಂಗೀತ, ಕಾರ್ತಿಕಾ ಶ್ರೀನಿವಾಸ್ ಆರ್ ಸಂಕಲನ ಈ ಚಿತ್ರಕ್ಕಿದೆ. ಹಿಟ್ 3 ಮೇ 1, 2025 ರಂದು ತೆರೆಗೆ ಬರಲಿದೆ.