Harshika Poonacha directorial debut Chi: Soujanya; ನಿರ್ದೇಶನಕ್ಕಿಳಿದ ಹರ್ಷಿಕಾ ಪೂಣಚ್ಚ; ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಚಿ: ಸೌಜನ್ಯ

  • ನಿರ್ದೇಶನಕ್ಕಿಳಿದ ಹರ್ಷಿಕಾ ಪೂಣಚ್ಚ
  • ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಚಿ: ಸೌಜನ್ಯ
  • ಚಿ: ಸೌಜನ್ಯ ಚಿತ್ರದ ಪೋಸ್ಟರ್‌ ಬಿಡುಗಡೆ


ಹರ್ಷಿಕಾ ಪೂಣಚ್ಚ (Harshika Poonacha) ನಿರ್ದೇಶನದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಂಬ್ಯಾಕ್‌ ಮಾಡುತ್ತಿದ್ದಾರೆ. ‘ಚಿ: ಸೌಜನ್ಯ’ (Chi: Soujanya) ಒಂದು ಹೆಣ್ಣಿನ ಕಷ್ಟದ ಕಥೆ ಎಂಬ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಕಾಲ್ಪನಿಕ ಕಥೆಯೊಂದನ್ನು ಹೇಳಹೊರಟಿದ್ದಾರೆ. ಪೋಸ್ಟರ್‌ನಲ್ಲಿ ಸಿನಿಮಾದ ಒಂದು ಸಾಲನ್ನು ಹೇಳುವಂತೆ ಮಾಡಲಾಗಿದೆ.

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ, ‘ಹೊಸ ಆರಂಭಗಳು, ನನ್ನ ಮೊದಲ ನಿರ್ದೇಶನದ ಡೆಬ್ಯೂಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು’ ಎಂದು ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಹರ್ಷಿಕಾ ಪತಿ, ನಟ ಭುವನ್‌ ಪೊನ್ನಣ್ಣ (Bhuvann Ponnannaa) ಹಾಗೂ ಮಧು ಸ್ವಾಮಿ ಮತ್ತು ಗಣೇಶ್‌ ಮಹದೇವ್‌ ಅವರು ಬಂಡವಾಳ ಹೂಡುತ್ತಿದ್ದಾರೆ. ಕಂಸಾಳೆ ಫಿಲ್ಮ್ಸ್‌ ಮತ್ತು ಭುವನಂ ಎಂಟರ್‌ಟೈನ್‌ಮೆಂಟ್‌ ಅಡಿಯಲ್ಲಿ ಈ ಸಿನಿಮಾ ಮೂಡಿ ಬರಲಿದೆ.

‘ಚಿ: ಸೌಜನ್ಯ ಚಿತ್ರದಲ್ಲಿ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಆಗಿ ಬಿಗ್‌ಬಾಸ್ ಖ್ಯಾತಿಯ ಉಗ್ರಂ ಮಂಜು ಮತ್ತು ಕಾಕ್ರೋಚ್‌ ಸುಧಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಸುವ ಸಾಧ್ಯತೆ ಇದೆ.

ಹರ್ಷಿಕಾ ಬಾಳಲ್ಲಿ ಇತ್ತೀಚೆಗೆ ಸಾಕಷ್ಟು ಖುಷಿಯ ವಿಚಾರಗಳು ನಡೆದಿವೆ. 2023ರಲ್ಲಿ ಇವರು ಭುವನ್ ಪೊನ್ನಣ್ಣ ಅವರನ್ನು ಮದುವೆ ಆದರು. ಆ ಬಳಿಕ ಅವರಿಗೆ ಮಗು ಜನಿಸಿದೆ. ಈಗ ಅವರು ನಿರ್ದೇಶನಕ್ಕೆ ಇಳಿಯುವ ಘೋಷಣೆ ಮಾಡಿದ್ದಾರೆ. ಈ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.

(Popular Sandalwood actress Harshika Poonacha is making her directorial debut with the film Chi: Soujanya. The film’s title and official poster have been released, marking her comeback to the industry after marriage and motherhood.

Actor Kishore plays the lead role, while Ugram Manju and Cockroach Sudhi will be seen as the antagonists. Chi: Soujanya is produced by Bhuvan Ponnanna, Madhu Kansale Films, and Ganesh Mahadev.)

Leave a Reply

Your email address will not be published. Required fields are marked *