‘ಹೆಬ್ಬುಲಿ’ಯಿಂದ ಪ್ರೇರಣೆಗೊಂಡ ‘Hebbuli Cut’; ಟ್ರೇಲರ್ ಬಿಡುಗಡೆ

ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳು ಸೇರಿ ಮಾಡಿರುವ ‘ಹೆಬ್ಬುಲಿ ಕಟ್’ (Hebbuli Cut) ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಸತೀಶ್ ನೀನಾಸಂ ಬೆಂಬಲದಿಂದ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ನವೀಶ್ ಶಂಕರ್ ಹಾಗೂ ಸತೀಶ್ ನೀನಾಸಂ ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿರುವ ಸತೀಶ್ ನೀನಾಸಂ, ‘ನಾನು ಚಿತ್ರ ನೋಡಿದ್ದೇನೆ. ಮೊದಲ ಬಾರಿಗೆ ಪೂರ್ಣಚಂದ್ರ ತೇಜಸ್ವಿ ಫೋನ್ ಮಾಡಿ ‘ಹೆಬ್ಬುಲಿ ಕಟ್’ ಚಿತ್ರವನ್ನು ನೋಡಿ ಬೆಂಬಲಿಸಿ ಎಂದರು. ಸಿನಿಮಾ ಬಹಳ ಸೆಳೆಯಿತು. ಕೊನೆಯ 20 ನಿಮಿಷ ಉಸಿರಾಡಲು ಕಷ್ಟವಾಯಿತು. ಸಿನಿಮಾ ಅಲ್ಲಿಗೆ ತೆಗೆದುಕೊಂಡು ಹೋಯಿತು. ಭಯ, ತಳಮಳ ಶುರುವಾಯ್ತು. ಜನ ಈ ರೀತಿ ಸಿನಿಮಾ ಹೇಗೆ ಸ್ವೀಕಾರ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ರೀಲ್ಸ್, ಗಲಾಟೆ, ಯುದ್ಧ ಮಧ್ಯೆ ಒಂದು ಅಪರೂಪದ ಸಿನಿಮಾ ಬಂದಿದೆ. ಚಿತ್ರ ಗೆಲ್ಲಬೇಕು ಎಂದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕು. ಈ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ’ ಎಂದರು.

2017ರಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದಿಂದ, ‘ಹೆಬ್ಬುಲಿ ಕಟ್’ ಚಿತ್ರ ಸ್ಫೂರ್ತಿಗೊಂಡಿರುವ. ಆ ಚಿತ್ರದಲ್ಲಿ ಸುದೀಪ್ ವಿಭಿನ್ನ ಹೇರ್ ಕಟ್ ಮಾಡಿಸಿಕೊಂಡಿದ್ದರು. ಅದು ‘ಹೆಬ್ಬುಲಿ ಕಟ್’ ಎಂದೇ ನಂತರದ ದಿನಗಳಲ್ಲಿ ಜನಪ್ರಿಯವಾಯಿತು. ಅದು ಟ್ರೆಂಡ್ ಆಗಿ, ಬಹಳಷ್ಟ ಜನ ಅದೇ ತರಹ ಹೇರ್ ಸ್ಟೈಲ್ ಮಾಡಿಸಿದರು. ಈ ಚಿತ್ರವು ‘ಹೆಬ್ಬುಲಿ ಕಟ್’ ಕೇಶವಿನ್ಯಾಸದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಸುದೀಪ್ ಅವರ ಜನಪ್ರಿಯತೆಯಿಂದ ಪ್ರೇರಿತವಾದ ಒಬ್ಬ ಅಭಿಮಾನಿಯ ಜೀವನದ ಸವಾಲುಗಳನ್ನು ಈ ಚಿತ್ರ ಭಾವನಾತ್ಮಕವಾಗಿ ಚಿತ್ರಿಸುತ್ತದೆ.
ರಾಯಚೂರು ಮೂಲದ ಭೀಮರಾವ್ ಪೈದೊಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ನೀನಾಸಂ ಸತೀಶ್ ಜೊತೆಗೆ ಒಂದಷ್ಟು ನೂರು ಜನ ನೋಡಿ ಚಿತ್ರ ಮೆಚ್ಚಿಕೊಂಡಿದ್ದಾರೆ. ಚಿತ್ರ ನೋಡಿದ ಮೇಲೆ ಕಣ್ಣೀರು ಬರಬಹುದು. ಇದು ನೈಜ ಘಟನೆಯಾಧಾರಿತ ಸಿನಿಮಾ. ಸುದೀಪ್ ಅವರನ್ನು ಚಿತ್ರದಲ್ಲಿ ಐಕಾನ್ ಆಗಿ ತೋರಿಸಿದ್ದೇವೆ’ ಎಂದರು.
ನಟ ಸತೀಶ್ ನೀನಾಸಂ ಈ ಚಿತ್ರವನ್ನು ಮೆಚ್ಚಿ, ತಮ್ಮ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್‌ನಡಿ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಮಹಾದೇವ ಹಡಪದ, ಉಮಾ ವೈ.ಜಿ, ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ, ಪುನೀತ್ ಶೆಟ್ಟಿ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ದೀಪಕ್ ಯರಗೇರಾ ಛಾಯಾಗ್ರಹಣ ಮತ್ತು ನವನೀತ್ ಶ್ಯಾಮ್ ಸಂಗೀತವಿದೆ.

ಹೆಚ್ಚಿನ ಓದಿಗೆ:-
anabolic research tren 75 References: pad.geolab.space
also en ingles References: https://sparktv.net/post/878956_https-maps-google-com-sl-url-q-https-rentry-co-r8w6u78i-https-postheaven-net-fle.html
set-mining.website – I found forums raising red flags about similar domain names.
Anavar, also known by its generic name oxandrolone, has long been a staple for female athletes and bodybuilders seeking to…
dianabol pills for sale References: http://humanlove.stream
One thought on “‘ಹೆಬ್ಬುಲಿ’ಯಿಂದ ಪ್ರೇರಣೆಗೊಂಡ ‘Hebbuli Cut’; ಟ್ರೇಲರ್ ಬಿಡುಗಡೆ”